Time Traveller Alert! ಡಿಸೆಂಬರ್ 25ರಂದು ಸಂಭವಿಸಲಿರುವ ಈ ಘಟನೆಯಿಂದ ವಿಶ್ವವೇ ಬದಲಾಗಲಿದೆಯಂತೆ!

Time Traveller Alert! ಟೈಮ್ ಟ್ರಾವೆಲರ್ ಈ ಬಾರಿಯ ಕ್ರಿಸ್‌ಮಸ್‌ ಸಂಭ್ರಮಾಚರಣೆಯ ವೇಳೆ ಬಹು ದೊಡ್ಡ  ಘಟನೆ ಸಂಭವಿಸಲಿದೆ ಎಂದು ಹೇಳಿದ್ದು, ಈ ಘಟನೆ ಇಡೀ ಜಗತ್ತನ್ನೇ ಅಚ್ಚರಿಗೊಳಿಸಲಿದೆ ಎಂದಿದ್ದಾನೆ. ಈ ಘಟನೆಯು ಮಾನವ ಜೀವನವನ್ನು ಶಾಶ್ವತವಾಗಿ ಬದಲಾಯಿಸಲಿದೆ ಎಂದು ಆ ವ್ಯಕ್ತಿ ಹೇಳಿದ್ದಾನೆ.

Written by - Nitin Tabib | Last Updated : Dec 6, 2021, 05:30 PM IST
  • ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗಪಡಿಸಿದ ಟೈಮ್ ಟ್ರ್ಯಾವಲರ್
  • 8 ಜನರಿಗೆ ಸುಪರ್ ಪವರ್ ಸಿಗಲಿದೆಯಿಂದ.
  • ಇದರಿಂದ ಡಿಸೆಂಬರ್ 25ರಂದು ಇಡೀ ಜಗತ್ತೇ ಬದಲಾಗಲಿದೆಯಂತೆ.
Time Traveller Alert! ಡಿಸೆಂಬರ್ 25ರಂದು ಸಂಭವಿಸಲಿರುವ ಈ ಘಟನೆಯಿಂದ ವಿಶ್ವವೇ ಬದಲಾಗಲಿದೆಯಂತೆ! title=
Time Traveller Alert (File Photo)

ನವದೆಹಲಿ: Time Traveller Alert! ಟೈಮ್ ಟ್ರಾವೆಲರ್ ಎಂದು ತನ್ನನ್ನು ತಾನು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ತಿಂಗಳಾಂತ್ಯದಲ್ಲಿ (December) ಇಡೀ ಜಗತ್ತನ್ನೇ ಬದಲಾಯಿಸುವ ಎರಡು ಘಟನೆಗಳನ್ನು ನಡೆಯಲಿವೆ ಎಂದು ಹೇಳಿಕೊಂಡಿದ್ದಾರೆ. ಈ ಘಟನೆಗಳು 2021 ರ ಕ್ರಿಸ್‌ಮಸ್‌ನಲ್ಲಿ (Christmas) ನಡೆಯಲಿದ್ದು, ಅವು ಮಾನವ ಜೀವನವನ್ನೇ ಶಾಶ್ವತವಾಗಿ ಬದಲಾಯಿಸಲಿವೆ ಎಂದು ಆ ವ್ಯಕ್ತಿ ಹೇಳಿದ್ದಾರೆ. ಅಲ್ಲದೇ ಈ ಘಟನೆಗಳಿಂದ ಇಡೀ ವಿಶ್ವವೇ ಬೆಚ್ಚಿ ಬೀಳಲಿದೆ ಎಂದೂ ಕೂಡ ಅವರು ಹೇಳಿದ್ದಾರೆ. 

ಈ ಘಟನೆ ಜಗತ್ತನ್ನೇ ಬೆಚ್ಚಿ ಬೀಳಿಸಲಿದೆ (Latest Prediction)
'ದಿ ಸನ್' ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ತನ್ನನ್ನು ತಾನು ಟ್ರಿಮ್ ಟ್ರಾವೆಲರ್ ಎಂದು ಬಣ್ಣಿಸಿಕೊಳ್ಳುವ ವ್ಯಕ್ತಿಯು ತನ್ನ ಇತ್ತೀಚಿನ ಭವಿಷ್ಯವಾಣಿಯಲ್ಲಿ 2021 ರಲ್ಲಿ, ಸಂಭವಿಸುವ ಎರಡು ಘಟನೆಗಳಿಂದ ಇಡೀ ಜಗತ್ತು ಬೆಚ್ಚಿಬೀಳುತ್ತದೆ (Shock The World) ಮತ್ತು ಅದು ಸಂಪೂರ್ಣ ಬದಲಾಗಲಿದೆ ಎಂದಿದ್ದಾರೆ. ಈ ಘಟನೆಗಳಿಂದ ಮಾನವ ನಾಗರಿಕತೆಯ ಇತಿಹಾಸ ಬದಲಾಗಲಿದೆ ಎಂದು ಅವರು ಹೇಳಿದ್ದಾರೆ. ಈ ಹಿಂದೆ, ಅಟ್ಲಾಂಟಿಕ್ ಸಾಗರದಲ್ಲಿ ವಿಶಿಷ್ಟ ಆವಿಷ್ಕಾರವನ್ನು ಪ್ರತಿಪಾದಿಸುವ ಮೂಲಕ ಸಮಯ ಪಯಣಿಗ (Time Traveller) ಭಾರಿ ಸುದ್ದಿಯನ್ನೇ ಮಾಡಿದ್ದರು. 

ಈ ಬಾರಿ ವ್ಯಕ್ತಿ ಯಾವುದೇ ಪುರಾವೆಗಳಿಲ್ಲದೆ ಜಗತ್ತನ್ನು ಬದಲಾಯಿಸುವ ಎರಡು ದಿನಾಂಕಗಳನ್ನು ಘೋಷಿಸಿದ್ದಾರೆ. ಅವರ ಇತ್ತೀಚಿನ ಪೋಸ್ಟ್‌ನಲ್ಲಿ, ಡಿಸೆಂಬರ್ 20 ರಂದು 8 ಮನುಷ್ಯರು ಸೂರ್ಯನಿಂದ (Sun) ಸೂಪರ್ ಪವರ್ (Superpowers) ಪಡೆಯುತ್ತಾರೆ ಎಂದು ಅವರು ಹೇಳಿದ್ದಾರೆ. ಇದರ ಜೊತೆಗೆ ಡಿಸೆಂಬರ್ 25 ರಂದು ಕ್ರಿಸ್‌ಮಸ್‌ನಲ್ಲಿ (Christmas Day)ಮತ್ತೊಂದು ದೊಡ್ಡ ಘಟನೆ ನಡೆಯುವ ಕುರಿತು ಅವರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ-Knowledge Story: ಭೂಮಿಯ ಮೇಲೆ ನೀರು ಎಲ್ಲಿಂದ ಬಂತು ನಿಮಗೆ ಗೊತ್ತಾ? ಇಲ್ಲಿದೆ ವಿಜ್ಞಾನಿಗಳ ಉತ್ತರ

ಡಿಸೆಂಬರ್ 25 ರಂದು ಏನಾದರೂ ವಿಶಿಷ್ಟವಾದ ಘಟನೆ ನಡೆಯಲಿದೆ
ಕ್ರಿಸ್‌ಮಸ್‌ನಲ್ಲಿ ಏನಾದರೂ ವಿಶಿಷ್ಟ ಘಟನೆ ನಡೆಯಲಿದೆ ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾನೆ ಈ ಘಟನೆ ಇಡೀ ಜಗತ್ತನ್ನೇ ಆಶ್ಚರ್ಯಗೊಳಿಸುತ್ತದೆ. ಈ ಘಟನೆಯು ಮಾನವ ಜೀವನವನ್ನು (Human Lives) ಶಾಶ್ವತವಾಗಿ ಬದಲಾಯಿಸುತ್ತದೆ. ಈ ಘಟನೆಯು ಮುಂದಿನ ಶತಮಾನಗಳವರೆಗೆ ಜಗತ್ತಿನ ಸ್ಮರಣೆಯಲ್ಲಿ ಉಳಿಯಲಿದೆ ಎಂದು ಆತ ಹೇಳಿದ್ದಾನೆ. ಇದಲ್ಲದೆ ಈ ಘಟನೆಗಳಿಂದ ನಾನೊಬ್ಬ ರಿಯಲ್ ಟೈಮ್ ಟ್ರಾವೆಲರ್ (Great Discovery) ಎಂಬುದು ಸಾಬೀತಾಗುತ್ತದೆ, ಹೀಗಾಗಿ ಯಾರೂ ಈ ದಿನಾಂಕಗಳನ್ನು (Important Dates) ಮರೆಯಬಾರದು ಎಂದು ಆತ ಹೇಳಿದ್ದಾನೆ.

ಇದನ್ನೂ ಓದಿ-World's first living robots: ವಿಶ್ವದ ಮೊದಲ "Living robots"ಈಗ ಸಂತಾನೋತ್ಪತ್ತಿ ಮಾಡಬಹುದು: ಅಚ್ಚರಿ ತಂದ ವಿಜ್ಞಾನಿಗಳ ಹೇಳಿಕೆ

ಈ ಪೋಸ್ಟ್ ನಂತರ, ಜನರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡಲು ಆರಂಭಿಸಿದ್ದಾರೆ. 'ಇದು ಸಂಪೂರ್ಣ ಸತ್ಯ ಏಕೆಂದರೆ ಡಿಸೆಂಬರ್ 25 ರಂದು ನಮ್ಮೆಲ್ಲರ ಜೀವದಾತನ ಜನ್ಮದಿನವಾಗಿದೆ' ಎಂದು ಒಬ್ಬರು ಹೇಳಿದ್ದಾನೆ. ಇದಲ್ಲದೇ ಪ್ರತಿ ವರ್ಷ ಹೇಗಿದ್ದರೂ ಕುಟುಂಬಸ್ಥರು, ಸ್ನೇಹಿತರು ಸೇರಿ ಕ್ರಿಸ್‌ಮಸ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ ಎಂದು ಮತ್ತೊಬ್ಬರು ತಮಾಷೆಯಾಗಿ ಹೇಳಿದ್ದಾರೆ. ಆದರೆ  ಈ ವ್ಯಕ್ತಿಯ ಹಕ್ಕನ್ನು ನಿಜವೆಂದು ಸ್ವೀಕರಿಸಲು ಸಿದ್ಧರಾಗಿರುವ ಕೆಲವೇ ಜನರಿದ್ದರು ಎನ್ನಲಾಗಿದೆ.

ಇದನ್ನೂ ಓದಿ-Earth's Atmosphere: ನಿತ್ಯ ಒಮ್ಮೆಯಾದರು ಪರಸ್ಪರ ಎದುರಾಗುತ್ತಿವೆ ಭೂಮಿ ಮತ್ತು ಬಾಹ್ಯಾಕಾಶ, ಈ ವಿಚಿತ್ರ ಘಟನೆಗೆ NASA ಕೂಡ ದಿಗ್ಭ್ರಮೆ ವ್ಯಕ್ತಪಡಸಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News