ನಾಲ್ವರು ಎಂಪಿಗಳನ್ನು ಅಮಾನತುಗೊಳಿಸಿದ ಸ್ಪೀಕರ್ ಸುಮಿತ್ರಾ ಮಹಾಜನ್
ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಸೋಮವಾರದಂದು ಮತ್ತೊಮ್ಮೆ ನಾಲ್ಕು ಟಿಡಿಪಿ ಮತ್ತು ಎಐಎಡಿಎಂಕೆಗಳನ್ನು ಎರಡು ಅವಧಿಗೆ ಸದನದ ಹಾಜರಿಯಿಂದ ಅಮಾನತುಗೊಳಿಸಿದ್ದಾರೆ.
ನವದೆಹಲಿ: ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಸೋಮವಾರದಂದು ಮತ್ತೊಮ್ಮೆ ನಾಲ್ಕು ಟಿಡಿಪಿ ಮತ್ತು ಎಐಎಡಿಎಂಕೆಗಳನ್ನು ಎರಡು ಅವಧಿಗೆ ಸದನದ ಹಾಜರಿಯಿಂದ ಅಮಾನತುಗೊಳಿಸಿದ್ದಾರೆ.
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಮತ್ತು ಕರ್ನಾಟಕದ ಕಾವೇರಿ ನದಿಯ ಮೇಲೆ ಪ್ರಸ್ತಾಪಿತ ಅಣೆಕಟ್ಟಿನ ವಿರುದ್ಧ ಘೋಷಣೆಗಳನ್ನು ಸ್ಪೀಕರ್ ವೇದಿಕೆಯ ಬಳಿ ಎರಡು ಪಕ್ಷಗಳ ಸದಸ್ಯರು ಕೂಗುತ್ತಿದ್ದರು. ಇದರಿಂದ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಮಧ್ಯಾಹ್ನದ ವರೆಗೆ ಸದನವನ್ನು ಸ್ಪೀಕರ್ ಮುಂದೂಡಿದ್ದರಿಂದ ಪ್ರಶ್ನೆ ವೇಳೆಯವರೆಗೂ ಸದನ ನಡೆಯಲಿಲ್ಲ.ಸದನ ನಡೆದಾಗಲೆಲ್ಲ ಸದಸ್ಯರು ಸದನಕ್ಕೆ ಅಡ್ಡಿ ಪಡಿಸುತ್ತಿದ್ದರಿಂದ ಸ್ಪೀಕರ್ ಸುಮಿತ್ರಾ ಮಹಾಜನ್ ಎಚ್ಚರಿಕೆ ನೀಡಿದರು ನಂತರ ಎಐಎಡಿಎಂಕೆ ನಾಯಕ ಪಿ. ವೇಣುಗೋಪಾಲ್ ಮತ್ತು ಟಿಡಿಪಿ ನ ಎನ್. ಶಿವಪ್ರಸಾದ್ ಸೇರಿದಂತೆ ನಾಲ್ಕು ಸದಸ್ಯರನ್ನು ಅಮಾನತುಗೊಳಿಸಿದರು.
ಕಳೆದ ವಾರ ಸ್ಪೀಕರ್ ಎಐಎಡಿಎಂಕೆ ಮತ್ತು ಟಿಡಿಪಿಯ 45 ಲೋಕಸಭೆ ಸದಸ್ಯರನ್ನು ಅಮಾನತುಗೊಳಿಸಿದ್ದರು.