ನವದೆಹಲಿ: ಸೋಮವಾರದಂದು ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ರನ್ನು ಭೇಟಿ ಮಾಡಿದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಪ್ರಸ್ತಕ ರಾಜಕೀಯ ಬೆಳವಣಿಗೆಗಳ ಕುರಿತಾಗಿ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಸುಮಾರು ಒಂದು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಸ್ಟಾಲಿನ್ ಕಾಂಗ್ರೆಸ್ ಜೊತೆಗಿನ ಮೈತ್ರಿ ಬಿಡಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಈ ಸಭೆಯಲ್ಲಿ ಫೆಡರಲ್ ಫ್ರಂಟ್ ರಚನೆಯ ಕಾರ್ಯಸೂಚಿಯ ಬಗ್ಗೆ ಕೆಸಿಆರ್ ತಿಳಿಸಿದ್ದಾರೆ. ಆದರೆ ಇದಕ್ಕೆ ಸ್ಟಾಲಿನ್ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ. 


ಮೂಲಗಳು ಹೇಳುವಂತೆ ಸ್ಟಾಲಿನ್ ಅವರು "ನಾವು ಕಾಂಗ್ರೆಸ್ ಮೈತ್ರಿಕೂಟದಿಂದ ಹೊರಬರುವುದಿಲ್ಲ.ಈಗಾಗಲೇ ನಾನು ಪ್ರಧಾನಮಂತ್ರಿ ಹುದ್ದೆಗೆ ರಾಹುಲ್ ಗಾಂಧಿ ಹೆಸರನ್ನು ಪ್ರಸ್ತಾಪಿಸಿದ್ದೇನೆ ಅದಕ್ಕೆ ಡಿಎಂಕೆ ಬದ್ದವಾಗಿದೆ. ಡಿಎಂಕೆ ನಿಲುವು ಬಿಜೆಪಿ ವಿರುದ್ದವಾಗಿದೆ ಆದ್ದರಿಂದ ಯುಪಿಎ ಬೆಂಬಲಿಸಬೇಕೆಂದು ಸ್ಟಾಲಿನ್ ಅವರು ಕೆಸಿಆರ್ ಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.


ಇದಕ್ಕೆ ಉತ್ತರಿಸಿದ ಕೆಸಿಆರ್ "ಅವರು ಕಾಂಗ್ರೆಸ್ ಜೊತೆಗಿನ ಮೈತ್ರಿಕೂಟದೊಂದಿಗೆ  ಚುನಾವಣೆಯನ್ನು ಎದುರಿಸಿದ್ದರೂ ಸಹ, ಪ್ರಾದೇಶಿಕ ಪಕ್ಷಗಳು ಸರಕಾರ ರಚಿಸಲು ಜೊತೆಯಾಗಬಹುದು. ಬಿಜೆಪಿಯಾಗಲಿ ಅಥವಾ ಕಾಂಗ್ರೆಸ್ ಪಕ್ಷವಾಗಲಿ ಬಹುಮತವನ್ನು ಸಾಧಿಸುವುದಿಲ್ಲವೆಂದು ಎಂದು ಹೇಳಿದ್ದಾರೆ.