ಒಂದು ವರ್ಷದ ನಂತರ ಪಕ್ಷದ ಕಚೇರಿಗೆ ಭೇಟಿ ನೀಡಿದ ಎಂ.ಕರುಣಾನಿಧಿ
ಔಷಧ-ಪ್ರೇರಿತ ಅಲರ್ಜಿ ಕಾರಣ ಕರುಣಾನಿಧಿ ಅಕ್ಟೋಬರ್ 2016 ರಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದ ಡಿಎಂಕೆ ಪಕ್ಷದ ಅಧ್ಯಕ್ಷ ಕರುಣಾನಿಧಿ ಆ ನಂತರ ಪಕ್ಷದ ಕಚೇರಿಗೆ ಭೇಟಿ ನೀಡಿರಲಿಲ್ಲ.
ಚೆನ್ನೈ: ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕರುಣಾನಿಧಿ ಒಂದು ವರ್ಷದ ನಂತರ ಪಕ್ಷದ ಕಚೇರಿಗೆ ಭೇಟಿ ನೀಡಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಆ ನಂತರದಲ್ಲಿ ಕಚೇರಿಗೆ ಭೇಟಿ ನೀಡಿರಲಿಲ್ಲ.
ವೀಲ್ ಚೇರ್ನಲ್ಲಿ ಪಕ್ಷದ ಕಚೇರಿಗೆ ಆಗಮಿಸಿದ ಕರುಣಾನಿಧಿ ಜೊತೆ ಅವರ ಮಗ ಮತ್ತು ಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಎಂ.ಕೆ. ಸ್ಟಾಲಿನ್, ಮಗಳು ಸೆಲ್ವಿ ಮತ್ತು ಹಿರಿಯ ನಾಯಕ ದುರೈ ಮುರುಗನ್ ಸಹ ಇದ್ದರು.
ಔಷಧ-ಪ್ರೇರಿತ ಅಲರ್ಜಿ ಕಾರಣ ಕರುಣಾನಿಧಿ ಅಕ್ಟೋಬರ್ 2016 ರಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಆ ವರ್ಷ ಡಿಸೆಂಬರ್ನಲ್ಲಿ ಅವರನ್ನು ಎರಡು ಬಾರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹಿರಿಯ ನಾಯಕನನ್ನು ಡಿಸೆಂಬರ್ ಮೊದಲ ವಾರದಲ್ಲಿ "ಪೌಷ್ಟಿಕತೆ ಮತ್ತು ಜಲಸಂಚಯನವನ್ನು ಉತ್ತಮಗೊಳಿಸುವಿಕೆ" ಗಾಗಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು ಮತ್ತು ನಂತರ ಗಂಟಲು ಮತ್ತು ಶ್ವಾಸಕೋಶದ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು.