ಭೋಪಾಲ್: ಇತ್ತೀಚಿನ ದಿನಗಳಲ್ಲಿ ಹಲವು ರಾಜಕೀಯ ನಾಯಕರೂ ಕೂಡ ಕರೋನಾವೈರಸ್ ಹಿಡಿತದಲ್ಲಿ ಸಿಲುಕುತ್ತಿದ್ದಾರೆ. ಇತ್ತೀಚಿಗೆ ಕರ್ನಾಟಕದ ಕೆಲ ರಾಜಕಾರಣಿಗಳಲ್ಲಿ ಕೋವಿಡ್-19 (Covid-19) ದೃಢಪಟ್ಟಿತ್ತು. ಇದೀಗ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್  (Shivaraj Singh Chouhan) ಅವರಿಗೂ ಕರೋನಾವೈರಸ್ ದೃಢಪಟ್ಟಿದೆ.


COMMERCIAL BREAK
SCROLL TO CONTINUE READING

ಗಮನವಿಲ್ಲದವರು ಕರೋನಾವನ್ನು ಆಹ್ವಾನಿಸುತ್ತಾರೆ - ಸಿಎಂ ಶಿವರಾಜ್ ಸಿಂಗ್ ಚೌಹಾಣ್


ಕರೋನಾವೈರಸ್ (Coronavirus) ಸೋಂಕಿಗೆ ಒಳಗಾಗಿರುವುದಾಗಿ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಶಿವರಾಜ್ ಸಿಂಗ್ ಚೌಹಾಣ್  ತಾವು COVID-19 ರ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇನೆ. ವೈದ್ಯರ ಸಲಹೆಯ ಪ್ರಕಾರ ನಾನೇ ಕ್ಯಾರೆಂಟೈನ್ ನಲ್ಲಿ ಇದ್ದೇನೆ. ನನ್ನ ರಾಜ್ಯದ ಜನರು ಜಾಗರೂಕರಾಗಿರಿ ಎಂದು ನಾನು ಮನವಿ ಮಾಡುತ್ತೇನೆ, ಸ್ವಲ್ಪ ಅಸಡ್ಡೆ ಕೊರೊನಾವನ್ನು ಆಹ್ವಾನಿಸುತ್ತದೆ.