ಭೂಪಾಲ್: ಮಧ್ಯಪ್ರದೇಶದಲ್ಲಿ ಸರ್ಕಾರವು ಜನರ ಹೊರೆ ಕಡಿಮೆ ಮಾಡಲು ಮುಂದಾಗಿದ್ದು ಗ್ರಾಹಕರಿಗೆ ವಿದ್ಯುತ್ ಬಿಲ್ (Electricity bill) ನಲ್ಲಿ ದೊಡ್ಡ ಪರಿಹಾರ ನೀಡಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ದುರ್ಬಲ ವರ್ಗದ ಗ್ರಾಹಕರಿಗೆ ದೊಡ್ಡ ರಿಯಾಯಿತಿ ನೀಡುವುದಾಗಿ ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

ಏಪ್ರಿಲ್ ತಿಂಗಳಲ್ಲಿ ವಿದ್ಯುತ್ ಬಿಲ್ 100 ರೂಪಾಯಿ ಬಂದ ಗ್ರಾಹಕರು 3 ತಿಂಗಳವರೆಗೆ 50 ರೂಪಾಯಿ ದರದಲ್ಲಿ ಪಾವತಿಸಬೇಕಾಗುತ್ತದೆ. ಅದೇ ಸಮಯದಲ್ಲಿ 100 ರಿಂದ 400 ರೂಪಾಯಿವರೆಗೆ ವಿದ್ಯುತ್ ಬಿಲ್ ಪಡೆದ ಗ್ರಾಹಕರಿಗೂ ಪರಿಹಾರ ನೀಡುವುದಾಗಿ ಘೋಷಿಸಲಾಗಿದೆ.


ಈ ಹಿನ್ನಲೆಯಲ್ಲಿ ಕೆಲವು ಗ್ರಾಹಕರೊಂದಿಗೆ ವಿಡಿಯೋ ಕಾನ್ಫಿರೆನ್ಸ್ ಮೂಲಕ ಸಂವಹನ ನಡೆಸಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್  (Shivraj Singh Chauhan) ಸಂಬಲ್ ಯೋಜನೆಯೊಂದಿಗೆ ಭಾಗಿಯಾಗಿರುವ ಗ್ರಾಹಕರಿಗೆ ಏಪ್ರಿಲ್‌ನಲ್ಲಿ 100 ರೂ.ಗಳವರೆಗೆ ವಿದ್ಯುತ್  ಬಿಲ್‌ಗಳು ಬಂದಿದ್ದು ಒಂದೊಮ್ಮೆ ಅಂತಹ ಗ್ರಾಹಕರಿಗೆ ಮೂರು ತಿಂಗಳಲ್ಲಿ 100 ರೂ. ಬಿಲ್ ಬಂದಿದ್ದರೆ ಆ ಗ್ರಾಹಕರು ಕೇವಲ 50ರೂ. ಮಾತ್ರ ಪಾವತಿಸಬೇಕು. ಈ ವ್ಯವಸ್ಥೆಯಲ್ಲಿ ಸುಮಾರು 30 ಲಕ್ಷ 68 ಸಾವಿರ ಗ್ರಾಹಕರು ಪ್ರಯೋಜನ ಪಡೆಯಲಿದ್ದು, ಗ್ರಾಹಕರಿಗೆ ಸುಮಾರು 46 ಕೋಟಿ ರೂಪಾಯಿಗಳ ಲಾಭ ಸಿಗಲಿದೆ ಎಂದು ಮಾಹಿತಿ ನೀಡಿದರು.


ಏಪ್ರಿಲ್‌ನಲ್ಲಿ 100 ರೂಪಾಯಿಗಳ ಬಿಲ್ ಹೊಂದಿದ್ದ ಗ್ರಾಹಕರಿಗೆ ಮೇ, ಜೂನ್ ಮತ್ತು ಜುಲೈನಲ್ಲಿ 100 ರಿಂದ 400 ರೂಪಾಯಿಗಳ ನಡುವೆ ಬಿಲ್ ಬಂದಿದ್ದರೆ ಆಗ ಕೇವಲ 100 ರೂಪಾಯಿಗಳನ್ನು ಮಾತ್ರ ಪಾವತಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಚೌಹಾಣ್ ಹೇಳಿದ್ದಾರೆ. ಈ ರೀತಿಯಾಗಿ ಸುಮಾರು 56 ಲಕ್ಷ ಗ್ರಾಹಕರಿಗೆ 255 ಕೋಟಿ ರೂ. ಲಾಭ ಸಿಗಲಿದೆ ಎಂದವರು ವಿವರಿಸಿದರು.


ರಿಯಾಯತಿಯ ಪ್ರಕಾರ, ಏಪ್ರಿಲ್‌ನಲ್ಲಿ 100 ರಿಂದ 400 ರೂಪಾಯಿಗಳವರೆಗೆ ಮತ್ತು ಮೇ, ಜೂನ್ ಮತ್ತು ಜುಲೈನಲ್ಲಿ 400 ಕ್ಕೂ ಹೆಚ್ಚು ರೂಪಾಯಿಗಳ ಬಿಲ್ ಬಂದಿದ್ದರೆ ಅಂತಹ ಗ್ರಾಹಕರು ಅರ್ಧದಷ್ಟು ಬಿಲ್ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಬಿಲ್‌ಗಳನ್ನು ಪರಿಶೀಲಿಸಿದ ನಂತರ ಉಳಿದ ಮೊತ್ತವನ್ನು ಪಾವತಿಸುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಇದರಲ್ಲಿ ಗ್ರಾಹಕರಿಗೆ ಸುಮಾರು 183 ಕೋಟಿ ರೂ. ಲಾಭ ದೊರೆಯಲಿದೆ ಎಂದು ಸರ್ಕಾರ ತಿಳಿಸಿದೆ.


ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಾತನಾಡಿ ರಾಜ್ಯದಲ್ಲಿ ಕೃಷಿ ಕೆಲಸಗಳಿಗೆ 10 ಗಂಟೆಗಳ ಕಾಲ ವಿದ್ಯುತ್ ಒದಗಿಸಲಾಗುತ್ತಿದ್ದು ಸ್ಥಳೀಯ ಗ್ರಾಹಕರಿಗೆ 24 ಗಂಟೆಗಳ ಕಾಲ ಸರ್ಕಾರ ವಿದ್ಯುತ್ ಒದಗಿಸುತ್ತಿದೆ ಎಂದು ತಿಳಿಸಿದರು.