ಮಧ್ಯಪ್ರದೇಶ: ನದಿಗೆ ಉರುಳಿದ ಮಿನಿ ಟ್ರಕ್, 21 ಮಂದಿ ನಿಧನ
ಈ ಘಟನೆ ಮಂಗಳವಾರ ರಾತ್ರಿ 10:30 ರ ಸುಮಾರಿಗೆ ನಡೆದಿದೆ.
ಸಿಧಿ: ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಪ್ರಧಾನ ಕಚೇರಿಯಿಂದ 42 ಕಿ.ಮೀ ದೂರದಲ್ಲಿರುವ ಬಾಹರಿ ಹನುಮಾಣ ರಸ್ತೆಯಲ್ಲಿ ಮೆರವಣಿಗೆ ನಡೆಸುತ್ತಿದ್ದ ಮಿನಿ ಟ್ರಕ್, ಸನ್ ನದಿಯ ಮೇಲೆ ಜುಗ್ದಾ ಸೇತುವೆಯಿಂದ ನದಿಗೆ ಉರುಳಿರುವ ಘಟನೆ ಮಂಗಳವಾರ ರಾತ್ರಿ 10:30 ರ ಸುಮಾರಿಗೆ ನಡೆದಿದೆ. ಈ ಅಪಘಾತದಲ್ಲಿ ಕನಿಷ್ಠ 21 ಜನರು ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದಾರೆ.
ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮೃತಪಟ್ಟವರ ಕುಟುಂಬಕ್ಕೆ ಎರಡು ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ. ಆರ್ಥಿಕ ನೆರವನ್ನು ಘೋಷಿಸಿದ್ದಾರೆ.
ನದಿಯಿಂದ ಮಿನಿ ಟ್ರಕ್ ಅಪ್ಸ್ಟ್ರೀಮ್ ಅನ್ನು ಪಡೆಯಲು ಕ್ರೇನ್ ಅನ್ನು ಕರೆಯಲಾಯಿತು. ಈ ಮಿನಿ ಟ್ರಕ್ ಸೇತುವೆ ಗೋಡೆಯೊಂದಿಗೆ ಡಿಕ್ಕಿ ಹೊಡೆದು ನದಿಯ ಶುಷ್ಕ ಭಾಗದಲ್ಲಿ 60 ರಿಂದ 70 ಅಡಿಗಳಷ್ಟು ಒಳಹೊಕ್ಕಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಜಿಲ್ಲಾಧಿಕಾರಿ ಮತ್ತು ಪೋಲಿಸ್ ಅಧೀಕ್ಷರು ಘಟನೆಯಲ್ಲಿ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.