Maharashtra: ತನ್ನ ಎರಡೂ ಕೈಗಳನ್ನು ಬಿಟ್ಟು ಕುದುರೆ ಓಡಿಸಿದ 75 ವರ್ಷದ ವೃದ್ಧ, ದಂಗಾದ ಪ್ರೇಕ್ಷಕರು
Viral Post - ಮಹಾರಾಷ್ಟ್ರದ (Maharashtra) ಮಾವಳ್` ನಲ್ಲಿ 75 ವರ್ಷದ ವ್ಯಕ್ತಿಯೊಬ್ಬರು ತನ್ನ ಎರಡು ಕೈಗಳನ್ನು ಬಿಟ್ಟು ಕುದುರೆ ಓಡಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗುತ್ತಿದೆ.
Viral Post - ಮಹಾರಾಷ್ಟ್ರದ ಮಾವಲ್ (Maval) ನಲ್ಲಿ 75 ವರ್ಷದ ವ್ಯಕ್ತಿಯೊಬ್ಬರು ಎಲ್ಲರನ್ನು ನಿಬ್ಬೆರಗಾಗಿಸುವ ಸಾಧನೆ ಮಾಡಿದ್ದಾರೆ. ವೃದ್ಧರು ತಮ್ಮ ಎರಡೂ ಕೈಗಳನ್ನು ಬಿಟ್ಟು ಕುದುರೆ ಓಡಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ (Viral Video) ಆಗುತ್ತಿವೆ. ವೃದ್ಧರ ಧೈರ್ಯ ಹಾಗೂ ಅವರ ಈ ವಿಶೇಷ ಕೌಶಲ್ಯವನ್ನು ಜನ ಕೊಂಡಾಡುತ್ತಿದ್ದಾರೆ.
ಎತ್ತಿನ ಗಾಡಿ ಓಟದಲ್ಲಿ ಸಾಧನೆ
ವಾಸ್ತವದಲ್ಲಿ ಮಾವಳ್ ಪ್ರದೇಶದಲ್ಲಿ ಎತ್ತಿನ ಗಾಡಿಗಳ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಓಟದ ವೇಳೆ ಮಧುಕರ್ ಪಾಂಚಪುತೆ (Madhukar Panchpute) ಎಂಬ ವೃದ್ಧರು ಎತ್ತಿನ ಗಾಡಿಯ ಮುಂದೆ ಓದುತ್ತಿರುವ ಕುದುರೆಯ ಮೇಲೆ ಸವಾರಿ ಮಾಡುತ್ತಿದ್ದರು. ಕುದುರೆ (Horse Riding Viral Post) ಎಷ್ಟು ವೇಗವಾಗಿ ಓಡುತ್ತದೆಯೋ ಅಷ್ಟು ವೇಗವಾಗಿ ಎತ್ತಿನ ಗಾಡಿ ಓಡುತ್ತದೆ ಎಂಬ ನಂಬಿಕೆ ಈ ಪ್ರದೇಶದಲ್ಲಿದೆ. ಓಟ ಆರಂಭವಾದ ಕೂಡಲೇ ಮಧುಕರ್ ತನ್ನ ಕುದುರೆಯ ಮೇಲೆ ಬುಲೆಟ್‌ನ ವೇಗದಲ್ಲಿ ಧಾವಿಸಿದ್ದಾರೆ. ಮತ್ತು ಕಣ್ಣು ಮಿಟುಕಿಸುವುದರೊಳಗೆ ಅವರು ಗಾಳಿಯ ಮೇಲೆ ಸವಾರಿ ಮಾಡುತ್ತಿದ್ದಾರೆಯೇ ಎಂಬಂತೆ ತೋರಿದೆ.
ಇದನ್ನೂ ಓದಿ-Funny Video : ಟಗರಿನ ಜೊತೆ ಮೋಜು ಮಸ್ತಿಗಿಳಿದ ವ್ಯಕ್ತಿ, ಇಲ್ಲಿದೆ ನಕ್ಕು ನಗಿಸೋ ವಿಡಿಯೋ
ಅದನ್ನು ನೋಡಿದ ಜನರು ದಂಗಾಗಿದ್ದಾರೆ
ಈ ದೃಶ್ಯವನ್ನು ಕಂಡ ಪ್ರೇಕ್ಷಕರು ಬೆರಗಾಗಿದ್ದಾರೆ. ಏಕೆಂದರೆ 75ರ ಹರೆಯದ ವೃದ್ಧರೊಬ್ಬರು ಇಂಥದ್ದೊಂದು ಸಾಧನೆ ಮಾಡಬಲ್ಲರು ಎಂದರೆ ಯಾರೂ ಊಹಿಸಿರಲಿಲ್ಲ ಮಧುಕರ್ ತನ್ನ ಕುದುರೆಯನ್ನು ಯಾವುದೇ ಭಯ ಅಥವಾ ಭೀತಿ ಇಲ್ಲದೆ ತನ್ನ ಕೈಗಳನ್ನು ಬಿಟ್ಟು ಓಡಿಸುತ್ತಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಫೋಟೋಗಳು
ಸಾಮಾನ್ಯವಾಗಿ ಯುವಕರು ಕುದುರೆಯ ಮೇಲೆ ಸವಾರಿ ನಡೆಸುತ್ತಾರೆ. ಆದರೆ, ಧೈರ್ಯ ಮತ್ತು ಕೌಶಲ್ಯಕ್ಕೂ ಮತ್ತು ವಯಸ್ಸಿಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಮಧುಕರ್ ಪಾಂಚಪುತೆ ತೋರಿಸಿಕೊಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲಿಯೂ ಅವರ ಧೈರ್ಯಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ-Viral Video: ಹಸೆಮಣೆ ಮೇಲೆ ವರಮಾಲೆ ಎಸೆದು ಹೋದ ವಧು, ಮುಂದೇನಾಯ್ತು, ನೀವೇ ನೋಡಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.