Viral Video: ಹಸೆಮಣೆ ಮೇಲೆ ವರಮಾಲೆ ಎಸೆದು ಹೋದ ವಧು, ಮುಂದೇನಾಯ್ತು, ನೀವೇ ನೋಡಿ!

Wedding Viral Video: ಸದ್ಯ ಮದುವೆ ಸೀಸನ್ ನಡೆಯುತ್ತಿದೆ. ಮದುವೆಯು ವಿನೋದ, ಕೀಟಲೆ ಮತ್ತು ಇತರ ಅನೇಕ ಆಸಕ್ತಿದಾಯಕ ಘಟನೆಗಳಿಂದ ತುಂಬಿರುತ್ತದೆ. ಅಂತಹ ಮದುವೆಯ ವಿಡಿಯೋ ಇದೀಗ ವೈರಲ್ ಆಗಿದೆ.

Written by - Yashaswini V | Last Updated : Dec 7, 2021, 10:51 AM IST
  • ಮದುವೆಯ ದಿನ ವರ, ವಧು, ಅವರ ಕುಟುಂಬಗಳು ಮತ್ತು ಸಂಬಂಧಿಕರಿಗೆ ವಿಶೇಷ
  • ಇದು ವಧು-ವರರಿಗೆ ಮರೆಯಲಾಗದ ದಿನ ಎಂದರೂ ತಪ್ಪಾಗಲಾರದು
  • ವಧು-ವರರು ತಮ್ಮ ಮದುವೆಯ ದಿನವು ಅತ್ಯುತ್ತಮ ಮತ್ತು ಅತ್ಯಂತ ವಿಶಿಷ್ಟವಾಗಿರಬೇಕೆಂದು ಬಯಸುತ್ತಾರೆ
Viral Video: ಹಸೆಮಣೆ ಮೇಲೆ ವರಮಾಲೆ ಎಸೆದು ಹೋದ ವಧು, ಮುಂದೇನಾಯ್ತು, ನೀವೇ ನೋಡಿ! title=
Wedding Viral Video

Wedding Viral Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈವಿಧ್ಯಮಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ.  ಇಂಟರ್ನೆಟ್ ಜಗತ್ತು ಒಂದು ಮೋಜಿನ ಜಗತ್ತು. ನಾವು ಪ್ರತಿದಿನ ಇಲ್ಲಿ ಹಲವಾರು ವಿಭಿನ್ನ ವೀಡಿಯೊಗಳನ್ನು ನೋಡುತ್ತೇವೆ. ಇಂಟರ್‌ನೆಟ್‌ನಲ್ಲಿ ನಾವು ನೋಡುವ ವೀಡಿಯೋಗಳಲ್ಲಿನ ಅನೇಕ ವಿಷಯಗಳು ನಮ್ಮನ್ನು ಕೆಲವೊಮ್ಮೆ ನಗುವಂತೆ ಮಾಡುತ್ತದೆ, ಕೆಲವೊಮ್ಮೆ ಯೋಚಿಸುವಂತೆ ಮಾಡುತ್ತದೆ, ಕೆಲವೊಮ್ಮೆ ಆಶ್ಚರ್ಯವನ್ನುಂಟು ಮಾಡುತ್ತದೆ. ಇದೀಗ ಮದುವೆಯ ವಿಡಿಯೋವೊಂದು ವೇಗವಾಗಿ ವೈರಲ್ ಆಗುತ್ತಿದ್ದು  ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. 

ಮದುವೆಯ ದಿನ  ವರ, ವಧು, ಅವರ ಕುಟುಂಬಗಳು ಮತ್ತು ಸಂಬಂಧಿಕರಿಗೆ ವಿಶೇಷ. ಇದು ವಧು-ವರರಿಗೆ ಮರೆಯಲಾಗದ ದಿನ ಎಂದರೂ ತಪ್ಪಾಗಲಾರದು. ವಧು-ವರರು ತಮ್ಮ ಮದುವೆಯ ದಿನವು ಅತ್ಯುತ್ತಮ ಮತ್ತು ಅತ್ಯಂತ ವಿಶಿಷ್ಟವಾಗಿರಬೇಕೆಂದು ಬಯಸುತ್ತಾರೆ. ಕೆಲವೊಮ್ಮೆ ಮದುವೆಯ ವೇದಿಕೆಯಲ್ಲಿ ಅನೇಕ ಅನಿರೀಕ್ಷಿತ ಘಟನೆಗಳು ಸಂಭವಿಸುತ್ತವೆ. ಈ ವೀಡಿಯೋದಲ್ಲೂ ಅಂಥದ್ದೇ ಒಂದು ಘಟನೆ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿರುವ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ-  Fire Golgappa: 'ಫೈರ್ ಪಾನ್' ಅಲ್ಲ 'ಫೈರ್ ಗೋಲ್ಗಪ್ಪಾ' ಎಂದಾದರು ಟೇಸ್ಟ್ ಮಾಡಿದ್ದೀರಾ? ವಿಡಿಯೋ ವೈರಲ್

ವರಮಾಲೆ ಎಸೆದು ಮಂಟಪದಿಂದ ಹೊರಬಂದ ವಧು:
ಸದ್ಯ ಮದುವೆ ಸೀಸನ್ ನಡೆಯುತ್ತಿದೆ. ಮದುವೆಯು ವಿನೋದ, ಕೀಟಲೆ ಮತ್ತು ಇತರ ಅನೇಕ ಆಸಕ್ತಿದಾಯಕ ಘಟನೆಗಳಿಂದ ತುಂಬಿರುತ್ತದೆ. ಅಂತಹ ಮದುವೆಯ ವಿಡಿಯೋ (Wedding Viral Video) ಇದೀಗ ವೈರಲ್ ಆಗಿದೆ. ಈ ವೈರಲ್ ವಿಡಿಯೋದಲ್ಲಿ ವರನೊಬ್ಬ ತನ್ನ ವಧುವಿಗೆ ವರಮಾಲೆ ಧರಿಸಲು ಮುಂದಾದಾಗ ಇದ್ದಕ್ಕಿದ್ದಂತೆ ಕೋಪಗೊಂಡ ವಧು ವರಮಾಲೆಯನ್ನು ಹಸೆಮಣೆ ಮೇಲೆ ಎಸೆದು ಮಂಟಪದಿಂದ  ಹೊರಬರುವುದನ್ನು ನೀವು ನೋಡಬಹುದು. 

ಹಾರ ಎಸೆದು ಮಂಟಪದಿಂದ ಹೊರಬರುತ್ತಿರುವ ವಧುವನ್ನು ಕಂಡು ವರ ದಿಗ್ಭ್ರಮೆಗೊಳ್ಳುತ್ತಾನೆ. ಮದುವೆಯಲ್ಲಿ ನೆರೆದಿದ್ದವರಿಗೂ ಒಂದು ಕ್ಷಣ ಆಘಾತವಾದಂತೆ ತೋರುತ್ತದೆ. 

ಆದಾಗ್ಯೂ, ಮುಂದಿನ ಕ್ಷಣದಲ್ಲಿ ಏನಾಗುತ್ತದೆ ಎಂಬ ನಿರೀಕ್ಷೆಯ ಮಧ್ಯೆ ವಧುವಿನ ವರ್ತನೆ ಕಂಡು ನಿಮಗೆ ತಲೆ ಸುತ್ತಬಹುದು ಅಥವಾ  ಕೆಲವರು ಇದೇನು ಹುಚ್ಚಾಟ ಎಂದೂ ಹೇಳಬಹುದು. ಏಕೆಂದರೆ ಮುಂದಿನ ಕ್ಷಣದಲ್ಲಿ ವಧು ಮತ್ತೆ ಮಂಟಪದತ್ತ ಮರಳುತ್ತಾಳೆ. ಸುತ್ತಮುತ್ತಲಿನವರು ನಗಲು ಪ್ರಾರಂಭಿಸುತ್ತಾರೆ. 

ಇದನ್ನೂ ಓದಿ-  Bike Stunts Video: ಹುಡ್ಗಿಯರ ಮುಂದೆ ಡೌಲು ಹೊಡೆಯಲು ಹೋಗಿ ಬೈಕ್ ಮೇಲಿಂದ ಬಕ್ ಬಾರ್ ಬಿದ್ದ ಭೂಪ

ವಾಸ್ತವವಾಗಿ, ಈ ವಿಡಿಯೋ ಮದುವೆ (Wedding Viral Video) ಮನೆಯಲ್ಲಿ ವಧು ವರನನ್ನು ಕೀಟಲೆ ಮಾಡಲು ತಮಾಷೆಗಾಗಿ ಹೀಗೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಈ ವಿನೋದಮಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ನೀವೂ ಈ ವಿಡಿಯೋವನ್ನು ಒಮ್ಮೆ ನೋಡಿ...

 
 
 
 

 
 
 
 
 
 
 
 
 
 
 

A post shared by Bhutni_ke (@bhutni_ke_memes)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News