ಮುಂಬೈ: Maharashtra Flooding - ಮಹಾರಾಷ್ಟ್ರದ ರಾಯಗಡ್ (Raigad) ಜಿಲ್ಲೆಯಲ್ಲಿ ಉಂಟಾಗಿರುವ ಭಾರಿ ಮಳೆಯಕಾರಣ ನೆರೆ ಪರಿಸ್ಥಿತಿ ಸೃಷ್ಟಿಯಾಗಿದ್ದು, ಇದೀಗ ಅಲ್ಲಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ 11 ರೋಗಿಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ಆಸ್ಪತ್ರೆಯಲ್ಲಿ ಒಟ್ಟು 21 ರೋಗಿಗಳು ದಾಖಲಾಗಿದ್ದರು
ಮಾಹಿತಿಗಳ ಪ್ರಕಾರ ರಾಯಗಡ್ ನ ಚಿಪಳುನ್ ಆಸ್ಪತ್ರೆಯಲ್ಲಿ (Chiplun Hospital) ಒಟ್ಟು 11 ರೋಗಿಗಳು ದಾಖಲಾಗಿದ್ದರು. ಇವರಲ್ಲಿನ ಹಲವು ಜನರು ವೆಂಟಿಲೆಟರ್ ಮೇಲಿದ್ದರು. ಭಾರಿ ಮಳೆಯ ಕಾರಣ ಉಂಟಾದ ಪ್ರವಾಹ ಪರಿಸ್ಥಿತಿಯಿಂದ ಹಲವು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ. ಇದರಿಂದ ಹೊರ ಜಗತ್ತಿನ ಜೊತೆಗೆ ಆಸ್ಪತ್ರೆಯ ಸಂಪರ್ಕ ಕಡಿತಗೊಂಡಿದೆ. 


ಪ್ರದೇಶದ ಮುಖ್ಯ ವೈದ್ಯಕೀಯ ಅಧಿಕಾರಿ (Chief Medical Officer)ಗುರುವಾರ ಸಂಜೆ 3.30ರ ಸುಮಾರಿಗೆ ಕೊನೆಯ ಬಾರಿಗೆ ಸಂಪರ್ಕದಲ್ಲಿದ್ದರು ಎನ್ನಲಾಗುತ್ತಿದೆ. ಸದ್ಯ ಮಳೆಯ ಕಡಿಮೆಯಾಗಿದ್ದು, ಪ್ರದೇಶದಲ್ಲಿನ ನೀರಿನ ಮಟ್ಟ ನಿಧಾನಗತಿಯಲ್ಲಿ ಇಳಿಕೆಯಾಗುತ್ತಿದ್ದು, ಜನರು ತಮ್ಮ ಮನೆ ಹಾಗೂ ಅಂಗಡಿ ಮುಂಗಟ್ಟುಗಳ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. 


11 ರೋಗಿಗಳ ಸಾವು (Maharashtra Flooding Updates)
ಏತನ್ಮಧ್ಯೆ ಚಿಪಳುನ್ ಆಸ್ಪತ್ರೆಯಲ್ಲಿ ಭರ್ತಿಯಾಗಿದ್ದ 21ರಲ್ಲಿ 11 ರೋಗಿಗಳು ಮೃತಪಟ್ಟಿದ್ದಾರೆ. ಇದಾದ ಬಳಿಕ ಜಿಲ್ಲಾಡಳಿತದಲ್ಲಿ ಹಾಹಾಕಾರ ಸೃಷ್ಟಿಯಾಗಿದೆ. ಜಿಲ್ಲಾಡಳಿತದ ಅಧಿಕಾರಿಗಳು ಆಸ್ಪತ್ರೆಯಲ್ಲಿ ಭರ್ತಿಯಾಗಿರುವ ಉಳಿದ ರೋಗಿಗಳ ಪ್ರಾಣ ಕಾಪಾಡುವ ಯೋಜನೆಯಲ್ಲಿ ತೊಡಗಿದ್ದಾರೆ. ಆಸ್ಪತ್ರೆಯ ಆಡಳಿತ ಮಂಡಳಿಯ ಜೊತೆಗೆ ಸಂಪರ್ಕ ಸಾಧಿಸಿ ಪರಿಸ್ಥಿತಿಯ ಕುರಿತು ವಿಸ್ತರದ ವರದಿ ಸಲ್ಲಿಸಲು ಸೂಚಿಸಲಾಗಿದೆ. 


ಇದನ್ನೂ ಓದಿ-Maharashtra Rain Updates: ರಾಯಗಡ್ ಭೂಕುಸಿತದ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆ, ಇಲ್ಲಿವೆ ಅಪ್ಡೇಟ್ಸ್


ಇನ್ನೊಂದೆಡೆ ರಾಜ್ಯದ ಕೊಲ್ಹಾಪುರ್ (Kolhapur) ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ 2019ರ ದಾಖಲೆಯನ್ನು ಮುರಿದಿದೆ. ಮಳೆಯ ಕಾರಣ ಕಾಗಲ್ ಮುರುಗುಡ್ ರಸ್ತೆಯ ಮೇಲಿರುವ ಸಿದ್ಧನೆರ್ಲಿ ಪ್ರದೇಶದಲ್ಲಿ ದೂಧಗಂಗಾ ನದಿಯ ಮೇಲೆ ನಿರ್ಮಿಸಲಾಗಿರುವ ಸೇತುವೆ ರಾತ್ರೋರಾತ್ರಿ ಮುಳುಗಿಹೋಗಿದೆ. ಸಂಪೂರ್ಣ ಪ್ರದೇಶ ನೀರಿನಿಂದ ಆವೃತ್ತವಾಗಿದೆ.


ಇದನ್ನೂ ಓದಿ-Maharashtra Rain: ಮಹಾರಾಷ್ಟ್ರದಲ್ಲಿ ಮುಂದುವರೆದ ವರುಣನ ಆರ್ಭಟ, ಹಲವು ಜಿಲ್ಲೆಗಳು ಜಲಾವೃತ್ತ, ರಕ್ಷಣಾ ಕಾರ್ಯಾಚರಣೆಗಿಳಿದ Army, NDRF


ಮಹಾರಾಷ್ಟ್ರದಲ್ಲಿ ಇದುವರೆಗೆ ಸುಮಾರು 129 ಜನರ ಸಾವು (Maharashtra Rain Latest News)
ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೊಲ್ಹಾಪುರ ನಗರದಲ್ಲಿನ ಎಲ್ಲಾ ಪೆಟ್ರೋಲ್ ಪಂಪ್ ಗಳನ್ನು ಬಂದ್ ಮಾಡಲಾಗಿದೆ. ಕೇವಲ ಅತ್ಯಾವಶ್ಯಕ ಸೇವೆಯಲ್ಲಿ ನಿರತ ವಾಹನಗಳಿಗೆ ಮಾತ್ರ ಪೆಟ್ರೋಲ್ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಮಾಹಿತಿಗಳ ಪ್ರಕಾರ ಮಹಾರಾಷ್ಟ್ರದಲ್ಲಿ ಬೀಳುತ್ತಿರುವ ಭಾರಿ ಮಳೆಯ (Rain) ಕಾರಣ ಸಂಭವಿಸಿರುವ ವಿವಿಧ ಘಟನೆಗಳಲ್ಲಿ ಇದುವರೆಗೆ ಸುಮಾರು 129 ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. 


ಇದನ್ನೂ ಓದಿ-Mumbai: ಮುಂಬೈನಲ್ಲಿ ಭಾರೀ ಮಳೆ ಮಧ್ಯೆ ಕಟ್ಟಡ ಕುಸಿದು ಮೂವರ ಮೃತ್ಯು, 7 ಮಂದಿಗೆ ಗಾಯ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ