Maharashtra Rain Updates: ರಾಯಗಡ್ ಭೂಕುಸಿತದ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆ, ಇಲ್ಲಿವೆ ಅಪ್ಡೇಟ್ಸ್

 Maharashtra Rain Updates - ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನಾಡಿಗಳು ಉಕ್ಕಿ ಹರಿಯುತ್ತಿವೆ ಹಾಗೂ ಹಲವು ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಎದುರಾಗಿದೆ. ಭಾರಿ ಮಳೆಗೆ ಮುಂಬೈ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ರೈಲು ಹಾಗೂ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. 

Written by - Nitin Tabib | Last Updated : Jul 23, 2021, 04:40 PM IST
  • ಧಾರಾಕಾರ ಮಳೆಗೆ ತತ್ತರಿಸಿ ಹೋದ ಮಹಾರಾಷ್ಟ್ರ.
  • ರಾಯಗಡ್ ಭೂ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆ.
  • ಸಾತಾರಾದಲ್ಲಿಯೂ ಕೂಡ ಭೂ ಕುಸಿತ 12 ಜನರ ದಾರುಣ ಸಾವು.
Maharashtra Rain Updates: ರಾಯಗಡ್ ಭೂಕುಸಿತದ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆ,  ಇಲ್ಲಿವೆ ಅಪ್ಡೇಟ್ಸ್  title=
Maharashtra Rain Updates (File Photo)

ಮುಂಬೈ: Maharashtra Rain Updates - ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನಾಡಿಗಳು ಉಕ್ಕಿ ಹರಿಯುತ್ತಿವೆ ಹಾಗೂ ಹಲವು ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಎದುರಾಗಿದೆ. ಭಾರಿ ಮಳೆಗೆ ಮುಂಬೈ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ರೈಲು ಹಾಗೂ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ರಾಜ್ಯದ ಅಧಿಕಾರಿಗಳಿಗೆ ನೆರವು ನೀಡಲು ಭಾರತೀಯ ಸೇನೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು ನಿಯೋಜಿಸಲಾಗಿದೆ.

ಸಾತಾರ ಭೂಕುಸಿತ (Satara Landslide)
ಸಾತಾರಾ ಜಿಲ್ಲೆಯ ಪಾಟನ್ ತಾಲೂಕಿನ ಮಿರಗಾವ್ ಬಳಿ ಸಂಭವಿಸಿದ ಭೂಕುಸಿತದಲ್ಲಿ 12 ಜನ ಮೃತಪಟ್ಟಿದ್ದಾರೆ. ಅವಶೇಷಗಳ ಅಡಿ ಸಿಲುಕಿಕೊಂಡ ಕಾರಣ ಇವರೆಲ್ಲರೂ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ NDRF ತಂಡವನ್ನು ರವಾನಿಸಲಾಗಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ದೋಣಿಗಳ ಮೂಲಕ ಸಾಗಿಸಲಾಗುತ್ತಿದೆ.

ರಾಯಗಡ್ ಭೂಕುಸಿತದಲ್ಲಿ (Raigad Landslide Updates) ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆ
ಇನ್ನೊಂದೆಡೆ  ರಾಯಗಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.  ರಾಯಗಡ್ ಜಿಲ್ಲೆಯ ಮಹಾಡ್ ತಾಲೂಕಿನ ತಳೆಗಾವ್ ನಲ್ಲಿ ನಿನ್ನೆ ಸಂಜೆ ಭೂಕುಸಿತದ ಘಟನೆ ಸಂಭವಿಸಿತ್ತು. ಇದುವರೆಗೆ ಅಲ್ಲಿನ ಸುಮಾರು 15 ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಾನಗಳಿಗೆ ರವಾನಿಸಲಾಗಿದೆ. ಅಲ್ಲಿ ಇನ್ನೂ 40 ಕ್ಕೂ ಹೆಚ್ಚು ಜನರು ಸಿಳುಕಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗುತ್ತಿದೆ. NDRF ತಂಡ ಸತತ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ. 

ಇನ್ನೊಂದೆಡೆ ಮಹಾರಾಷ್ಟ್ರದ ಕೊಲ್ಹಾಪುರ್ ಜಿಲ್ಲೆಯ ಚಿಖಲಿ ಪ್ರದೇಶದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆ ಪ್ರವಾಹ ಸ್ಥಿತಿ ಸೃಷ್ಟಿಯಾಗಿದೆ. NDRF ಜವಾನರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಇನ್ನೊಂದೆಡೆ ಕರ್ನಾಟಕದಿಂದ ಮಹಾರಾಷ್ಟ್ರವನ್ನು ಜೋಗಿಸುವ ರಸ್ತೆಯನ್ನು ಬಂದ್ ಮಾಡಲಾಗಿದೆ. ದೊಡ್ಡ ಪ್ರಮಾಣದಲ್ಲಿ ಭೂಸ್ಖಲನದ ಘಟನೆಗಳು ವರಗಿಯಾಗುತ್ತಿದ್ದು, ಇದರಿಂದ ಎಚ್ಚೆತ್ತುಕೊಂಡ ಸ್ಥಳೀಯ ಆಡಳಿತಗಳು ರಸ್ತೆಯನ್ನು ಮುಚ್ಚುವ ನಿರ್ಧಾರ ಕೈಗೊಂಡಿವೆ.

ಕೊಲ್ಹಾಪುರ್-ಬೆಂಗಳೂರು ಹೆದ್ದಾರಿ ಬಂದ್
ಮಹಾರಾಷ್ಟ್ರದ ಕೊಲ್ಹಾಪುರದ ನಿಪ್ಪಾಣಿ ಜಲಾವೃತ್ತವಾದ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಕೊಲ್ಹಾಪುರ-ಬೆಂಗಳೂರು ಹೆದ್ದಾರಿ ಮುಚ್ಚಲಾಗಿದೆ. ರಾಯ್ಗಡ್, ರತ್ನಾಗಿರಿ ಮತ್ತು ಕೊಲ್ಹಾಪುರ ಜಿಲ್ಲೆಗಳಲ್ಲಿ ಹಲವಾರು ನದಿಗಳು ಅಪಾಯದ ಮಟ್ಟಕ್ಕಿಂತ ಮೇಲಕ್ಕೆ ಹರಿಯುತ್ತಿವೆ ಮತ್ತು ಪ್ರವಾಹ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಾತಾರಾ , ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಗಳಲ್ಲಿ ಎನ್‌ಡಿಆರ್‌ಎಫ್ ಘಟಕಗಳನ್ನು ತೆರೆಯಲಾಗಿದೆ. 

ಸತತವಾಗಿ ಸುರಿಯುತ್ತಿರುವ ಮಳೆಗೆ ತತ್ತರಿಸಿ ಹೋಗಿರುವ ರಾಜ್ಯ ರಾಜಧಾನಿ ಹಾಗೂ ವಾಣಿಜ್ಯ ನಗರಿ ಮುಂಬೈನ ಗೊವಂಡಿ ಪ್ರದೇಶದಲ್ಲಿ ಎರಡಂತಸ್ಥಿನ ಕಟ್ಟಡ ಕುಸಿತದ ಕಾರಣ ಮೂವರು ಮೃತಪಟ್ಟಿದ್ದು, 12 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಭಾರಿ ಮಳೆಯ ಕಾರಣ ಇಲ್ಲಿನ ಗ್ರೌಂಡ್ ಪ್ಲಸ್ ಒನ್ ಕಟ್ಟಡ ಬಿರಿಬಿರಿನೆ ಕುಸಿದು ನೆಲಕಚ್ಚಿದೆ. ಕಟ್ಟಡದ ಅವಶೇಷಗಳ ಅಡಿ ಸಿಲುಕಿಕೊಂಡಿದ್ದ ಮೂವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ- ನಾಳೆ ICSE 10ನೇ ಮತ್ತು ISC 12ನೇ ತರಗತಿಯ ಫಲಿತಾಂಶ : ನಿಮ್ಮ ರಿಸಲ್ಟ್ ಹೀಗೆ ನೋಡಿ

ಮೂರು ದಿನಗಳವರೆಗೆ ಭಾರಿ ಮಳೆಯ ಎಚ್ಚರಿಕೆ
ರಾಜ್ಯದಲ್ಲಿ ಮುಂದಿನ 3 ದಿನಗಳ ಕಾಲ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ಮುಂಬೈ ಸೇರಿದಂತೆ ಕೊಂಕಣದ ಸಂಪೂರ್ಣ ಪ್ರದೇಶದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹವಾಮಾನ ಇಲಾಖೆಯ ಪ್ರಕಾರ, ವಿವಿಧ ಕಡೆಗಳಲ್ಲಿ ಭಾರೀ ಮತ್ತು ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇದಲ್ಲದೆ, ಮುಂದಿನ ಎರಡು ದಿನಗಳವರೆಗೆ ಅಂದರೆ ಜುಲೈ 24 ಮತ್ತು 25 ರವರೆಗೆ ಎಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ-ಪತಿ Raj Kundra ಬಂಧನದ ಬಳಿಕ ಮೌನ ಮುರಿದ Shilpa Shetty ಹೇಳಿದ್ದೇನು?

ಕೊಂಕಣ್ ವಿಭಾಗದಲ್ಲಿ ಭಾರಿ ಮಳೆಯ ಕಾರಣ ಸಿಲುಕಿಕೊಂಡ 6000 ಪ್ರಯಾಣಿಕರು
ಕೊಂಕಣ ರೈಲ್ವೆ ಮಾರ್ಗದಲ್ಲಿನ ರೈಲು ಸೇವೆಗಳಿಗೆ ಭಾರಿ ಮಳೆ ಮತ್ತು ನದಿಗಳ ಪ್ರವಾಹದಿಂದಾಗಿ ಅಡಚಣೆ ಉಂಟಾಗಿದ್ದು, ಸುಮಾರು 6,000 ಪ್ರಯಾಣಿಕರು ಸಿಲುಕಿ ಹಾಕಿಕೊಂಡಿದ್ದಾರೆ. ಮಳೆ ಪೀಡಿತ ಕೊಂಕಣ ರೈಲ್ವೆ ಮಾರ್ಗದಿಂದಾಗಿ ಇದುವರೆಗೆ ಒಂಬತ್ತು ರೈಲುಗಳ ಯಾತ್ರೆಯನ್ನು ರದ್ದುಗೊಳಿಸಲಾಗಿದೆ. ಕೊಂಕಣ-ಗೋವಾ ಮತ್ತು ಮಹಾರಾಷ್ಟ್ರದ ರಾಯಗಡ್, ರತ್ನಗಿರಿ, ಸಿಂಧುದುರ್ಗ್, ಪುಣೆ ಘಾಟ್ ಪ್ರದೇಶಗಳು, ಸಾತಾರಾ ಮತ್ತು ಕೊಲ್ಹಾಪುರ ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದುವರೆದಿದ್ದು, ಅನೇಕ ಭಾಗಗಳಲ್ಲಿ ಪ್ರವಾಹ ಸ್ಥಿತಿ (Flood Situation) ಉಂಟಾಗಿದೆ. ಇಂದೂ ಕೂಡ ಈ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ-ನಟಿ ಶಿಲ್ಪಾ ಶೆಟ್ಟಿ ಪತಿಗೆ ಮತ್ತಷ್ಟು ಸಂಕಷ್ಟ: ಪೊಲೀಸ್ ಕಸ್ಟಡಿ ಅವಧಿ ಮತ್ತಷ್ಟು ವಿಸ್ತರಣೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News