ಮುಂಬೈ: Farmers Protest - ಸಚಿನ್ ತೆಂಡೂಲ್ಕರ್ (Sachin Tendulkar), ಲತಾ ಮಂಗೇಶ್ಕರ್ (Lata Mangeshkar) ಮತ್ತು ವಿರಾಟ್ ಕೊಹ್ಲಿ (Virat Kohli) ಸೇರಿದಂತೆ ಇತರ ತಾರೆಯರು ಮಾಡಿದ ಟ್ವೀಟ್‌ಗಳ ಬಗ್ಗೆ ತನಿಖೆಗೆ ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ. ಕೃಷಿ ಕಾನೂನುಗಳ (Farm Laws) ವಿರುದ್ಧ ರೈತರ ಪ್ರತಿಭಟನೆಯ (Farmar Protest) ಬಗ್ಗೆ ಅನೇಕ  ಅಂತರರಾಷ್ಟ್ರೀಯ ಮಟ್ಟದಲ್ಲಿ ಧ್ವನಿಗಳು ಗಟ್ಟಿಗೊಂಡ ಬಳಿಕ ಭಾರತೀಯ ಗಣ್ಯರು ಪ್ರತಿಕ್ರಿಯಿಸಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.


COMMERCIAL BREAK
SCROLL TO CONTINUE READING

ಬಳಿಕ ಆರೋಪಿಸಿದ್ದ ಮಹಾರಾಷ್ಟ್ರ ಕಾಂಗ್ರೆಸ್
ಸಚಿನ್ ತೆಂಡೂಲ್ಕರ್, ಲತಾ ಮಂಗೇಶ್ಕರ್, ವಿರಾಟ್ ಕೊಹ್ಲಿ ಮತ್ತು ಅಕ್ಷಯ್ ಕುಮಾರ್ ಸೇರಿದಂತೆ ಹಲವು ಭಾರತೀಯ ತಾರೆಯರು ಅಂತಾರಾಷ್ಟ್ರೀಯ ಪಾಪ್ ಗಾಯಕಿ ರಿಹಾನ್ನಾ ಅವರ ಟ್ವೀಟ್ ಗೆ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಆರೋಪಿಸಿತ್ತು, ಇವರೆಲ್ಲರ ಟ್ವೀಟ್ ನಲ್ಲಿ ಹಲವು ಪದಗಳು ಕಾಮನ್ ಆಗಿವೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಎಲ್ಲ ತಾರೆಯರು ಒತ್ತಡದಲ್ಲಿ ಟ್ವೀಟ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ, ಆದ್ದರಿಂದ ಇದರ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿತ್ತು. ಇದರ ನಂತರ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರು ತನಿಖೆಗೆ ಆದೇಶಿಸಿದ್ದಾರೆ.


ಟ್ವೀಟ್ ಗಳ ಟೈಮಿಂಗ್ ಸರಿಯಾಗಿಲ್ಲ: ಅನಿಲ್ ದೇಶ್ಮುಖ್
ಪ್ರಕರಣದಲ್ಲಿ ತೆನಿಖೆಯನ್ನು ಆದೇಶಿಸಿರುವ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ, " ಈ ತಾರೆಯರ ಟ್ವೀಟ್ ನಲ್ಲಿ ಯಾವುದೇ ರೀತಿಯ ತಪ್ಪಿಲ್ಲ. ಆದರೆ, ಅವರ ಟೈಮಿಂಗ್ ತಪ್ಪಾಗಿದೆ" ಎಂದು ಹೇಳಿದ್ದಾರೆ. ಈ ಎಲ್ಲ ಗಣ್ಯರು ಒತ್ತಡಕ್ಕೆ ಮಣಿದು ಟ್ವೀಟ್ ಮಾಡಿದ್ದಾರೆಯೇ? ಎಂಬುದರ ತನಿಖೆ ರಾಜ್ಯ ಗುಪ್ತಚರ ಇಲಾಖೆ ಕೈಗೊಳ್ಳಲಿದೆ ಎಂದು ದೇಶ್ಮುಖ್ ಹೇಳಿದ್ದಾರೆ.


ಇದನ್ನು ಓದಿ-ಸಚಿನ್ ತೆಂಡೂಲ್ಕರ್ ಗೆ ಶರದ್ ಪವಾರ್ ನೀಡಿದ ಆ ಸಲಹೆ ಏನು ಗೊತ್ತೇ?


ಏನಿದು ಸಂಪೂರ್ಣ ಪ್ರಕರಣ?
ರೈತರ ಪ್ರತಿಭಟನೆಯ ಕುರಿತು ಟ್ವೀಟ್ ಮಾಡಿದ್ದ ಅಂತಾರಾಷ್ಟ್ರೀಯ ಪಾಪ್ ತಾರೆ ರಿಹಾನ್ನಾ, "ನಾವು ರೈತರ ಪ್ರತಿಭಟನೆಯ (Farmer Protest Updates) ಕುರಿತು ಏಕೆ ಚರ್ಚಿಸುತ್ತಿಲ್ಲ" ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು. ಇದರ ನಂತರ ಪರಿಸರ ಕಾರ್ಯಕರ್ತೆಯಾಗಿರುವ ಗ್ರೇಟಾ  ಥನ್ ಬರ್ಗ್ ಹಾಗೂ ಮಾಜಿ ಪಾರ್ನ್ ನಟಿ ಮಿಯಾ ಖಲೀಫಾ ಸೇರಿದಂತೆ ಹಣವು ಅಂತಾರಾಷ್ಟ್ರೀಯ ತಾರೆಯರು ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಟ್ವೀಟ್ ಮಾಡುವ ಮೂಲಕ ಭಾರತದ ಇಮೇಜ್ ಅನ್ನು ಹಾಳುಮಾಡಲು ಪ್ರಯತ್ನಿಸಿದ್ದರು.


ಇದನ್ನು ಓದಿ-'ಕೇಂದ್ರವು ಲತಾ ಮಂಗೇಶ್ಕರ್ ಮತ್ತು ಸಚಿನ್ ಅವರ ಪ್ರತಿಷ್ಠೆಯನ್ನು ಕಸಿದುಕೊಳ್ಳಬಾರದು'


ಇದಾದ ಬಳಿಕ ಅವರಿಗೆ ವಿರೋಧವನ್ನು ವ್ಯಕ್ತಪಡಿಸಿದ್ದ ಸಚಿನ್ ತೆಂಡೂಲ್ಕರ್, ಲತಾ ಮಂಗೇಶ್ಕರ್, ವಿರಾಟ್ ಕೊಹ್ಲಿ ಹಾಗೂ ಅಕ್ಷಯ್ ಕುಮಾರ್ (Akshay Kumar) ಸೇರಿದಂತೆ ಹಲವು ಗಣ್ಯರು 'ಹ್ಯಾಶ್ ಟ್ಯಾಗ್ ಇಂಡಿಯಾ ಟುಗೆದರ್' ಹಾಗೂ 'ಹ್ಯಾಶ್ ಟ್ಯಾಗ್ ಇಂಡಿಯಾ ಅಗೆನ್ಸ್ಟ್ ಪ್ರಾಪಗೇಂಡಾ' ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಟ್ವೀಟ್ ಮಾಡಿದ್ದರು. ಮೋದಿ ಸರ್ಕಾರ ಕೈಗೊಂಡ ನಿರ್ಣಯವನ್ನು ಸಮರ್ಥಿಸಿ ಈ ಎಲ್ಲಾ ಗಣ್ಯರು ಟ್ವೀಟ್ ಮಾಡಿ, ರೈತರ ಪ್ರತಿಭಟನೆ ಭಾರತದ ಆಂತರಿಕ ವಿಷಯವಾಗಿದೆ ಎಂದು ವಾದಿಸಿದ್ದರು.


ಇದನ್ನು ಓದಿ-Twitter ನಿಂದ 1178 ಪಾಕ್-ಖಲಿಸ್ತಾನಿ ಖಾತೆಗಳನ್ನು ತೆಗೆದುಹಾಕಲು ಮೋದಿ ಸರ್ಕಾರದ ಫರ್ಮಾನು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.