Twitter ನಿಂದ 1178 ಪಾಕ್-ಖಲಿಸ್ತಾನಿ ಖಾತೆಗಳನ್ನು ತೆಗೆದುಹಾಕಲು ಮೋದಿ ಸರ್ಕಾರದ ಫರ್ಮಾನು

Farmer Protest - ಸಂಸತ್ತು ಅಂಗೀಕರಿಸಿರುವ ಮೂರು ಕೃಷಿ ಕಾನೂನುಗಳಿಗಾಗಿ ರೈತರ ಸಂಘಟನೆಗಳು ನಡೆಸುತ್ತಿರುವ ಆಂದೋಲನವು ಎರಡೂವರೆ ತಿಂಗಳಿಗೂ ಹೆಚ್ಚು ಕಾಲ ಮುಂದುವರೆದಿದೆ. 

Written by - Nitin Tabib | Last Updated : Feb 8, 2021, 11:49 AM IST
  • ಕೃಷಿ ಕಾನೂನುಗಳ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ ಮುಂದುವರೆದಿದೆ.
  • ಏತನ್ಮಧ್ಯೆ ಸರ್ಕಾರ 1178 ಪಾಕಿಸ್ತಾನಿ-ಖಲಿಸ್ಥಾನಿ twitter ಹ್ಯಾಂಡಲ್ ಗಳನ್ನು ಬಂದ್ ಮಾಡಲು ಟ್ವಿಟ್ಟರ್ ಗೆ ಸೂಚಿಸಿದೆ ಎನ್ನಲಾಗಿದೆ.
  • ಆದರೆ ಇದುವರೆಗೆ ಸರ್ಕಾರ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ
Twitter ನಿಂದ 1178 ಪಾಕ್-ಖಲಿಸ್ತಾನಿ ಖಾತೆಗಳನ್ನು ತೆಗೆದುಹಾಕಲು ಮೋದಿ ಸರ್ಕಾರದ ಫರ್ಮಾನು  title=
Farmers Protest (File Photo)

Farmer Protest - ನವದೆಹಲಿ: ಸಂಸತ್ತು ಅಂಗೀಕರಿಸಿರುವ ಮೂರು ಕೃಷಿ ಕಾನೂನುಗಳಿಗಾಗಿ ರೈತರ ಸಂಘಟನೆಗಳು ನಡೆಸುತ್ತಿರುವ ಆಂದೋಲನವು ಎರಡೂವರೆ ತಿಂಗಳಿಗೂ ಹೆಚ್ಚು ಕಾಲ ಮುಂದುವರೆದಿದೆ. ಅವರು ಸರ್ಕಾರದೊಂದಿಗೆ ಹಲವಾರು ಸುತ್ತಿನ ಮಾತುಕತೆ ನಡೆಸಿದ್ದಾರೆ, ಆದರೆ ಇದುವರೆಗೂ ಯಾವುದೇ ಪರಿಹಾರ ಕಂಡುಕೊಳ್ಳಲಾಗಿಲ್ಲ. ಇತ್ತೀಚೆಗೆ, ಗಣರಾಜ್ಯೋತ್ಸವದ ಟ್ರಾಕ್ಟರ್ ಮೆರವಣಿಗೆಯಲ್ಲಿ, ಕೆಂಪು ಕೋಟೆಯಲ್ಲಿ ಹಿಂಸಾತ್ಮಕ ಪ್ರದರ್ಶನ ನಡೆಸಲಾಗಿತ್ತು. ಅಂದಿನಿಂದ ದೆಹಲಿ ಪೊಲೀಸರು ಮತ್ತು ಸರ್ಕಾರ ಜಾಗರೂಕತೆಯನ್ನು ಹೆಚ್ಚಿಸಿದೆ. ಸದ್ಯ ಜಾಗರೂಕತೆಯನ್ನು ರಸ್ತೆಯಿಂದ ಸೋಷಿಯಲ್ ಮೀಡಿಯಾಕ್ಕೆ ಕೊಂಡೊಯ್ಯಲಾಗುತ್ತಿದೆ.

ಏತನ್ಮಧ್ಯೆ, ರೈತರ ಪ್ರತಿಭಟನೆಯ(Farmer Protest) ಬಗ್ಗೆ ಸುಳ್ಳು ಮತ್ತು ಪ್ರಚೋದನಾತ್ಮಕ ಮಾಹಿತಿಯನ್ನು ಹರಡುವ 1178 ಪಾಕಿಸ್ತಾನಿ (Pakistan)-ಖಲಿಸ್ತಾನಿ ಖಾತೆಗಳನ್ನು (Twitter Accounts) ತೆಗೆದುಹಾಕಲು ಸರ್ಕಾರ ಟ್ವಿಟ್ಟರ್ಗೆ (Twitter)ಸೂಚಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ಮೂಲಗಳನ್ನು ಉಲ್ಲೇಖಿಸಿವೆ. ಕೆಂಪು ಕೋಟೆಯ ಹಿಂಸಾತ್ಮ ಪ್ರತಿಭಟನೆಯ ಬಳಿಕ  ಖಲಿಸ್ತಾನ್ (Khalistan) ಹೆಸರು ಈ ಚಳುವಳಿಯ ಜೊತೆಗೆ ಸಾಕಷ್ಟು ತೊಡಕುಹಾಕಿಕೊಂಡಿದೆ. ಆದರೆ, ಇದುವರೆಗೆ ಸರ್ಕಾರ ಈ ಕುರಿತು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

ಇದನ್ನು  ಓದಿ- Farmers Bill: ರೈತರ ಕೃಷಿ ಮಸೂದೆಗೆ ಬೆಂಬಲ ಸೂಚಿಸಿದ ಅಮೇರಿಕ..!

ಈ ನಿರ್ದೇಶನಗಳನ್ನು ಮೂರು ದಿನಗಳ ಹಿಂದೆಯೇ ಸರ್ಕಾರ ಟ್ವಿಟರ್‌ಗೆ ಕಳುಹಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಅಧಿಕಾರಿಯೊಬ್ಬರು. " ಈ ಹಿಂದೆ 257 ಟ್ವಿಟ್ಟರ್ ಖಾತೆಗಳನ್ನು ಗುರುತಿಸಿದಂತೆ, ಇವುಗಳನ್ನು ಸಹ ಅದೇ  ರೀತಿಯಲ್ಲಿ ಆಯ್ಕೆ ಮಾಡಲಾಗಿದೆ" ಎಂದು ಹೇಳಿದ್ದಾರೆ. ಐಟಿ ಕಾಯ್ದೆಯ ಸೆಕ್ಷನ್ 69 (ಎ) ಅಡಿಯಲ್ಲಿ ಈ ನಿರ್ದೇಶನಗಳನ್ನು ಹೊರಡಿಸಲಾಗಿದ್ದು, ಇದು ದೇಶಕ್ಕೆ ಅಪಾಯವನ್ನುಂಟು ಮಾಡುವಂತಹ ಪೋಸ್ಟ್‌ಗಳು ಮತ್ತು ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಅವಕಾಶ ನೀಡುತ್ತದೆ ಎಂದು ಹೇಳಿದ್ದಾರೆ.

ಇದನ್ನು ಓದಿ- ರೈತ ಹೋರಾಟದಲ್ಲಿ ಸ್ಟಾರ್ ವಾರ್..! ಹೋರಾಟಕ್ಕೆ ಸ್ವೀಡನ್ನಿನ ಚಳುವಳಿಗಾರ್ತಿ ಗ್ರೇಟಾ ಬೆಂಬಲ

ದೆಹಲಿಗೆ ಹೊಂದಿಕೊಂಡಂತೆ ಇರುವ ಗಡಿಯಲ್ಲಿ ರೈತರು ಎಲ್ಲೆಲ್ಲಿ ಪ್ರತಿಭಟನೆ ಅಲ್ಲಲ್ಲಿ ಮತ್ತು ದೆಹಲಿಗೆ ಹೋಗುವ ರಸ್ತೆಗಳನ್ನು ಕಂಟೋನ್ಮೆಂಟ್ ಆಗಿ ಪರಿವರ್ತಿಸಲಾಗಿದೆ. ಮುಳ್ಳುತಂತಿ ಮತ್ತು ಬ್ಯಾರಿಕೇಡ್‌ಗಳಿಂದ ರಸ್ತೆಗಳನ್ನು ಮುಚ್ಚಲಾಗಿದೆ. ಸುಮಾರು ಐದು ಪದರಗಳ ಬ್ಯಾರಿಕೇಡ್‌ಗಳನ್ನು ಸ್ಥಾಪಿಸಲಾಗಿದೆ. ಗಣರಾಜ್ಯೋತ್ಸವದಂದು ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆ  ಜಾಗರೂಕತೆ ಹೆಚ್ಚಿಸಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. 

ಇದನ್ನು ಓದಿ-Farmer Protest: ಅಕ್ಟೋಬರ್ ವರೆಗೂ ಮುಂದುವರೆಯಲಿದೆ ದೆಹಲಿ ರೈತರ ಪ್ರತಿಭಟನೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News