Maharashtra Political Crisis: `40 ಶವಗಳು ಅಸ್ಸಾಂನಿಂದ ಹಿಂದಿರುಗಲಿವೆ, ಅವುಗಳನ್ನು ಮರಣೋತ್ತರ ಪರೀಕ್ಷೆಗಾಗಿ ನೇರವಾಗಿ ಶವಾಗಾರಕ್ಕೆ ಕಳುಹಿಸಲಾಗುವುದು`
Maharashtra Political Crisis: ಮಹಾರಾಷ್ಟ್ರದಲ್ಲಿ ಮುಂದುವರೆದ ರಾಜಕೀಯ ಬಿಕ್ಕಟ್ಟು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದೀಗ ಶಿವಸೇನಾ ಸಂಸದ ಸಂಜಯ್ ರಾವುತ್ ಬಂಡಾಯ ಶಾಸಕರ ಬಗ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.
Maharashtra Political Crisis: ಖುರ್ಚಿಗಾಗಿ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಶಿವಸೇನಾ ಸಂಸದ ನಿರಂತರ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ರಾವುತ್ ನೇತೃತ್ವದಲ್ಲಿ ಶಿವಸೇನಾ ಮುಖನರು ಬಂಡೆದ್ದ ಶಾಸಕರ ಮೇಲೆ ನಿರಂತರ ವಾಗ್ದಾಳಿ ಮುಂದುವರೆಸಿದ್ದಾರೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಸುಪ್ರಿಮೋ ಶರದ್ ಪವಾರ್ ಅವರು ಮಹಾವಿಕಾಸ್ ಆಘಾಡಿ ಶಾಸಕರ ಜೊತೆಗೆ ಮುಚ್ಚಿದ ಬಾಗಿಲುಗಳ ಹಿಂದೆ ನಿರಂತರ ಸಭೆ ನಡೆಸುತ್ತಿದ್ದಾರೆ. ಇಂದು ಮುಂಬೈ ಮತ್ತು ಪುಣೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಸತತ ಎರಡನೇ ದಿನವಾದ ಇಂದೂ ಕೂಡ ಬಂಡಾಯ ಶಾಸಕರ ವಿರುದ್ಧ ಪ್ರತಿಭಟನೆಗಳು ನಡೆಯುತ್ತಲೇ ಇವೆ.
Maharashtra Political crisis : ಉದ್ಧವ್ ಠಾಕ್ರೆಗೆ ಬಿಗ್ ಶಾಕ್ : ಶಿಂಧೆ ಬಣ ಸೇರಲು ಗುವಾಹಟಿ ತಲುಪಿದ ಮತ್ತೆ 4 ಜನ ಶಾಸಕರು!
ಕಾರ್ಯಕರ್ತರ ಜೊತೆಗೆ ಮಾತುಕತೆ ನಡೆಸಿದ ಆದಿತ್ಯ ಠಾಕ್ರೆ
ಮಹಾರಾಷ್ಟ್ರದಲ್ಲಿ ಮುಂದುವರೆದ ರಾಜಕೀಯ ಬಿಕ್ಕಟ್ಟಿನ ನಡುವೆಯೇ ಇಂದು ರಾಜ್ಯ ಸಚಿವ ಮತ್ತು ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಮತ್ತು ಪಕ್ಷದ ವಕ್ತಾರ ಸಂಜಯ್ ರಾವುತ್ ಅವರು ಉಪನಗರ ದಹಿಸರ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ, ಅವರು ಗೊಂದಲಕ್ಕೊಳಗಾದ ಪಕ್ಷದ ನಾಯಕತ್ವಕ್ಕೆ ಬೆಂಬಲ ಪಡೆಯುವ ಪ್ರಯತ್ನ ನಡೆಸಿದ್ದಾರೆ ಮತ್ತು ಶಿಂಧೆ ಬಣದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಇನ್ನೊಂದೆಡೆ ಎನ್ಸಿಪಿ ಮುಖ್ಯಸ್ಥರಾಗಿರುವ ಶರದ್ ಪವಾರ್, ಎನ್‌ಸಿಪಿ ನಾಯಕರು, ಕಾಂಗ್ರೆಸ್ ಸಚಿವರಾದ ಬಾಳಾಸಾಹೇಬ್ ಥೋರಾತ್, ಅಶೋಕ್ ಚವಾಣ್ ಮತ್ತು ಶಿವಸೇನೆಯ ಅನಿಲ್ ಪರಬ್, ಅನಿಲ್ ದೇಸಾಯಿ ಅವರನ್ನು ಭೇಟಿ ಮಾಡಿ, ಕಳೆದ ಆರು ದಿನಗಳಿಂದ ರಾಜ್ಯದಲ್ಲಿ ಭುಗಿಲೆದ್ದ ಬಂಡಾಯ ರಾಜಕೀಯದ ಪರಿಣಾಮಗಳ ಕುರಿತು ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ-Yogi Adityanath : ಅಜಂಗಢ, ರಾಂಪುರ ಬೈ ಎಲೆಕ್ಷನ್ ಬಿಜೆಪಿ ಗೆಲವು : ಗರ್ಜಿಸಿದ ಸಿಎಂ ಯೋಗಿ!
ಬಂಡಾಯ ನಾಯಕರ ಗುಂಪು ಸೇರಿದ ಮತ್ತೋರ್ವ ಶಿವಸೇನಾ ಮಂತ್ರಿ
ಏತನ್ಮಧ್ಯೆ ಮತ್ತೋರ್ವ ಶಿವಸೇನಾ ಮುಖಂಡ ಮತ್ತು ಹಾಲಿ ಉನ್ನತ ಹಾಗೂ ತಾಂತ್ರಿಕ ಶಿಕ್ಷಣದ ಕ್ಯಾಬಿನೆಟ್ ಸಚಿವ ಉದಯ್ ಸಾಮಂತ್ ಅವರ ಸಂಪರ್ಕ ಕಡಿತಗೊಂಡಿದೆ. ಅವರೂ ಕೂಡ ಸೂರತ್ ನಿಂದ ಗುವಾಹಾಟಿಗೆ ಪ್ರಯಾಣ ಬೆಳೆಸಲಿದ್ದಾರೆ ಎನ್ನಲಾಗಿದೆ. ಇದುವರೆಗೆ ರಾಜ್ಯದ ಕ್ಯಾಬಿನೆಟ್ ಸಚಿವರಾಗಿರುವ ಗುಲಾಬ್ ರಾವ್ ಪಾಟೀಲ್, ದಾದಾ ಭುಸ್, ಸಂದೀಪ್ ಭುಮರೆ ಹಾಗೂ ರಾಜ್ಯ ಸಚಿವ ಶಂಬುರಾಜೆ ದೇಸಾಯಿ ಹಾಗೂ ಅಬ್ದುಲ್ ಸತ್ತಾರ್ ವಿರೋಧಿಗಳ ಬಣ ಸೇರಿಕೊಂಡಿದ್ದಾರೆ. ಪ್ರಹಾರ ಜನಶಕ್ತಿ ಪಕ್ಷದ ಮತ್ತೋರ್ವ ಮಂತ್ರಿ ಬಚ್ಚು ಕಡು ಹಾಗೂ ಶಿವಸೇನಾ ಬಣದ ಪಕ್ಷೇತರ ಅಭ್ಯರ್ಥಿ ರಾಜೇಂದ್ರ ಯೆದ್ರಾವ್ಕರ್ ಕೂಡ ಶಿಂಧೆ ಬಣದ ಜೊತೆಗೆ ಗುವಾಹಾಟಿಯಲ್ಲಿ ತಮ್ಮ ಠಿಕಾಣಿ ಹೂಡಿದ್ದಾರೆ ಎನ್ನಲಾಗಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.