Maharashtra Political Crisis : ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ನಡುವೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಇಂದು (ಬುಧವಾರ) ಸಂಜೆಯೊಳಗೆ ಉದ್ಧವ್ ಠಾಕ್ರೆ  ಸ್ಥಾನಕ್ಕೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬಹುದು. ಈ ಬಗ್ಗೆ ಶಿವಸೇನೆ ಸಂಸದ ಸಂಜಯ್ ರಾವುತ್ ಟ್ವೀಟ್ ಮೂಲಕ ಸುಳಿವು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಟ್ವೀಟ್ ನಲ್ಲಿ ಸಂಜಯ್ ರಾವುತ್, ಈ ಬೆಳವಣಿಗೆಗಳು ವಿಧಾನಸಭೆ ವಿಸರ್ಜನೆಗೆ ಕಾರಣವಾಗಿವೆ ಎಂದು ಬರೆದುಕೊಂಡಿದ್ದಾರೆ. 


ಇದನ್ನೂ ಓದಿ : Maharashtra Political Crisis: ಮಹಾರಾಷ್ಟ್ರ ವಿಧಾನಸಭೆ ವಿಸರ್ಜನೆಯ ಹಿಂಟ್‌ ಕೊಟ್ಟ ರಾವತ್‌


ನಂತರ ಈ ಬಗ್ಗೆ ಮಾಧ್ಯಮದವರ ಜೊತೆ ಸಂಜಯ್ ರಾವುತ್ ಮಾತನಾಡಿದ ಅವರು, ಹೆಚ್ಚೆಂದರೆ ಏನಾಗುತ್ತದೆ, ರಾಜ್ಯದಲ್ಲಿ ನಮ್ಮ ಸರ್ಕಾರ ಬಹುಮತವನ್ನು ಕಳೆದುಕೊಳ್ಳುತ್ತದೆ. ನಾವು ಅಧಿಕಾರಕ್ಕೆ ಮರಳಬಹುದು, ಆದರೆ ಪಕ್ಷದ ಇಮೇಜ್ ಮೇಲಿರುತ್ತದೆ ಎಂದು ಹೇಳಿದ್ದಾರೆ.


ಮಹಾರಾಷ್ಟ್ರ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ತಮ್ಮ ಟ್ವಿಟ್ಟರ್ ಅಕೌಂಟ್ ಬಯೋದಿಂದ ಸಚಿವರ ಹುದ್ದೆಯನ್ನು ತೆಗೆದುಹಾಕಿ 'ಯುವಸೇನಾ ಅಧ್ಯಕ್ಷ' ಎಂದು ಬರೆದುಕೊಂಡಿದ್ದಾರೆ. 


ಇದನ್ನೂ ಓದಿ : Maharashtra Political Crisis : ಶಿಂಧೆ-ಬಿಜೆಪಿ, ಶಿವಸೇನೆ-BJP : ಇವರಿಗೆ ಮಹಾದಲ್ಲಿ ಸರ್ಕಾರ ರಚಿಸಲು ಈ 5 ಆಯ್ಕೆಗಳು!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.