Maharashtra Politics: `ಅಣ್ಣನ ಎಲ್ಲಾ ಇಚ್ಚೆಗಳು ನೆರವೇರಲಿ` ಅಜೀತ್ ಪವಾರ್ ಕುರಿತು ಸಹೋದರಿ ಸುಪ್ರಿಯಾ ಸುಳೆ ಹೀಗೆ ಹೇಳಿದ್ದೇಕೆ?
Maharashtra Politics: `ಓರ್ವ ಸಹೋದರಿಯಾಗಿ ನನ್ನ ಅಣ್ಣನ ಎಲ್ಲಾ ಆಸೆಗಳು ಈಡೇರಬೇಕು ಎಂಬುದೇ ನನ್ನ ಆಶಯ` ಎಂದು ಸುಳೆ ಹೇಳಿದ್ದಾರೆ. ಇನ್ನೊಂದೆಡೆ ವಿರೋಧ ಪಕ್ಷದ ಮುಖಂಡನಾಗಿ ತಾವು ನಾನು ಕಟ್ಟುನಿಟ್ಟಾಗಿ ವ್ಯವಹರಿಸುವುದಿಲ್ಲ ಎಂದು ನನಗೆ ಹೇಳಲಾಗಿದೆ ಎಂದು ಅಜಿತ್ ಪವರ್ ಹೇಳಿದ್ದಾರೆ.
Maharashtra Politics: ಪ್ರತಿಪಕ್ಷ ನಾಯಕನ ಜವಾಬ್ದಾರಿಯಿಂದ ಮುಕ್ತಗೊಳಿಸಿದ್ದಕ್ಕಾಗಿ ಮತ್ತು ಪಕ್ಷದಲ್ಲಿ ಅವರ ಸ್ಥಾನಮಾನದ ಕುರಿತು ಅಜಿತ್ ಪವಾರ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರ ಸಹೋದರಿ ಹಾಗೂ ಪಕ್ಷದ ಕಾರ್ಯಕಾರಿ ಅಧ್ಯಕ್ಷೆ ಸುಪ್ರಿಯಾ ಸುಳೆ ಅವರನ್ನು ಅಭಿನಂದಿಸಿದ್ದಾರೆ. ಅಜಿತ್ ಪವಾರ್ ಅವರ ಆಸೆ ಈಡೇರಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ಸುಪ್ರಿಯಾ ಹೇಳಿದ್ದಾರೆ. ಪಕ್ಷದಲ್ಲಿ ಅವರಿಗೆ ಯಾವ ಸ್ಥಾನಮಾನ ನೀಡಬೇಕು ಎಂಬುದನ್ನೂ ಪಕ್ಷದ ನೇತೃತ್ವ ನಿರ್ಧರಿಸುತ್ತದೆ. ಹೀಗಾಗಿ ಓರ್ವ ಸಹೋದರಿಯಾಗಿ ತಮ್ಮ ಸಹೋದರನ ಎಲ್ಲಾ ಇಚ್ಚೆಗಳು ಈಡೇರಬೇಕು ಎಂಬುದು ತಮ್ಮ ಬಯಕೆಯಾಗಿದೆ ಎಂದೂ ಕೂಡ ಸುಪ್ರಿಯಾ ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಜವಾಬ್ದಾರಿಯಿಂದ ತಮ್ಮನ್ನು ಮುಕ್ತಗೊಳಿಸಬೇಕು ಮತ್ತು ಪಕ್ಷ ಸಂಘಟನೆಯಲ್ಲಿ ಒಂದು ಪಾತ್ರವನ್ನು ತಮಗೆ ನಿಯೋಜಿಸಬೇಕು ಎಂದು ಅಜಿತ್ ಪವಾರ್ ಬುಧವಾರ ಪಕ್ಷದ ನಾಯಕತ್ವಕ್ಕೆ ಮನವಿ ಮಾಡಿದ್ದಾರೆ. ಅವರ ಹೇಳಿಕೆಗೆ ಸುಪ್ರಿಯಾ ಸುಳೆ, 'ಅಜಿತ್ ದಾದಾ ಅವರ ಆಸೆ ಈಡೇರಲಿ ಎಂದು ನಾನು ಬಯಸುತ್ತೇನೆ, ದಾದಾಗೆ ಪಕ್ಷ ಸಂಘಟನೆಯಲ್ಲಿ ಅವಕಾಶ ನೀಡಬೇಕೆ ಅಥವಾ ಬೇಡವೇ ಎಂಬುದು ಒಂದು ಸಂಘಟನಾತ್ಮಕ ನಿರ್ಧಾರವಾಗಿದೆ. ದಾದಾ ಕೆಲಸ ಮಾಡಲು ಬಯಸಿದ್ದು ನನಗೆ ತುಂಬಾ ಸಂತೋಷ ತಂದಿದೆ. ಇದರಿಂದಾಗಿ ಸಂಘಟನೆಯ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿದೆ.
ಒಬ್ಬ ಸಹೋದರಿಯಾಗಿ ಅಣ್ಣನ ಇಷ್ಟಾರ್ಥಗಳು ಈಡೇರಲಿ ಎಂದು ಹಾರೈಸುತ್ತೇನೆ’ ಎಂದು ಸುಳೆ ಹೇಳಿದ್ದಾರೆ. ವಿರೋಧ ಪಕ್ಷದ ನಾಯಕನಾಗಿ ನಾನು ಕಟ್ಟುನಿಟ್ಟಾಗಿ ನಡೆದುಕೊಳ್ಳುವುದಿಲ್ಲ ಎಂದು ಕೆಲವರು ಹೇಳಿದ್ದಾರೆ ಎಂದು ಅಜಿತ್ ಪವಾರ್ ಹೇಳಿದ್ದರು. ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಲು ನಾನು ಎಂದಿಗೂ ಆಸಕ್ತಿ ಹೊಂದಿಲ್ಲ, ಆದರೆ ಪಕ್ಷದ ಶಾಸಕರ ಬೇಡಿಕೆಯ ಮೇರೆಗೆ ಈ ಪಾತ್ರವನ್ನು ಒಪ್ಪಿಕೊಂಡೆ. ಪಕ್ಷ ಸಂಘಟನೆಯಲ್ಲಿ ನನಗೆ ಯಾವುದೇ ಸ್ಥಾನ ನೀಡಲಿ, ನನಗೆ ಯಾವುದೇ ಜವಾಬ್ದಾರಿ ನೀಡಿದರೂ ಅದಕ್ಕೆ ಸಂಪೂರ್ಣ ನ್ಯಾಯ ಒದಗಿಸುತ್ತೇನೆ. ತಮ್ಮ ಈ ಬೇಡಿಕೆಯ ಬಗ್ಗೆ ಪಕ್ಷದ ನಾಯಕತ್ವ ನಿರ್ಧರಿಸುತ್ತದೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.
ಇದನ್ನೂ ಓದಿ-Fitch Ratings: 2023-24 ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಮುನ್ಸೂಚನೆಯನ್ನು ಮತ್ತೊಮ್ಮೆ ಅಂದಾಜಿಸಿದ ಫೀಚ್
ಜೂನ್ 10 ರಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ತಮ್ಮ ಪುತ್ರಿ ಸುಪ್ರಿಯಾ ಸುಳೆ ಮತ್ತು ಪಕ್ಷದ ಹಿರಿಯ ಪ್ರಫುಲ್ ಪಟೇಲ್ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಘೋಷಿಸಿದ್ದರು. ಉನ್ನತ ಹುದ್ದೆಗೆ ಮುಂಚೂಣಿಯಲ್ಲಿರುವ ಅಜಿತ್ ಪವಾರ್ ನಂತರ ಹೊಸದಾಗಿ ಆಯ್ಕೆಯಾದ ನಾಯಕರನ್ನು ಅಭಿನಂದಿಸಿದ್ದರು.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ