SC: ಅಸಲಿ ಶಿವಸೇನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಧವ್ ಬಣಕ್ಕೆ ಭಾರಿ ಹಿನ್ನಡೆ, ಸುಪ್ರೀಂ ಹೇಳಿದ್ದೇನು?
Supreme Court On Shiva Sena: ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ಕುರಿತು ಸುಪ್ರೀಂ ಕೋರ್ಟ್ನ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ಪ್ರಕಟಿಸಿದೆ. ಅಸಲಿ ಶಿವಸೇನಾ ಪ್ರಕರಣಕ್ಕೆ ಸಂಬಂಧಿದಂತೆ ಉದ್ಧವ್ ಬಣ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗದ ಕ್ರಮಕ್ಕೆ ತಡೆ ನೀಡಲು ನಿರಾಕರಿಸಿದೆ.
Shiva Sena Conflict: ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ಕುರಿತು ಸುಪ್ರೀಂ ಕೋರ್ಟ್ನ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ಪ್ರಕಟಿಸಿದೆ. ಅಸಲಿ ಶಿವಸೇನಾ ಪ್ರಕರಣಕ್ಕೆ ಸಂಬಂಧಿದಂತೆ ಉದ್ಧವ್ ಬಣ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗದ ಕ್ರಮಕ್ಕೆ ತಡೆ ನೀಡಲು ನಿರಾಕರಿಸಿದೆ. ಸುಪ್ರೀಂ ಕೋರ್ಟ್ ನ ಈ ತೀರ್ಪಿನಿಂದ ಏಕನಾಥ್ ಶಿಂದೆ ಬಣಕ್ಕೆ ಬಾರಿ ನೆಮ್ಮದಿ ಸಿಕ್ಕಂತಾಗಿದೆ.
ಶಿವಸೇನೆಯ ಯಾವ ಬಣ ನಿಜವಾದದ್ದು ಮತ್ತು ಶಿವಸೇನೆಯ ಚುನಾವಣಾ ಚಿಹ್ನೆಯನ್ನು ಯಾವ ಬಣಕ್ಕೆ ನೀಡಬೇಕು ಎಂಬುದನ್ನು ನಿರ್ಧರಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಅನುಮತಿ ನೀಡಿದೆ. ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ ಸುಪ್ರೀಂ ಕೋರ್ಟ್ ನಂತರ ಪ್ರಕರಣದ ವಿಚಾರಣೆಗೆ ತಡೆ ನೀಡಲು ನಿರಾಕರಿಸಿತು ಮತ್ತು ಇದೇ ವೇಳೆ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಇದನ್ನೂ ಓದಿ-Congress President Election: ಸೆಪ್ಟೆಂಬರ್ 30ರಂದು ಶಶಿ ತರೂರ್ ನಾಮಪತ್ರ ಸಲ್ಲಿಕೆ, ಫಾರ್ಮ್ ಪಡೆದ ಪವನ್ ಬನ್ಸಲ್
ಪ್ರಕರಣದ ಎರಡನೇ ಬಣವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮುನ್ನಡೆಸುತ್ತಿದ್ದಾರೆ ಉಮ್ಬುದು ಇಲ್ಲಿ ಉಲ್ಲೇಖನೀಯ. ಶಿವಸೇನೆಯ ಬಹುತೇಕ ಶಾಸಕರು ಮತ್ತು ಸಂಸದರು ತಮ್ಮ ಪಾಳೆಯದ ಭಾಗವಾಗಿದ್ದಾರೆ ಎಂಬುದು ಶಿಂಧೆ ಬಣದ ವಾದ ಮಂಡಿಸಿತ್ತು. ಇಂತಹ ಪರಿಸ್ಥಿತಿಯಲ್ಲಿ ಶಿವಸೇನೆಯ ಚುನಾವಣಾ ಚಿಹ್ನೆಯನ್ನು ತಮಗೆ ನೀಡಬೇಕು ಎಂದು ಅದು ವಾದಿಸಿದೆ.
ಇದನ್ನೂ ಓದಿ-Rajasthan Political Crisis: ರಾಷ್ಟ್ರಪತಿ ಆಡಳಿತದತ್ತ ಸಾಗುತ್ತಿದೆಯೇ ರಾಜಸ್ಥಾನ? ಬಿಜೆಪಿ ತಂತ್ರ ಏನು?
ಇದಕ್ಕೂ ಮೊದಲು ಈ ಕುರಿತು ಹೇಳಿಕೆ ನೀಡಿದ್ದ ಶಿವಸೇನಾ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಬಂಡಾಯ ತಂಡದ ವಿರುದ್ದ ಕಾನೂನಿನ ಹೋರಾಟದಲ್ಲಿ ತಮಗೆ ಜಯ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.