Congress President Election: ಸೆಪ್ಟೆಂಬರ್ 30ರಂದು ಶಶಿ ತರೂರ್ ನಾಮಪತ್ರ ಸಲ್ಲಿಕೆ, ಫಾರ್ಮ್ ಪಡೆದ ಪವನ್ ಬನ್ಸಲ್

Congress President Election: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಶಿ ತರೂರ್ ಬಳಿಕ ಇದೀಗ ಪಕ್ಷದ ಕೋಶಾಧ್ಯಕ್ಷ ಪವನ್ ಬನ್ಸಲ್ ಅವರು ಕೂಡ ನಾಮಪತ್ರ ಪಡೆದುಕೊಂಡಿದ್ದಾರೆ.  

Written by - Nitin Tabib | Last Updated : Sep 27, 2022, 04:15 PM IST
  • ಪ್ರಸ್ತುತ ಎಐಸಿಸಿ ಖಜಾಂಚಿಯಾಗಿರುವ ಪವನ್ ಕುಮಾರ್ ಬನ್ಸಲ್ ನಾಮಪತ್ರದ
  • ಫಾರ್ಮ್ ಪಡೆದುಕೊಂಡಿದ್ದಾರೆ ಎಂದು ಮಧುಸೂದನ್ ಮಿಸ್ತ್ರಿ ತಿಳಿಸಿದ್ದಾರೆ.
  • ಇದೇ ವೇಳೆ ಬೇರೆಯವರೂ ಕೂಡ ಪಡೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
Congress President Election: ಸೆಪ್ಟೆಂಬರ್ 30ರಂದು ಶಶಿ ತರೂರ್ ನಾಮಪತ್ರ ಸಲ್ಲಿಕೆ, ಫಾರ್ಮ್ ಪಡೆದ ಪವನ್ ಬನ್ಸಲ್ title=
Congress President Election

Congress President Election: ಹಿರಿಯ ನಾಯಕ ಮತ್ತು ಸಂಸದ ಶಶಿ ತರೂರ್ ಅವರು ಸೆಪ್ಟೆಂಬರ್ 30 ರಂದು ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಸೆಪ್ಟೆಂಬರ್ 30 ರಂದು ಬೆಳಗ್ಗೆ 11 ಗಂಟೆಗೆ ಅವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಶಶಿ ತರೂರ್ ಅವರ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ ಎಂದು ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಮಂಗಳವಾರ ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ಇದುವರೆಗೆ ಮಾಡಿದ ಎಲ್ಲಾ ಕೆಲಸಗಳ ಬಗ್ಗೆ ನಾವು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮಾಹಿತಿ ನೀಡಿರುವುದಾಗಿ ಮಿಸ್ತ್ರಿ ಹೇಳಿದ್ದಾರೆ. ನಿಗದಿತ ವೇಳಾಪಟ್ಟಿಯಂತೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಶಶಿ ತರೂರ್‌ಗೆ ಯಾರು ಪೈಪೋಟಿ ನೀಡಬಹುದು ಎಂಬ ಸಸ್ಪೆನ್ಸ್ ನಡುವೆ  ಇದೀಗ ಪಕ್ಷದ ಕೋಶಾಧ್ಯಕ್ಷ ಪವನ್ ಬನ್ಸಲ್ ಅವರು ಕೂಡ ನಾಮಪತ್ರ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಫಾರ್ಮ್ ಪಡೆದ ಪವನ್ ಬನ್ಸಲ್ 
ಪ್ರಸ್ತುತ ಎಐಸಿಸಿ ಖಜಾಂಚಿಯಾಗಿರುವ ಪವನ್ ಕುಮಾರ್ ಬನ್ಸಲ್ ನಾಮಪತ್ರದ ಫಾರ್ಮ್ ಪಡೆದುಕೊಂಡಿದ್ದಾರೆ ಎಂದು ಮಧುಸೂದನ್ ಮಿಸ್ತ್ರಿ ತಿಳಿಸಿದ್ದಾರೆ. ಇದೇ ವೇಳೆ ಬೇರೆಯವರೂ ಕೂಡ ಪಡೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.ಎಐಸಿಸಿ ಪ್ರಧಾನ ಕಛೇರಿಯಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಿಸ್ತ್ರಿ, ಮಂಗಳವಾರ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಅವರ 10 ಜನಪಥ್ ನಿವಾಸದಲ್ಲಿ ಭೇಟಿ ಮಾಡಿ ಮತದಾರರ ಗುರುತಿನ ಚೀಟಿಯನ್ನು ಹಸ್ತಾಂತರಿಸಿದ್ದಾರೆ. ಇದುವರೆಗಿನ ಪ್ರಕ್ರಿಯೆ, ಎಷ್ಟು ಜನ ನಾಮಪತ್ರ ಸಲ್ಲಿಸಿದ್ದಾರೆ ಮತ್ತು ಪ್ರತಿನಿಧಿಗಳ ಬಗ್ಗೆ ಸೋನಿಯಾ ಗಾಂಧಿ ಅವರಿಗೆ ಮಾಹಿತಿ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ-Rajasthan Political Crisis: ರಾಷ್ಟ್ರಪತಿ ಆಡಳಿತದತ್ತ ಸಾಗುತ್ತಿದೆಯೇ ರಾಜಸ್ಥಾನ? ಬಿಜೆಪಿ ತಂತ್ರ ಏನು?

ಮಧುಸೂದನ್ ಮಿಸ್ತ್ರಿ ಹೇಳಿದ್ದೇನು?
ಬನ್ಸಲ್ ಸೋಮವಾರ ತಮ್ಮ ಕಚೇರಿಯಿಂದ ನಾಮಪತ್ರ ಸ್ವೀಕರಿಸಿದ್ದಾರೆ ಎಂದು ಮಿಸ್ತ್ರಿ ಹೇಳಿದ್ದಾರೆ. ಬನ್ಸಾಲ್ ಸ್ವಂತಕ್ಕೊಸ್ಕರ ಅಥವಾ ಬೇರೆಯವರಿಗೋಸ್ಕರ ಫಾರ್ಮ್ ತೆಗೆದುಕೊಂಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾಮಪತ್ರಗಳನ್ನು ಯಾರಿಗಾಗಿ ಸಂಗ್ರಹಿಸಲಾಗುತ್ತಿದೆ ಎಂದು ಕೇಳುವುದು ಪ್ರಕ್ರಿಯೆಯಲ್ಲದ ಕಾರಣ ಅವರು ಯಾರಿಗಾಗಿ ನಾಮಪತ್ರಗಳನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಮಿಸ್ತ್ರಿ ಹೇಳಿದ್ದಾರೆ.

ಇದನ್ನೂ ಓದಿ-Pilot Vs Gehlot: 'ಬಂಡಾಯ'ದ ಕುರಿತು ವಿಷಾಧ ವ್ಯಕ್ತಪಡಿಸಿದ ಗೆಹಲೋಟ್, ಇದನ್ನು ನಿರೀಕ್ಷಿಸಿರಲಿಲ್ಲ ಎಂದ ಸೋನಿಯಾ

ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಯಾವಾಗ
ಪಕ್ಷವು ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯು ಸೆಪ್ಟೆಂಬರ್ 24 ರಿಂದ ಸೆಪ್ಟೆಂಬರ್ 30 ರವರೆಗೆ ನಡೆಯಲಿದೆ. ನಾಮಪತ್ರಗಳ ಪರಿಶೀಲನೆಗೆ ಅಕ್ಟೋಬರ್ 1, ನಾಮಪತ್ರ ಹಿಂಪಡೆಯಲು ಅಕ್ಟೋಬರ್ 8 ಕೊನೆಯ ದಿನವಾಗಿದೆ. ಅಕ್ಟೋಬರ್ 8 ರಂದು ಸಂಜೆ 5 ಗಂಟೆಗೆ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ. ಅಗತ್ಯ ಬಿದ್ದರೆ ಅಕ್ಟೋಬರ್ 17ರಂದು ಮತದಾನ ನಡೆಯಲಿದೆ. ಅಕ್ಟೋಬರ್ 19 ರಂದು ಮತ ಎಣಿಕೆ ನಡೆಯಲಿದ್ದು, ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News