ಮುಂಬೈ: ಮಹಾರಾಷ್ಟ್ರದಲ್ಲಿ (Corona In Maharashtra) ಮ್ಯೂಕರ್ ಮೈಕೊಸಿಸ್ (ಸಿಲೀಂಧ್ರ ಸೋಂಕು)ನಿಂದ ಸುಮಾರು 8 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಜನರು ಕೊವಿಡ್ 19(Covid-19) ನಿಂದ ಗೆದ್ದುಬಂದಿದ್ದರು ಎನ್ನಲಾಗಿದೆ. ರಾಜ್ಯದಲ್ಲಿ ಇಂತಹ ಸುಮಾರು 200 ಜನರ ಮೇಲೆ ಉಪಚಾರ ನಡೆಯುತ್ತಿದೆ. ಈ ಕುರಿತು ಹೇಳಿಕೆ ನೀಡಿರುವ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ನಿರ್ದೇಶನಾಲಯ (DMER) ಮುಖ್ಯಸ್ಥ ಡಾ. ತಾತ್ಯಾರಾವ್ ಲಹಾನೆ, ಮ್ಯೂಕರ್ ಮೈಕೊಸಿಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಎಂದಿದ್ದಾರೆ.


COMMERCIAL BREAK
SCROLL TO CONTINUE READING

PTI-ಭಾಷಾ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಅವರು 'ರಾಜ್ಯದ ವಿಭಿನ್ನ ಭಾಗಗಳಲ್ಲಿ ಇದುವರೆಗೆ ಕೊರೊನಾದಿಂದ (Coronavirus) ಪಾರಾದ ಸುಮಾರು 200 ರೋಗಿಗಳ ಪೈಕಿ 8 ಜನರು ಮ್ಯೂಕರ್ ಮೈಕೊಸಿಸ್ ಅಥವಾ ಕಪ್ಪು  ಸಿಲೀಂಧ್ರದಿಂದ ಪ್ರಾಣಕಳೆದುಕೊಂಡಿದ್ದಾರೆ. ಈ ಎಲ್ಲರೂ ಕೂಡ ಕೊವಿಡ್ ನಿಂದ ಚೇತರಿಸಿಕೊಂಡಿದ್ದರು. ಆದರೆ, ಅವರಲ್ಲಿನ ಕ್ಷೀಣಗೊಂಡ ರೋಗ ಪ್ರತಿರೋಧಕ ಶಕ್ತಿಯ ಮೇಲೆ ಈ ಕಪ್ಪು ಸಿಲೀಂಧ್ರ ದಾಳಿ ನಡೆಸಿದ ಕಾರಣ ಅವರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.


ಹೇಗೆ ಈ ಸೋಂಕು ತಗಲುತ್ತದೆ
ಈ ಕುರಿತು ಶುಕ್ರವಾರ ಹೇಳಿಕೆ ನೀಡಿದ್ದ ನೀತಿ ಆಯೋಗದ ಸದಸ್ಯ (ಆರೋಗ್ಯ ವಿಭಾಗ ) ಡಾ. ವಿ.ಕೆ ಪಾಲ್, ಮ್ಯೂಕರ್ ಮೈಕೊಸಿಸ್ ಕಾಯಿಲೆ ಮೊಕರ್ ಹೆಸರಿನ ಸಿಲೀಂಧ್ರದ  (Mucor Fungus)ಕಾರಣ ಬರುತ್ತದೆ ಮತ್ತು ಇದು ತೇವವಾದ ಮೇಲ್ಮೈ ಮೇಲೆ ಕಂಡುಬರುತ್ತದೆ ಎಂದು ಹೇಳಿದ್ದರು.


ಇದನ್ನೂ ಓದಿ- Big Expose: Coronavirus ಗೆ ಕಡಿವಾಣ ಹಾಕುತ್ತಾ ಈ ವೈರಸ್? ಸಂಶೋಧನೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ


ಈ ಕುರಿತು ಹೇಳಿಕೆ ನೀಡಿದ್ದ ಅವರು, ಕೊವಿಡ್ -19 ರೋಗಿಗಳನ್ನು ಆಕ್ಸಿಜನ್ ಸಿಸ್ಟಂ ಮೇಲೆ ಇರಿಸಲಾಗಿರುತ್ತದೆ. ಈ ಸಿಸ್ಟಂ ನಲ್ಲಿ ಜಲಯುಕ್ತ ಉಪಕರಣಗಳು ಇರುತ್ತವೆ. ಇಂತಹ ಸಂದರ್ಭದಲ್ಲಿ ರೋಗಿಗಳಲ್ಲಿ ಸಿಲೀಂಧ್ರ ಸೋಂಕು ತಗಲುವ ಅಪಾಯ ಹೆಚ್ಚಾಗುತ್ತದೆ ಎಂದು ಹೇಳಿದ್ದರು.


ಇದನ್ನೂ ಓದಿ-Good News: Corona ಚಿಕಿತ್ಸೆಗಾಗಿ DRDO ಔಷಧಿ 2-DG ತುರ್ತು ಬಳಕೆಗೆ DGCI ಅನುಮತಿ


ಈ ಕುರಿತು ಹೇಳಿಕೆ ನೀಡಿರುವ ಡಾ. ಲಹಾನೆ, ಈ ಸಿಲೀಂಧ್ರ ಸೋಂಕಿನ ಕುರಿತು ಈ ಮೊದಲೇ ತಿಳಿದಿದೆ. ಆದರೆ, ಕೊವಿಡ್ 19 ನ ಜಟಿಲತೆಯ ಕಾರಣ ಈ ಸಿಲಿಂಧ್ರೀ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹುದರಲ್ಲಿ ಸ್ಟೆರಾಯಿಡ್  ಔಷಧಿಗಳ ಬಳಕೆ ಹಲವು ಸಂದರ್ಭಗಳಲ್ಲಿ ರಕ್ತದಲ್ಲಿ ಶರ್ಕರದ ಮಟ್ಟವನ್ನು ಹೆಚ್ಚಸುತ್ತದೆ ಹಾಗೂ ಕೆಲ ಔಷಧಿಗಳ ಪರಿಣಾಮ ದೇಹದ ರೋಗ ಪ್ರತಿರೋಧಕ ಶಕ್ತಿ ಕಡಿಮೆಯಾಗುತ್ತದೆ.


ಇದನ್ನೂ ಓದಿ- Covid-19: ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್ ಹಾಕಿ ಮಹತ್ವದ ಆದೇಶ ಹೊರಡಿಸಿದ ರಾಜ್ಯ ಸರ್ಕಾರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.