Karnataka Covid-19 Updates: ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕಡಿವಾಣ ಹಾಕಿ ಮಹತ್ವದ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

Karnataka Covid-19 Updates: ಕರೋನಾ ಪರೀಕ್ಷೆಯಲ್ಲಿ CT-Scan ಅತ್ಯಂತ ವಿಶ್ವಾಸಾರ್ಹ ವರದಿ ಎಂದು ಸಾಬೀತಾಗುತ್ತಿದೆ. ಆದರೆ ಅದರ ಹೆಚ್ಚಿನ ವೆಚ್ಚದಿಂದಾಗಿ, ಜನರ ಜೇಬಿನ ಮೇಲೆ ಭಾರಿ ಹೊರೆ ಬೀಳುತ್ತಿದೆ.

Written by - Nitin Tabib | Last Updated : May 8, 2021, 04:57 PM IST
  • ಕೊರೊನಾ ಕಾಲದಲ್ಲಿ ಖಾಸಗಿ ಆಸ್ಪತ್ರೆಗಳ ಸುಲಿಗೆ.
  • ಬ್ರೇಕ್ ಹಾಕಿದ ರಾಜ್ಯ ಸರ್ಕಾರ
  • ಸಿಟಿ ಸ್ಕ್ಯಾನ್, ಡಿಜಿಟಲ್ ಎಕ್ಸ್-ರೇ, ಐಸಿಯು, ಎಚ್.ಡಿ.ಯು ಇತ್ಯಾದಿಗಳ ಗರಿಷ್ಠ ಶುಲ್ಕ ನಿಗದಿ.
Karnataka Covid-19 Updates: ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕಡಿವಾಣ ಹಾಕಿ ಮಹತ್ವದ ಆದೇಶ ಹೊರಡಿಸಿದ ರಾಜ್ಯ ಸರ್ಕಾರ title=
Karnataka Covid-19 Updates (File Photo)

Karnataka Covid-19 Updates: ಕರೋನಾ (Coronavirus) ಪರೀಕ್ಷೆಯಲ್ಲಿ CT-Scan ಅತ್ಯಂತ ವಿಶ್ವಾಸಾರ್ಹ ವರದಿ ಎಂದು ಸಾಬೀತಾಗುತ್ತಿದೆ. ಆದರೆ ಅದರ ಹೆಚ್ಚಿನ ವೆಚ್ಚದಿಂದಾಗಿ, ಜನರ ಜೇಬಿನ ಮೇಲೆ ಭಾರಿ ಹೊರೆ ಬೀಳುತ್ತಿದೆ. ಹೀಗಾಗಿ ಕರ್ನಾಟಕ ಸರ್ಕಾರ ಈ ಪರೀಕ್ಷೆಯ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಖಾಸಗಿ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ (CT-Scan) ಮತ್ತು ಡಿಜಿಟಲ್ ಎಕ್ಸರೆ (Digital X-Ray) ವೆಚ್ಚವನ್ನು ನಿಗದಿಪಡಿಸಿದೆ. ಈ ಮಾಹಿತಿಯನ್ನು ಟ್ವೀಟ್ ಮಾಡಿದ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕರೋನಾ  (Covid-19) ಸೋಂಕನ್ನು ಪತ್ತೆಹಚ್ಚಲು ಸಿಟಿ ಸ್ಟಾನ್ ಮತ್ತು ಎಕ್ಸರೆ ಬಹಳ ಅವಶ್ಯಕ ಎಂದಿಸಿದರೆ, ಸರ್ಕಾರವು ಖಾಸಗಿ ಆಸ್ಪತ್ರೆ ಹಾಗೂ ಲ್ಯಾಬ್ ಗಳಲ್ಲಿ ಸಿಟಿ ಸ್ಕ್ಯಾನ್‌ಗೆ ಗರಿಷ್ಠ ದರವನ್ನು 1500 ರೂ. ಮತ್ತು ಎಕ್ಸರೆ ದರವನ್ನು 250 ರೂ.ಗಳಿಗೆ ನಿಗದಿ ಪಡಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ- Coronavirus Infection ನಿಂದ ರಕ್ಷಣೆ ಒದಗಿಸುತ್ತದೆಯೇ Alcohol? ತಜ್ಞರು ಹೇಳಿದ್ದೇನು?

ಗರಿಷ್ಠ ಮೊತ್ತದಲ್ಲಿ ಇತರ ಇಲ್ಲ ಶುಲ್ಕಗಳು ಶಾಮೀಲಾಗಿವೆ.
ಸಿಟಿ ಸ್ಕ್ಯಾನ್ ಹಾಗೂ ಡಿಜಿಟಲ್ ಎಕ್ಸ್ ರೇ ಗರಿಷ್ಠ ಶುಲ್ಕದ ಆದೇಶವನ್ನು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ತಿ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ) ಜಾವೇದ್ ಅಖ್ತರ್ ಹೊರಡಿಸಿದ್ದಾರೆ. ಆದೇಶದ ಪ್ರಕಾರ ಹೆಚ್ಚುವರಿ ರೋಗಿಗಳಲ್ಲಿ ಕೊರೊನಾ ಸೊಂಕನ್ನು ಪತ್ತೆಹಚ್ಚಲು ರೆಸಲ್ಯೂಶನ್ ಸಿಟಿ ಅಥವಾ ಡಿಜಿಟಲ್ ಎಕ್ಸ್ ರೇ ಮಾಡಿಸಬೇಕಾದ ಅನಿವಾರ್ಯತೆ ಎದುರಾಗುತ್ತಿದೆ ಹಾಗೂ ಕೆಲ ಲ್ಯಾಬ್ ಗಳು ಈ ಪರೀಕ್ಷೆಗಾಗಿ ಬೇಕಾಬಿಟ್ಟಿ ಚಾರ್ಜ್ ಮಾಡುತ್ತಿವೆ. ಹೀಗಾಗಿ ಇವುಗಳ ಚಾರ್ಜ್ ಮೇಲೆ ಇದೀಗ ಮಿತಿ ಹೇರಲಾಗಿದೆ ಎಂದು ಹೇಳಲಾಗಿದೆ. ಈ ಗರಿಷ್ಠ ಶುಲ್ಕದಲ್ಲಿ ಕನ್ಸ್ಯೂಮೆಬಲ್ಸ್, ಸ್ಯಾನಿಟೈಸೆಶನ್ ಶುಲ್ಕ ಇತ್ಯಾದಿಗಳೂ ಕೂಡ ಶಾಮೀಲಾಗಿವೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿ- Good News: Coronavirus Triple Mutant, ತನ್ನಷ್ಟಕ್ಕೆ ತಾನೇ ನಾಶವಾದ ಟ್ರಿಪಲ್ ಮ್ಯೂಟಂಟ್

ಕೊರೊನಾ ಸೋಂಕಿತರ ಚಿಕಿತ್ಸೆಗೂ ಪ್ಯಾಕೇಜ್ ನಿರ್ಧಾರ
ಕೆಲ ದಿನಗಳ ಹಿಂದೆಯಷ್ಟೇ ರಾಜ್ಯ ಸರ್ಕಾರ ಪಬ್ಲಿಕ್ ಹೆಲ್ತ್ ಅಥಾರಿಟಿ ಮೂಲಕ ರೆಫರ್ ಮಾಡಲಾದ ಕೊರೊನಾ ರೋಗಿಗಳ ಭರ್ತಿಗಾಗಿ ತಿದ್ದುಪಡಿ ಪ್ಯಾಕೇಜ್ ದರಗಳಿಗೆ ಅನುಮತಿ ನೀಡಿದ್ದು. ಈ ಕುರಿತು ಮುಖ್ಯ ಸಚಿವ ಪಿ. ಕುಮಾರ್ ಹೊರಡಿಸಿರುವ ಆದೇಶದ ಪ್ರಕಾರ , ಖಾಸಗಿ ಆಸ್ಪತ್ರೆಗಳು ಜನರಲ್ ವಾರ್ಡ್ ನಲ್ಲಿರುವ ರೋಗಿಗಳಿಗೆ ದಿನವೊಂದಕ್ಕೆ ರೂ.5200, ಹೈ ಡಿಪೆಂಡೆನ್ಸಿ ಯುನಿಟ್ (HDU)ಗಳಿಗೆ 8,000 ರೂ.ಗಳ ವರೆಗೆ ಚಾರ್ಜ್ ಮಾಡಬಹುದು ಎಂದು ಹೇಳಲಾಗಿದೆ. ಇದಲ್ಲದೆ ವೆಂಟಿಲೆಟರ್ ಇಲ್ಲದ ಐಸೋಲೆಶನ್ ICU ಗಳಿಗೆ ನಿತ್ಯ ಹೆಚ್ಚುವರಿ ಅಂದರೆ ರೂ.9700 ಹಾಗೂ ವೆಂಟಿಲೆಟರ್ ಹೊಂದಿರುವ ಐಸೋಲೆಶನ್ ICUಗಳಿಗಾಗಿ ನಿತ್ಯ ಗರಿಷ್ಠ ಅಂದರೆ 11,500 (ICU Charges)ಶುಲ್ಕ  ಪಡೆಯಬಹುದು ಎನ್ನಲಾಗಿದೆ.

ಇದನ್ನೂ ಓದಿ- Coronavirus 3rd Wave ತಡೆಯುವುದು ಹೇಗೆ? ಪ್ರಧಾನಿಗಳ ಪ್ರಮುಖ ವೈಜ್ಞಾನಿಕ ಸಲಹೆಗಾರರ ಸಲಹೆ ಇದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News