Maharasthra Jharkhand election: ಮಹಾರಾಷ್ಟ್ರ, ಜಾರ್ಖಂಡ್‌ ಮತ ಎಣಿಕೆಗೆ ಕೌಂಟ್‌ಡೌನ್‌ ಶುರುವಾಗಿದೆ, ಈ ಎರಡು ರಾಜ್ಯಗಳ ಗದ್ದುಗೆ ಯಾರ ಪಾಲಾಗಿದೆ ಎನ್ನುವ ಕುತೂಹಲ ಈಗಾಗಲೇ ಎಲ್ಲರಲ್ಲೂ ಶುರುವಾಗಿದೆ. ಒಟ್ಟು 4,136 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದ್ದು, ಈ ಪೈಕಿ 2,086 ಸ್ವತಂತ್ರ ಅಭ್ಯರ್ಥಿಗಳು ಕಣದಲ್ಲಿ ಮಹಾರಾಷ್ಟ್ರದಲ್ಲಿ 2,086 ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಮಹಾರಾಷ್ಟ್ರ, ಜಾರ್ಖಂಡ್‌ ಮತ ಎಣಿಕೆಗೆ ಕೌಂಟ್‌ಡೌನ್‌ ಶುರುವಾಗಿದೆ, ಈ ಎರಡು ರಾಜ್ಯಗಳ ಗದ್ದುಗೆ ಯಾರ ಪಾಲಾಗಿದೆ ಎನ್ನುವ ಕುತೂಹಲ ಈಗಾಗಲೇ ಎಲ್ಲರಲ್ಲೂ ಶುರುವಾಗಿದೆ. ಒಟ್ಟು 4,136 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದ್ದು, ಈ ಪೈಕಿ 2,086 ಸ್ವತಂತ್ರ ಅಭ್ಯರ್ಥಿಗಳು ಕಣದಲ್ಲಿ ಮಹಾರಾಷ್ಟ್ರದಲ್ಲಿ 2,086 ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. 148 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರೆ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯಿಂದ 81 ಅಭ್ಯರ್ಥಿಗಳು 
ಸ್ಪರ್ಧೆ ಮಾಡಿದ್ದಾರೆ. ಇನ್ನೂ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯಿಂದ 59 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರೆ, ಬಹುಮತ ಪಡೆಯಲು ಪಕ್ಷಕ್ಕೆ 145 ಸ್ಥಾನ ಅಗತ್ಯವಾಗಿದೆ.


ಇನ್ನೂ, ಜಾರ್ಖಂಡ್‌ನಲ್ಲಿ ಮತ ಎಣಿಕೆ ಕಾರ್ಯ ಆರಂಭಕ್ಕೂ ಕೂಡ ಕೌಂಟ್‌ಡೌನ್‌ ಶುರುವಾಗಿದೆ. ಬಿಗಿ ಭದ್ರತೆಯ ಮಧ್ಯೆ ಮತ ಎಣಿಕೆ  ನಡೆಯಲಿದೆ. ಜಾರ್ಖಂಡ್‌ನಲ್ಲಿ ಯಾರಿಗೆ ಅಧಿಕಾರದ ಗದ್ದುಗೆ ಸಿಗಲದೆ ಎಂಬ ಪ್ರಶ್ನೆಗೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ. ಕಾಂಗ್ರೆಸ್‌, ಜೆಎಂಎಂ ಕೂಟ, ಬಿಜೆಪಿ ಮಧ್ಯೆ ಹಣಾಹಣಿ ನಡೆದಿದ್ದು, ಜಾರ್ಖಂಡ್‌ನಲ್ಲಿ ಒಟ್ಟು 81 ಸ್ಥಾನಗಳಿಗೆ  ಮತದಾನ ನಡೆದಿತ್ತು, ಒಟ್ಟು 1,213 ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಈ ಎಲ್ಲರ ಭವಿಷ್ಯ ಇಂದು ನಿರ್ಧಾರವಾಗಲಿದೆ. 


ಜಾರ್ಖಂಡ್‌ನಲ್ಲಿ ಬಹುಮತಕ್ಕೆ 42 ಸ್ಥಾನಗಳು ಅಗತ್ಯ ವಾಗಿದ್ದು, ಜಾರ್ಕಂಡ್‌ನಲ್ಲಿ ನ. 13ರಂದು ಮೊದಲ ಹಂತದಲ್ಲಿ 43 ಸ್ಥಾನಗಳಿಗೆ ಮತದಾನ ನಡೆದಿದ್ದು,ನ. 20ರಂದು 2ನೇ ಹಂತದದಲ್ಲಿ 38 ಸ್ಥಾನಗಳಿಗೆ ಮತದಾನ ನಡೆದಿತ್ತು. ಇನ್ನೂ ಈ ಎರಡು ರಾಜ್ಯಗಳಲ್ಲಿ ಯಾರು ಗದ್ದುಗೆ ಹಿಡಿಯಲಿದ್ದಾರೆ ಎನ್ನವ ಕತೂಹಲಇದೀಗ ಎಲ್ಲರಲ್ಲೂ ಶುರುವಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ