ನವದೆಹಲಿ : ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಮಹಾರಾಷ್ಟ್ರದ ರಾಜಕೀಯದಾಟ ಇದೀಗ ಸೂರತ್‌ನಿಂದ ಅಸ್ಸಾಂನ ಗುವಾಹಟಿಗೆ ಶಿಫ್ಟ್ ಆಗಿದೆ. ಶಿವಸೇನೆ ವಿರುದ್ಧ ಸಿಡಿದೆದ್ದ ಏಕನಾಥ್ ಶಿಂಧೆ ಮತ್ತು ಅವರ ಪಾಳಯದ ಶಾಸಕರು  ಇಂದು ಮುಂಜಾನೆ ಗುವಾಹಟಿ ತಲುಪಿದ್ದಾರೆ. ಏಕನಾಥ್ ಶಿಂಧೆ ಜೊತೆ 40 ಮಂದಿ ಶಾಸಕರಿದ್ದಾರೆ. ಈ ಪೈಕಿ 34 ಮಂದಿ ಶಿವಸೇನೆ ಮತ್ತು 6 ಮಂದಿ ಪಕ್ಷೇತರರು ಎನ್ನಲಾಗಿದೆ. ಎಲ್ಲಾ 40 ಶಾಸಕರು ವಿಶೇಷ ವಿಮಾನದ ಮೂಲಕ ಗುವಾಹಟಿಗೆ ಬಂದಿಳಿದಿದ್ದಾರೆ.  


COMMERCIAL BREAK
SCROLL TO CONTINUE READING

ವಿಮಾನ ನಿಲ್ದಾಣದಲ್ಲಿ ಬಿಜೆಪಿ ಸಂಸದ  :
ಈ ಶಾಸಕರನ್ನು ಬರಮಾಡಿಕೊಳ್ಳಲು ತೇಜ್‌ಪುರದ ಬಿಜೆಪಿ ಸಂಸದ ಪಲ್ಲಬ್ ಲೋಚನ್ ದಾಸ್ ಗುವಾಹಟಿ ತಲುಪಿದ್ದಾರೆ ಎಂದು ಹೇಳಲಾಗುತ್ತಿದೆ. ಶಾಸಕರ ಆಗಮನಕ್ಕೂ ಮೊದಲು ವಿಮಾನ ನಿಲ್ದಾಣದಲ್ಲಿ ಪಲ್ಲಬ್ ಲೋಚನ್ ದಾಸ್ ಕಾಣಿಸಿಕೊಂಡಿದ್ದಾರೆ. ಆದರೆ, ಅವರು ಈ ಬಗ್ಗೆ ಮಾಧ್ಯಮಮಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.


ಇದನ್ನೂ ಓದಿ : Presidential Election: ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ಆಗಿ ದ್ರೌಪದಿ ಮುರ್ಮು ಹೆಸರು ಘೋಷಣೆ


ಪಲ್ಲಬ್ ಲೋಚನ್ ದಾಸ್ ಶಾಸಕರನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು ಎಂದು ಹೇಳಲಾಗುತ್ತಿದೆ. ಮಹಾರಾಷ್ಟ್ರದ ಈ ಬಂಡಾಯ ಶಾಸಕರನ್ನು ಬರಮಾಡಿಕೊಳ್ಳಲು ಮೂರು ಬಸ್‌ಗಳು ವಿಮಾನ ನಿಲ್ದಾಣ ತಲುಪಿತ್ತು. ಈ ಮೂರೂ ಬಸ್‌ಗಳು ಅಸ್ಸಾಂ ಸಾರಿಗೆ ಸಂಸ್ಥೆಗೆ ಸೇರಿದ್ದವು ಎಂದು ಹೇಳಲಾಗುತ್ತಿದೆ. ಇದಲ್ಲದೇ ರಾಜ್ಯ ಸರ್ಕಾರದ ಹಲವು ಉನ್ನತ ಅಧಿಕಾರಿಗಳೂ ಆಗಮಿಸಿ ಶಾಸಕರನ್ನು ಬರಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ವಿಮಾನ ನಿಲ್ದಾಣದ ಬಳಿ ಇರುವ ಪಂಚತಾರಾ ಹೋಟೆಲ್ ರಾಡಿಸನ್ ಬ್ಲೂನಲ್ಲಿ ಶಾಸಕರು ತಂಗಿದ್ದಾರೆ.  


ಗುವಾಹಟಿ ತಲುಪುವ ಮುನ್ನ ಶಿಂಧೆ ಹೇಳಿದ್ದೇನು? :
ಗುವಾಹಟಿಗೆ ತೆರಳುವ ಮುನ್ನ ಏಕನಾಥ್ ಶಿಂಧೆ ಸೂರತ್ ವಿಮಾನ ನಿಲ್ದಾಣದಲ್ಲಿ ಹೇಳಿಕೆ ನೀಡಿದ್ದಾರೆ. ನಾವು ಬಾಳಾಸಾಹೇಬ್ ಠಾಕ್ರೆಯವರ ಶಿವಸೇನೆಯನ್ನು ಬಿಟ್ಟಿಲ್ಲ, ಬಿಡುವುದೂ ಇಲ್ಲ ಎಂದು ಹೇಳಿದ್ದಾರೆ. ತಾವು  ಬಾಳಾಸಾಹೇಬ್ ಠಾಕ್ರೆ ಅವರ ಹಿಂದುತ್ವವನ್ನು ಅನುಸರಿಸಿಕೊಂಡು ಮುಂದುವರೆಯುವುದಾಗಿ ಹೇಳಿದ್ದಾರೆ.  ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ಉರುಳಿಸಲು ಶಿಂಧೆ ಮತ್ತು ಇತರ ಶಾಸಕರು ಬಿಜೆಪಿ ಸೇರಬಹುದು ಎಂಬ ಊಹಾಪೋಹದ ನಡುವೆಯೇ ಏಕನಾಥ್ ಶಿಂಧೆ ಅವರ ಹೇಳಿಕೆ ಬಂದಿದೆ. ಆದರೆ,  ಉದ್ಧವ್ ಠಾಕ್ರೆ ಮತ್ತು ಅವರ ಸರ್ಕಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 


ಇದನ್ನೂ ಓದಿ : Viral Video: ಪೊಲೀಸರ ಮೇಲೆಯೇ ಉಗುಳಿದ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ..!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.