ನವದೆಹಲಿ: ಮಹಾತ್ಮ ಗಾಂಧೀಜಿಯವರ (Mahatma Gandhiji) ಪುಣ್ಯತಿಥಿಯಂದು ಇಡೀ ದೇಶವೇ ಇಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕೂಡ ಮಹಾತ್ಮ ಗಾಂಧಿಯನ್ನು ಸ್ಮರಿಸಿ ಹಿಂದುತ್ವವನ್ನು ಗುರಿಯಾಗಿಸಿಕೊಂಡು ಟ್ವಿಟ್ಟರ್ ನಲ್ಲಿ ಪೋಸ್ಟ್ ಒಂದನ್ನು ಬರೆದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: J&K encounter:ಪುಲ್ವಾಮಾ ದಾಳಿಯ ರೂವಾರಿ ಜಾಹಿದ್ ವಾನಿ ಸೇರಿದಂತೆ 5 ಉಗ್ರರು ಹತ


ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ಗಾಂಧೀಜಿಗೆ ಗುಂಡಿಕ್ಕಿದ್ದು ಓರ್ವ ಹಿಂದುತ್ವವಾದಿ (Hindutvavadi). ಎಲ್ಲಾ ಹಿಂದುತ್ವವಾದಿಗಳು ಗಾಂಧಿ ಇನ್ನಿಲ್ಲ ಎಂದು ಭಾವಿಸುತ್ತಾರೆ. ಎಲ್ಲಿ ಸತ್ಯವಿದೆಯೋ ಅಲ್ಲಿ ಬಾಪು ಇನ್ನೂ ಜೀವಂತ! #ಗಾಂಧಿ ಎಂದೆಂದಿಗೂ" ಎಂದು ಬರೆದಿದ್ದಾರೆ.


 


Nathuram Godse) ಅವರನ್ನು ಹಿಂದುತ್ವವಾದಿ ಎಂದು ಕರೆದಿದ್ದಾರೆ. ಹಿಂದೂ ಮತ್ತು ಹಿಂದುತ್ವವಾದಿ ನಡುವೆ ವ್ಯತ್ಯಾಸವಿದೆ ಎಂದು ಈ ಹಿಂದೆಯೂ ಅನೇಕ ಬಾರಿ ರಾಹುಲ್ ಗಾಂಧಿ ಹೇಳಿಕೆಗಳನ್ನು ನೀಡಿದ್ದರು.  


ಈ ಟ್ವೀಟ್ ಮಾಡುವ ಒಂದು ದಿನದ ಹಿಂದೆ, ರಾಹುಲ್ ಗಾಂಧಿ ವಿರುದ್ಧ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರೊಬ್ಬರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಫೆಬ್ರವರಿ 5 ರಿಂದ ನಡೆಸಲಾಗುವುದು ಎಂದು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ನ್ಯಾಯಾಲಯ ಹೇಳಿತ್ತು. 


ಇದನ್ನೂ ಓದಿ: Indian Team : ಟೀಂ ಇಂಡಿಯಾದ ಈ ಆಟಗಾರರ ವೃತ್ತಿಜೀವನಕ್ಕೆ ಅಡ್ಡಿಯಾದ KL Rahul! 


ದೆಹಲಿಯ ಬಿರ್ಲಾ ಹೌಸ್​​ನಲ್ಲಿ (Birla House) ಪ್ರಾರ್ಥನೆ ಮಾಡುತ್ತಿದ್ದಾಗ ನಾಥೂರಾಂ ಗೋಡ್ಸೆ ಗಾಂಧೀಜಿಗೆ ಗುಂಡು ಹೊಡೆದರು. ಮಹಾತ್ಮ ಗಾಂಧಿಯವರನ್ನು 1948ರ ಜನವರಿ 30ರಂದು ಅಂದರೆ ಭಾರತಕ್ಕೆ ಸ್ವಾತಂತ್ರ್ಯ ಬಂದ ನಾಲ್ಕು ತಿಂಗಳಲ್ಲಿ ಹತ್ಯೆ ಮಾಡಲಾಯಿತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.