ನವದೆಹಲಿ: ಅಸ್ಸಾಂನ ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ಎಲೆಕ್ಟ್ರಾನಿಕ್ ಮತದಾನ ಯಂತ್ರವನ್ನು (ಇವಿಎಂ) ಸಾಗಿಸುವ ಚುನಾವನಾ ಅಧಿಕಾರಿಗಳ ವೀಡಿಯೋ ವೈರಲ್ ಆಗಿರುವ ವಿಚಾರವಾಗಿ ತೀವ್ರ ತರಾಟೆಗೆ ತೆಗೆದುಕೊಂಡಿರುವ ರಾಹುಲ್ ಗಾಂಧಿ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಭಾರತದಿಂದ 10 ಮಿಲಿಯನ್ AstraZeneca ಲಸಿಕೆ ಆಮದು ಮಾಡಿಕೊಳ್ಳಲಿರುವ ಬ್ರಿಟನ್
This is the only way the BJP can win Assam: by looting EVMs. EVM capturing, like there used to be booth capturing. All under the nose of the Election Commission. Sad day for democracy. #EVM_theft_Assam #AssamAssemblyElection2021 https://t.co/5dmlu67Uui
— Gaurav Gogoi (@GauravGogoiAsm) April 1, 2021
ಅಷ್ಟೇ ಅಲ್ಲದೆ ಅಭ್ಯರ್ಥಿಯ ಪ್ರಚಾರ ನಿಷೇಧದ ಅವಧಿಯನ್ನು ಕಡಿಮೆ ಮಾಡಿರುವ ಬಗ್ಗೆ ಕೂಡ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) ಅವರು ಚುನಾವಣಾ ಆಯೋಗದ ವಿರುದ್ಧ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದಾರೆ.ಕೇವಲ ಎರಡು ಅಕ್ಷರಗಳಲ್ಲಿ 'Election 'Commission' ಎಂದು ಟ್ವೀಟ್ ಮಾಡುವ ಮೂಲಕ ಚುನಾವಣಾ ಆಯೋಗದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
Election “Commission”.
— Rahul Gandhi (@RahulGandhi) April 3, 2021
ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ಮುಖ್ಯಸ್ಥ ಹಗ್ರಾಮ ಮೊಹಿಲಾರಿಯನ್ನು ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ಅಸ್ಸಾಂ ಸಚಿವ ಮತ್ತು ಬಿಜೆಪಿ ಮುಖಂಡ ಹಿಮಂತ ಬಿಸ್ವಾ ಶರ್ಮಾ ಅವರ 48 ಗಂಟೆಗಳ ಪ್ರಚಾರ ನಿಷೇಧವನ್ನು ಮತದಾನ ಸಂಸ್ಥೆ ಅರ್ಧಕ್ಕೆ ಇಳಿಸಿದ ದಿನವೂ ಈ ಟ್ವೀಟ್ ಬಂದಿದೆ. ಬಿಪಿಎಫ್ ಬಿಜೆಪಿಯ ಮೈತ್ರಿಪಕ್ಷವಾಗಿತ್ತು, ಆದರೆ ಈಗ ಅಸ್ಸಾಂ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಹೋರಾಡುತ್ತಿದೆ.