ಗೃಹಪ್ರವೇಶಕ್ಕೆ ಬರಬೇಕಿತ್ತು ಮೇಜರ್ ! ಹೊಸ ಮನೆ ತಲುಪಿದ್ದು ಮಾತ್ರ ಪಾರ್ಥಿವ ಶರೀರ
Anantnag Encounter News:ಶನಿವಾರ ಟಿಡಿಐ ಸಿಟಿಯಲ್ಲಿರುವ ಹೊಸ ಮನೆಯ ಗೃಹಪ್ರವೇಶಕ್ಕೆ ಮೇಜರ್ ಆಶಿಶ್ ಬರಬೇಕಿತ್ತು. ಅಕ್ಟೋಬರ್ 23 ರಂದು ಆಶಿಶ್ ಜನ್ಮದಿನವೂ ಇತ್ತು.
Anantnag Encounter News : ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೋಕರ್‌ನಾಗ್ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಮೇಜರ್ ಆಶಿಶ್ ಧೋಂಚಕ್ ಅವರ ನಿವಾಸದಲ್ಲಿ ದುಃಖ ಮಡುಗಟ್ಟಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಮಧ್ಯೆ ಹುತಾತ್ಮರ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ಮೇಜರ್ ಆಶಿಶ್ ಅವರ ಚಿಕ್ಕಪ್ಪ ಹೇಳಿದ್ದಾರೆ.
ಈ ಎನ್‌ಕೌಂಟರ್‌ನಲ್ಲಿ 19 ರಾಷ್ಟ್ರೀಯ ರೈಫಲ್ಸ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ಮನ್‌ಪ್ರೀತ್ ಸಿಂಗ್ ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿ ಹುಮಾಯೂನ್ ಭಟ್ ಕೂಡಾ ಹುತಾತ್ಮರಾಗಿದ್ದಾರೆ.
ಇದನ್ನೂ ಓದಿ : ಈ ಭಾಗಗಳಲ್ಲಿ ಮುಂದಿನ 4 ದಿನ ರಣಕೋಟಿ ಮಳೆ: ಚಂಡಮಾರುತ ಸುಳಿಗೆ ಸಿಲುಕುವ ಭೀತಿ, ಎಲ್ಲೆಲ್ಲಿದೆ ಎಚ್ಚರಿಕೆ ಗಂಟೆ?
ಗೃಹಪ್ರವೇಶಕ್ಕೆ ಬರಬೇಕಿತ್ತು ಮೇಜರ್ :
ಶನಿವಾರ ಟಿಡಿಐ ಸಿಟಿಯಲ್ಲಿರುವ ಹೊಸ ಮನೆಯ ಗೃಹಪ್ರವೇಶಕ್ಕೆ ಮೇಜರ್ ಆಶಿಶ್ ಬರಬೇಕಿತ್ತು. ಹೊಸ ಮನೆ ಮತ್ತು ಬಹಳ ಕಾಲದ ನಂತರ ಗ್ರಾಮಕ್ಕೆ ಮನೆ ಮಗ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಾಗರಣ ಕಾರ್ಯಕ್ರಮವನ್ನು ಕೂಡಾ ಹಮ್ಮಿಕೊಳ್ಳಲಾಗಿತ್ತು ಎಂದು ಶಹೀದ್ ಮೇಜರ್ ಅವರ ಭಾಮೈದ ಸುರೇಶ್ ತಿಳಿಸಿದ್ದಾರೆ. ಅಕ್ಟೋಬರ್ 23 ರಂದು ಆಶಿಶ್ ಜನ್ಮದಿನವೂ ಇತ್ತು. ಬಹಳ ಸಮಯದ ನಂತರ ಆಶಿಶ್ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಆಗಮದ ಬಗ್ಗೆ ಮನೆ ಮಂದಿ ಹೊಸ ಉತ್ಸಾಹದಲ್ಲಿದ್ದರು. ಹೊಸ ಮನೆ, ಮಗನ ಆಗಮನ ಹೀಗೆ ಅಲ್ಲಿ ಸಂತಸ ಮನೆ ಮಾಡಿತ್ತು. ಆದರೆ ಹೊಸ ಮನೆಗೆ ಮನೆ ಮಗನ ಬದಲು ಅವರ ಪಾರ್ಥಿವ ಶರೀರವನ್ನು ಬರಮಾಡಿಕೊಳ್ಳುವ ಸನ್ನಿವೇಶ ಎದುರಾಗಿದೆ.
ಮೇಜರ್ ಆಶಿಶ್ ಅವರ ಪಾರ್ಥಿವ ಶರೀರವನ್ನು 3 ರಿಂದ 4 ಗಂಟೆಗೆ ತರಲಾಗುವುದು. ಅವರ ಅಂತಿಮ ವಿಧಿಗಳನ್ನು ಅವರ ಬಿಂಜೌಲ್‌ನಲ್ಲಿ ನಡೆಸಲಾಗುವುದು. ಆದರೆ ಅದಕ್ಕೂ ಮೊದಲು ಅವರ ಪಾರ್ಥಿವ ಶರೀರವನ್ನು ಹೊಸದಾಗಿ ನಿರ್ಮಾಣವಾಗಿರುವ ಮನೆಗೆ ಕೊಂಡೊಯ್ಯಲಾಗುವುದು.
ಇದನ್ನೂ ಓದಿ : Photo Gallery: ಮಂತ್ರಾಲಯದ ರಾಯರ ದರ್ಶನ ಪಡೆದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ತಂದೆ-ತಾಯಿ
ಮಾಧ್ಯಮ ವರದಿಗಳ ಪ್ರಕಾರ, ಮೇಜರ್ ಆಶಿಶ್ ಅವರ ತಂದೆ ಲಾಲಚಂದ್ ಅವರು NFL ನಿಂದ ನಿವೃತ್ತರಾಗಿದ್ದಾರೆ. ಆಶಿಶ್‌ಗೆ ಅಂಜು ಮತ್ತು ಸುಮನ್ ಎಂಬ ಮೂವರು ಸಹೋದರಿಯರಿದ್ದಾರೆ. ತಾಯಿ ಕಮಲಾ ಗೃಹಿಣಿ. ಆಶಿಶ್ ಪತ್ನಿ ಜ್ಯೋತಿ ಕೂಡಾ ಗೃಹಿಣಿ. ಆಶಿಶ್ ಮತ್ತು ಜ್ಯೋತಿಗೆ ವಾಮಿನಿ ಎಂಬ ಎರಡು ವರ್ಷದ ಮಗಳಿದ್ದಾಳೆ.
ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಮೇಜರ್ ಆಶಿಶ್ ಗೆ ಗಾಯ : ಗರೋಲ್ ಪ್ರದೇಶದಲ್ಲಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ಮಂಗಳವಾರ ಸಂಜೆ ಪ್ರಾರಂಭವಾಯಿತು. ಆದರೆ ರಾತ್ರಿ ವೇಳೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಅಡಗುತಾಣವೊಂದರಲ್ಲಿ ಭಯೋತ್ಪಾದಕರು ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಪಡೆದ ನಂತರ ಬುಧವಾರ ಬೆಳಗ್ಗೆ ಮತ್ತೆ ಶೋಧ ಕಾರ್ಯ ನಡೆಸಲಾಗಿತ್ತು.
ಇದನ್ನೂ ಓದಿ : ಒಂಟಿಯಾಗಿ ಅಶ್ಲೀಲ ವಿಡಿಯೋ ನೋಡುವುದು ಅಪರಾಧವೇ ಅಥವಾ ಅಲ್ಲ? ಹೈಕೋರ್ಟ್ ಹೇಳಿದ್ದೇನು?
ತನ್ನ ತಂಡವನ್ನು ಮುನ್ನಡೆಸುತ್ತಿದ್ದ ಕರ್ನಲ್ ಸಿಂಗ್ ಭಯೋತ್ಪಾದಕರ ಮೇಲೆ ದಾಳಿ ಮಾಡಿದರು. ಆದರೆ, ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಧೋನಕ್ ಮತ್ತು ಭಟ್ ಅವರಿಗೂ ಗುಂಡುಗಳು ತಗುಲಿ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ವೇಳೆ, ಅವರು ಕೊನೆಯುಸಿರೆಳೆದಿದ್ದಾರೆ.
ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಪ್ರಾಕ್ಸಿ ಗುಂಪು ನಿಷೇಧಿತ ರೆಸಿಸ್ಟೆನ್ಸ್ ಫ್ರಂಟ್ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಆಗಸ್ಟ್ 4 ರಂದು ಕುಲ್ಗಾಮ್ ಜಿಲ್ಲೆಯ ಹಾಲನ್ ಅರಣ್ಯ ಪ್ರದೇಶದ ಎತ್ತರದ ಪ್ರದೇಶದಲ್ಲಿ ಸೇನಾ ಯೋಧರ ಮೇಲೆ ದಾಳಿ ಇದೇ ಭಯೋತ್ಪಾದಕರ ಗುಂಪು ದಾಳಿ ಮಾಡಿತ್ತು. ಇದರಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದರು.
ಇದನ್ನೂ ಓದಿ : ಲಕ್ನೋ : ಭಾರೀ ಮಳೆಯಿಂದಾಗಿ ಶಾಲೆಗಳಿಗೆ ರಜೆ ಸೆ.12ರವೆರೆಗೂ ಮಳೆ ಸಾಧ್ಯತೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ