Makara Jyothi Darshan Timing: ಮಕರವಿಳಕ್ಕು ಉತ್ಸವಕ್ಕೆ ಇನ್ನೊಂದೆ ದಿನ ಬಾಕಿ. ಜನವರಿ 15ರ ಬೆಳಗಿನ ಜಾವ 2.46ಕ್ಕೆ ಮಕರ ಸಂಕ್ರಮಣ ಶುರುವಾಗಲಿದೆ. ಅಂದಹಾಗೆ ಈ ಶುಭದಿನದಂದು ಶಬರಿಮಲೆಯಲ್ಲಿ ಮಕರ ಜ್ಯೋತಿ ಗೋಚರಿಸಲಿದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹಾಗೂ ದೇವಸ್ವಂ ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಇಲಾಖೆಗಳನ್ನು ಸಮನ್ವಯಗೊಳಿಸಿ ಸಮಗ್ರ ಸಿದ್ಧತೆ ನಡೆಸಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: “ರಾಮ ಮಂದಿರ ನಿರ್ಮಾಣದಿಂದ ಶೇ.74ರಷ್ಟು ಮುಸಲ್ಮಾನರು ಸಂತಸಗೊಂಡಿದ್ದಾರೆ”


ಮಕರ ಸಂಕ್ರಮಣದ ಮುಸ್ಸಂಜೆಯಲ್ಲಿ ಅಯ್ಯಪ್ಪನ ದರ್ಶನಕ್ಕಾಗಿ ಪಂದಳಂ ಅರಮನೆಯಿಂದ ಹೊರಟ ತಿರುವಾಭರಣ ಮೆರವಣಿಗೆ ನಾಳೆ ಸಂಜೆ 5.30ಕ್ಕೆ ಸಾರಂಗುದಿ ತಲುಪಲಿದೆ. ದೇವಸ್ವಂ ಪ್ರತಿನಿಧಿಗಳು ಬಂದು ದೇಗುಲಕ್ಕೆ ಪೂಜೆ ಸಲ್ಲಿಸಿದ ನಂತರ ತಿರುವಿಭರಣದ ಮೆರವಣಿಗೆಯನ್ನು ಸ್ವೀಕರಿಸಿ ಸನ್ನಿಧಾನಕ್ಕೆ ಕರೆದೊಯ್ಯುತ್ತಾರೆ. ಸಂಜೆ 6.30ಕ್ಕೆ ತಿರುವಾಭರಣವನ್ನು ಬೆಳಗಿಸಿ ಪೂಜೆ ಸಲ್ಲಿಸಲಾಗುತ್ತದೆ.


ಮಕರವಿಳಕ್ಕು ದರ್ಶನಕ್ಕೆ 10 ವ್ಯೂ ಪಾಯಿಂಟ್‌’ಗಳನ್ನು ವ್ಯವಸ್ಥೆ ಮಾಡಲಾಗಿದೆ. ಪಂಡಿತತವಳಂ, ವಾಟರ್ ಟ್ಯಾಂಕ್ ಮುಂಭಾಗ, ಮರಮಟ್ ಕಾಂಪ್ಲೆಕ್ಸ್ ಮುಂಭಾಗದ ಟೆರೇಸ್, ಬಿಎಸ್‌ಎನ್‌ಎಲ್ ಕಚೇರಿಯ ಉತ್ತರ ಭಾಗ, ಕೊಪ್ರಕಳಂ, ಸನ್ನಿಧಾನಂ ತಿರುಮುತ್ತಂನ ಮೇಲ್ಭಾಗ ಮತ್ತು ಕೆಳಭಾಗ, ಮಾಳಿಗಾಪ್ಪುರಂ ದೇವಾಲಯ ಆವರಣ, ಅಪಾಚೆಮೇಡು, ಅನ್ನದಾನ ಮಂಟಪದ ಮುಂಭಾಗ ಮತ್ತು ದಹನಾಲಯದ ಮುಂಭಾಗ ಹತ್ತು ವ್ಯೂ ಪಾಯಿಂಟ್‌’ಗಳಾಗಿ ವ್ಯವಸ್ಥೆ ಮಾಡಲಾಗಿದೆ. ಈ ಸ್ಥಳಗಳಲ್ಲಿ ಯಾತ್ರಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.


ಸೋಮವಾರ ರಾಜ್ಯದ ವಿವಿಧ ಕೆಎಸ್‌’ಆರ್‌’ಟಿಸಿ ಡಿಪೋಗಳಿಂದ 800 ಬಸ್‌’ಗಳನ್ನು ಪಂಪಾಕ್ಕೆ ನಿಯೋಜನೆ ಮಾಡಲಾಗಿದೆ. ಇನ್ನು ರಾಜ್ಯ ಪೊಲೀಸ್ ಮುಖ್ಯಸ್ಥ ಡಾ. ಶೇಖ್ ದರ್ವೇಶ್ ಸಾಹಿಬ್, ಮಕರವಿಳಕ್ ಉತ್ಸವಕ್ಕೆ ನಾಲ್ವರು ಎಸ್ಪಿಗಳು, 19 ಡಿವೈಎಸ್ಪಿಗಳು ಮತ್ತು 15 ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಹೆಚ್ಚುವರಿ ಸಾವಿರ ಜನರನ್ನು ನಿಯೋಜಿಸಿದ್ದಾರೆ. ಸನ್ನಿಧಾನಂ, ಪಂಬಾ, ನಿಲಕ್ಕಲ್ ಮತ್ತು ಪಂಡಿತತವಳಂ ಮುಂತಾದ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.


ಇದನ್ನೂ ಓದಿ: Video: ಕ್ರಿಕೆಟ್ ಇತಿಹಾಸ ಪುಟದಲ್ಲೇ ಇದು ಅತ್ಯುತ್ತಮ ಕ್ಯಾಚ್!


ಮಕರ ಜ್ಯೋತಿ ದರ್ಶನ ಸಮಯ:


ಮಕರ ಜ್ಯೋತಿಯಂದು ಪಂದಳಂ ರಾಜ ಅರಮನೆಯಿಂದ ಮೂರು ಪೆಟ್ಟಿಗೆಗಳಲ್ಲಿ ಪವಿತ್ರ ಆಭರಣಗಳನ್ನು ತರಲಾಗುತ್ತದೆ. ಇದನ್ನು ‘ತಿರುವಾಭರಣ’ ಎಂದು ಕರೆಯಲಾಗುತ್ತದೆ. ಈ ಆಭರಣಗಳನ್ನು ತೊಡಿಸಿದ ಬಳಿಕ ಸ್ವಾಮಿ ಅಯ್ಯಪ್ಪನಿಗೆ ಮಹಾ ದೀಪಾರಾಧನೆ ಮಾಡಲಾಗುತ್ತದೆ. ಈ ವೇಳೆ ಪೊನ್ನಂಬಲಮೇಡುವಿನಲ್ಲಿ ಮಕರವಿಳಕ್ಕು ಮೂರು ಬಾರಿ ಕಾಣಿಸಿಕೊಳ್ಳಲಿದೆ.ಮಕರ ಜ್ಯೋತಿಯನ್ನು ನೋಡಿ ಎಲ್ಲರೂ ಭಕ್ತಿಯಿಂದ 'ಸ್ವಾಮಿಯೇ ಶರಣಂ ಅಯ್ಯಪ್ಪಾ' ಎಂದು ಜಪಿಸುತ್ತಾರೆ. ಅಂದಹಾಗೆ ಮೂಲಗಳ ಪ್ರಕಾರ, ಮಕರ ಜ್ಯೋತಿಯು ಸಂಜೆ 6.15 ರಿಂದ 6.50 ರವರ ಶುಭಘಳಿಗೆಯಲ್ಲಿ ದರ್ಶನವಾಗಲಿದೆ.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.