ಚಂಡೀಗಢ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೇಕ್ ಮೈ ಟ್ರಿಪ್‌ಗೆ ಗ್ರಾಹಕ ವೇದಿಕೆಯು ದಂಡ ವಿಧಿಸಿ ದೂರುದಾರರಿಗೆ ಪರಿಹಾರ ಸೇರಿ 87,289 ರೂ.ಗಳನ್ನು ಪಾವತಿಸುವಂತೆ ಸೂಚಿಸಿದೆ. 


COMMERCIAL BREAK
SCROLL TO CONTINUE READING

ಎರಡೂ ಪ್ರಕರಣಗಳಲ್ಲಿ ಗ್ರಾಹಕ ವೇದಿಕೆಯು ಕಂಪನಿ ವಿರುದ್ಧ ಸಲ್ಲಿಸಿರುವ ದೂರಿನ ವಿಚಾರಣೆ ಬಳಿಕ, ವಕೀಲ ಕೃಷ್ಣ ಸಿಂಗಲಾ ಅವರ ಟಿಕೆಟ್ ಹಣ 54,109 ರೂ. ಮತ್ತು ಟಿಕೆಟ್ ಮರುಪಾವತಿ ಮೊತ್ತ 13,180 ರೂ. ಮತ್ತು ಪ್ರಕರಣದ ವೆಚ್ಚವಾಗಿ ಪ್ರತಿ ಪ್ರಕರಣಕ್ಕೆ ತಲಾ 5 ಸಾವಿರ ರೂ. ನೀಡಲು ಆದೇಶಿಸಿದೆ. ಇದೇ ವೇಳೆ, ದೂರುದಾರರಿಗೆ ಈ ಸಮಯದಲ್ಲಿ ಉಂಟಾದ ಮಾನಸಿಕ ಚಿಂತೆಗೆ 10 ಸಾವಿರ ರೂ. ನೀಡುವಂತೆಯೂ ಸೂಚನೆ ನೀಡಲಾಗಿದೆ. 


ಅದೇ ಸಮಯದಲ್ಲಿ, ಕಂಪನಿಯ ಪರವಾಗಿ ವಾದ ಮಂಡಿಸಲು ಯಾರೂ ಹಾಜರಾಗದ ಕಾರಣ, ಗ್ರಾಹಕ ವೇದಿಕೆಯು ಎಕ್ಸ್ ಪಾರ್ಟಿ ಎಂದು ಘೋಷಿಸಿ ಆದೇಶ ಹೊರಡಿಸಿದೆ.