ನವದೆಹಲಿ: ಮೆಸೇಜಿಂಗ್ ಮತ್ತು ವಿಡಿಯೋ ಕರೆಗಾಗಿ ವಾಟ್ಸಾಪ್ (Whatsapp) ಭಾರತದ ಅತ್ಯಂತ ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಮೆಸೇಜಿಂಗ್ ಅಪ್ಲಿಕೇಶನ್ ಸರಳವಾದ ಇಂಟರ್ಫೇಸ್, ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿದ್ದು ಇದೀಗ ಕಂಪನಿಯು ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯಗಳನ್ನು ಹೊರತರುತ್ತಿದೆ. ಭಾರತದಲ್ಲಿ 400 ಮಿಲಿಯನ್ ಬಳಕೆದಾರರು ಮೆಸೇಜಿಂಗ್ಗಾಗಿ ವಾಟ್ಸಾಪ್ ಅನ್ನು ಬಳಸುತ್ತಾರೆ. ಅದಕ್ಕಾಗಿಯೇ ಅಪ್ಲಿಕೇಶನ್‌ನ ಸುರಕ್ಷತೆಯ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಲಾಗಿದೆ ಎಂದು ಕಂಪನಿ ತಿಳಿಸಿದೆ.


COMMERCIAL BREAK
SCROLL TO CONTINUE READING

ಅಪ್ಲಿಕೇಶನ್ ಈಗಾಗಲೇ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ವೈಶಿಷ್ಟ್ಯಗಳನ್ನು ಹೊಂದಿದೆ. ಆದ್ದರಿಂದ ನೀವು ಮತ್ತು ಸ್ವೀಕರಿಸುವವರು ಮಾತ್ರ ಸಂದೇಶವನ್ನು ಓದಬಹುದು. ಆದರೆ ಹೆಚ್ಚಿನ ಭದ್ರತೆಯನ್ನು ಹೊಂದಿರುವುದು ಯಾವಾಗಲೂ ಉತ್ತಮ. ಇದಕ್ಕಾಗಿ ವಾಟ್ಸಾಪ್ ಎರಡು ಹಂತದ ಪರಿಶೀಲನೆ ವೈಶಿಷ್ಟ್ಯವನ್ನು ಹೊಂದಿದೆ. ಆದಾಗ್ಯೂ ಇದು ಐಚ್ಛಿಕ ಲಕ್ಷಣವಾಗಿದೆ. ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದ್ದರೆ ವಾಟ್ಸಾಪ್ನಲ್ಲಿ ಪ್ರವೇಶಿಸಲು ಬಳಕೆದಾರರು ಅವರ ಮೊಬೈಲ್ ಸಂಖ್ಯೆಯಲ್ಲಿ ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ಅನ್ನು ಬಳಸಬೇಕಾಗುತ್ತದೆ.


ಈಗ ನಿಮ್ಮ ಬ್ಯಾಂಕಿಂಗ್ ಕೆಲಸವನ್ನು ವಾಟ್ಸಾಪ್ನಿಂದ ಸುಲಭವಾಗಿ ಪೂರ್ಣಗೊಳಿಸಿ


ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ವೈಶಿಷ್ಟ್ಯವನ್ನು ನೀವು ಸಕ್ರಿಯಗೊಳಿಸಿದಾಗ ನೀವು 6-ಅಂಕಿಯ ಪಿನ್ ಅನ್ನು ಸಹ ಹೊಂದಿಸಬೇಕು. ಈ ಪಿನ್‌ನ ವಿವರಗಳನ್ನು ವಾಟ್ಸಾಪ್ ಕೇಳುತ್ತದೆ. ಪಿನ್ ಅನ್ನು ಯಾವಾಗಲೂ ನೆನಪಿಡಿ. ಬಿಜಿಆರ್ ಸುದ್ದಿಗಳ ಪ್ರಕಾರ ನೀವು ಇಮೇಲ್ ವಿಳಾಸವನ್ನು ಭರ್ತಿ ಮಾಡುವ ಆಯ್ಕೆಯನ್ನು ಸಹ ಪಡೆಯುತ್ತೀರಿ. ಇಮೇಲ್ನಲ್ಲಿ ಕಳುಹಿಸಿದ ಲಿಂಕ್‌ನಿಂದ ನೀವು ವಾಟ್ಸಾಪ್ ಖಾತೆಯಿಂದ ಎರಡು-ಹಂತದ ಪರಿಶೀಲನೆಯನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಾಗುತ್ತದೆ.


ಎರಡು-ಹಂತದ ಪರಿಶೀಲನೆಯನ್ನು ಸಕ್ರಿಯಗೊಳಿಸುವುದು ಹೇಗೆ ?
ಇದಕ್ಕಾಗಿ ನೀವು ಮೊದಲಿಗೆ ನಿಮ್ಮ ವಾಟ್ಸಾಪ್ ತೆರೆಯಿರಿ ಮತ್ತು ಅದರ ಸೆಟ್ಟಿಂಗ್ಸ್ ವಿಭಾಗವನ್ನು ತೆರೆಯಿರಿ ಮತ್ತು ಖಾತೆಗೆ ಹೋಗಿ.


ಚೀನಿ ಆ್ಯಪ್‌ಗಳ ಬ್ಯಾನ್ ಬೆನ್ನಲ್ಲೇ ಈ ಭಾರತೀಯ ಆ್ಯಪ್‌ಗೆ ಡಿಮ್ಯಾಂಡಪ್ಪೋ... ಡಿಮ್ಯಾಂಡ್...!


ಈಗ ನೀವು ಖಾತೆ ಮೆನುವಿನಲ್ಲಿ ಎರಡು-ಹಂತದ ಪರಿಶೀಲನೆ ವೈಶಿಷ್ಟ್ಯವನ್ನು ನೋಡುತ್ತೀರಿ, ಅದರ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು "ಸಕ್ರಿಯಗೊಳಿಸು" ಆಯ್ಕೆಯನ್ನು ನೋಡುತ್ತೀರಿ. ಈಗ ಅದರ ಮೇಲೆ ಕ್ಲಿಕ್ ಮಾಡಿ ಮತ್ತು 6 ಅಂಕಿಯ ಪಿನ್ ಹೊಂದಿಸಿ. 


ಪಿನ್ ಹೊಂದಿಸಿದಾಗ, ನಿಮ್ಮ ವಾಟ್ಸಾಪ್ ಖಾತೆಯಲ್ಲಿ ಎರಡು-ಹಂತದ ಪರಿಶೀಲನೆ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲಾಗುತ್ತದೆ.


ನೀವು ಅದನ್ನು ನಿಷ್ಕ್ರಿಯಗೊಳಿಸಲು ಬಯಸಿದರೆ ಇಲ್ಲಿ ವಾಟ್ಸಾಪ್ ಇಮೇಲ್ ವಿಳಾಸವನ್ನು ಕೇಳುತ್ತದೆ. ಈ ಇ-ಮೇಲ್ ಮೂಲಕ ನೀವು ಎರಡು-ಹಂತದ ಪರಿಶೀಲನೆಯನ್ನು ನಿಷ್ಕ್ರಿಯಗೊಳಿಸಬಹುದು.