ನವದೆಹಲಿ: ಪ್ರಧಾನಿ ಮೋದಿ ಮತ್ತು ಭಾರತದ ಬಗ್ಗೆ ಸಚಿವರ ಆಕ್ಷೇಪಾರ್ಹ ಹೇಳಿಕೆಗಳ ನಂತರ ಮಾಲ್ಡೀವ್ಸ್ ಗೆ ಹಿನ್ನಡೆಯಾಗಿದೆ. ಈ ವಿಚಾರದಲ್ಲಿ ಮಾಲ್ಡೀವ್ಸ್ ಸರ್ಕಾರ ಮೂವರು ಸಚಿವರ ವಿರುದ್ಧ ಕ್ರಮ ಕೈಗೊಂಡಿದೆ. ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಸಚಿವರಾದ ಮರ್ಯಮ್ ಶುಜಾ, ಮಲ್ಶಾ ಮತ್ತು ಹಸನ್ ಜಿಶನ್ ಅವರನ್ನು ವಜಾಗೊಳಿಸಲಾಗಿದೆ. ಶಿಯುನಾ ಮಾಲ್ಡೀವ್ಸ್ ಸರ್ಕಾರದಲ್ಲಿ ಕಲೆ, ಯುವಜನತೆ, ಮಾಹಿತಿ ಮತ್ತು ಯುವ ಸಬಲೀಕರಣ ಸಚಿವರಾಗಿದ್ದರು. ಪ್ರಧಾನಿ ಮೋದಿಯವರ ಲಕ್ಷದ್ವೀಪ ಭೇಟಿಯ ನಂತರ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.


COMMERCIAL BREAK
SCROLL TO CONTINUE READING

ಇದಲ್ಲದೇ ಮಾಲ್ಡೀವ್ಸ್ ಸರ್ಕಾರದ ಇನ್ನಿಬ್ಬರು ಸಚಿವರು ಅವಾಚ್ಯ ಶಬ್ದ ಬಳಸಿದ್ದಾರೆ. ಈಗ ಅವರೂ ತಮ್ಮ ಹುದ್ದೆ ಕಳೆದುಕೊಳ್ಳಬೇಕಾಗಿದೆ.  ಪ್ರಧಾನಿ ಮೋದಿ ಜನವರಿ 2ರಂದು ಲಕ್ಷದ್ವೀಪಕ್ಕೆ ಹೋದಾಗ ಈ ಸುಂದರ ಸ್ಥಳವನ್ನು ಹೊಗಳಿದ್ದರು. ಪ್ರಧಾನಿ ಮೋದಿಯವರ ಲಕ್ಷದ್ವೀಪ ಭೇಟಿಯಿಂದ ಬೀಚ್ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಭಾರತವು ಮಾಲ್ಡೀವ್ಸ್‌ನೊಂದಿಗೆ ಸ್ಪರ್ಧಿಸಲು ಹಲವು ಸವಾಲುಗಳನ್ನು ಎದುರಿಸಲಿದೆ. ಭಾರತವು ಮಾಲ್ಡೀವ್ಸ್ ಅನ್ನು ಗುರಿಯಾಗಿಸಿಕೊಂಡಿದೆ ಎಂದು ಮಾಲ್ಡೀವ್ಸ್ ಸರ್ಕಾರದ ಮಂತ್ರಿಗಳ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.


Daily GK Quiz: ವಿಶ್ವ ಭೂ ದಿನವನ್ನು ಯಾವಾಗ ಆಚರಿಸಲಾಗುತ್ತದೆ?


ಪ್ರತಿವರ್ಷ ಲಕ್ಷಾಂತರ ಭಾರತೀಯ ಪ್ರವಾಸಿಗರು ರಜಾದಿನಗಳಿಗಾಗಿ ಮಾಲ್ಡೀವ್ಸ್‌ಗೆ ಹೋಗುತ್ತಾರೆ ಎಂಬುದು ಗಮನಾರ್ಹ. ಆದರೆ ಪ್ರಧಾನಿ ಭೇಟಿಯ ನಂತರ ಇದ್ದಕ್ಕಿದ್ದಂತೆ ಜನರು ಲಕ್ಷದ್ವೀಪವನ್ನು ಗೂಗಲ್ ಸರ್ಚ್‌ನಲ್ಲಿ ಹೆಚ್ಚಾಗಿ ಹುಡುಕತೊಡಗಿದರು. ಇದನ್ನು ಕಂಡು ಕೋಪಗೊಂಡ ಮಾಲ್ಡೀವ್ಸ್ ನಾಯಕರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಲಾರಂಭಿಸಿದರು.


ಇದರ ನಂತರ ಭಾರತವು ಕಠಿಣ ನಿಲುವು ತೋರಿಸಿದ್ದು, ಮಾಲ್ಡೀವ್ಸ್ ಸರ್ಕಾರದ ಮಂತ್ರಿಗಳ ಆಕ್ಷೇಪಾರ್ಹ ಹೇಳಿಕೆಗಳ ವಿರುದ್ಧ ಕಿಡಿಕಾರಿದೆ. ಮಾಲ್ಡೀವ್ಸ್ ಸರ್ಕಾರವು ಸಚಿವ ಶಿಯುನಾ ಅವರ ಹೇಳಿಕೆಯಿಂದ ದೂರವಿದ್ದು, ಇದು ವೈಯಕ್ತಿಕ ಹೇಳಿಕೆ ಎಂದು ಬಣ್ಣಿಸಿದೆ. ಮಾಲ್ಡೀವ್ಸ್ ಸರ್ಕಾರ ತನ್ನ ಹೇಳಿಕೆಯಲ್ಲಿ, ‘ವಿದೇಶಿ ನಾಯಕರು ಮತ್ತು ಉನ್ನತ ಅಧಿಕಾರಿಗಳ ವಿರುದ್ಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅವಹೇಳನಕಾರಿ ಕಾಮೆಂಟ್‌ಗಳ ಬಗ್ಗೆ ನಮಗೆ ತಿಳಿದಿದೆ. ಈ ಅಭಿಪ್ರಾಯಗಳು ವೈಯಕ್ತಿಕ ಮತ್ತು ಮಾಲ್ಡೀವ್ಸ್ ಸರ್ಕಾರದ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ. ಮೇಲಾಗಿ ಇಂತಹ ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳು ಹಿಂಜರಿಯುವುದಿಲ್ಲ’ವೆಂದು ಹೇಳಿದೆ.


ಇದನ್ನೂ ಓದಿ: ಕಿಡ್ನಿ ಕಾಯಿಲೆ: ಮೂತ್ರಪಿಂಡದ ಸಮಸ್ಯೆ ಇದ್ದಲ್ಲಿ ಈ ಸೂಚನೆಗಳನ್ನು ನಿರ್ಲಕ್ಷಿಸಬೇಡಿ..!


ಮಾಲ್ಡೀವ್ಸ್‌ನ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಮತ್ತು ಮಾಲ್ಡೀವ್ಸ್ ರಿಫಾರ್ಮ್ ಮೂವ್‌ಮೆಂಟ್ ಅಧ್ಯಕ್ಷ ಫಾರಿಸ್ ಕೂಡ ಆಕ್ಷೇಪಾರ್ಹ ಹೇಳಿಕೆಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. ಇದಾದ ಬಳಿಕ ಕ್ರಮ ಕೈಗೊಳ್ಳುವಂತೆ ಮಾಲ್ಡೀವ್ಸ್ ಸರ್ಕಾರದ ಮೇಲೆ ಒತ್ತಡ ಹೆಚ್ಚಾಯಿತು.


ಮಾಲ್ಡೀವ್ಸ್ ವಿರೋಧಿ ಪ್ರವೃತ್ತಿ!


ಮಾಲ್ಡೀವ್ಸ್ ಮಂತ್ರಿಗಳ ಆಕ್ಷೇಪಾರ್ಹ ಹೇಳಿಕೆಗಳ ನಂತರ, ಮಾಲ್ಡೀವ್ಸ್ ಅನ್ನು ಬಹಿಷ್ಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಪ್ರಾರಂಭಿಸಲಾಗಿದೆ. ಜನರು ತಮ್ಮ ರದ್ದಾದ ಟಿಕೆಟ್‌ಗಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗದ ತಾರೆಯರು ಮಾಲ್ಡೀವ್ಸ್ ಮಂತ್ರಿಗಳ ವರ್ತನೆಯನ್ನು ಖಂಡಿಸಿದರು ಮತ್ತು ಲಕ್ಷದ್ವೀಪವನ್ನು ಮನಃಪೂರ್ವಕವಾಗಿ ಶ್ಲಾಘಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.