Lottery Ticket winning tips : ಶ್ರೀಮಂತರಾಗುವುದು ಯಾರಿಗೆ ಬೇಡ? ಹಣ ಗಳಿಸಲು ಹಲವು ಮಾರ್ಗಗಳನ್ನು ಅನುಸರಿಸುತ್ತಲೇ ಇರುತ್ತೇವೆ. ಕೆಲವರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಇನ್ನು ಕೆಲವರು ಮೆದುಳನ್ನು ಬಳಸುತ್ತಾರೆ. ಕೆಲವರು ತಪ್ಪು ವ್ಯವಹಾರಗಳ ಮೂಲಕ ಹಣವನ್ನು ಗಳಿಸುವ ಹಾದಿ ಕಂಡುಕೊಳ್ಳುತ್ತಾರೆ. ಆದರೆ ನಾವಿಲ್ಲಿ ಹೇಳುತ್ತಿರುವುದು ಲಾಟರಿ ಬಗ್ಗೆ. ನೀವು ಕೂಡಾ ಬಹಳ ಸಲ ಲಾಟರಿ ಟಿಕೆಟ್ ಖರೀದಿಸಿ ಅದೃಷ್ಟ ಪರೀಕ್ಷಿಸಿರಬಹುದು. ಆದರೆ ಲಾಟರಿ ಗೆದ್ದೇ ಇಲ್ಲ ಎನ್ನುವ ಅಸಮಾಧಾನ ನಿಮ್ಮನ್ನೂ ಕಾಡುತ್ತಿರಬಹುದು. ಲಾಟರಿ ಮೂಲಕ ಹಣ ಸಂಪಾದಿಸಲು ಹೋಗಿ ಹಣ ಕಳೆದುಕೊಂಡಿರುವ ಅನೇಕರೂ ನಮ್ಮ ನಡುವೆಯೇ ಇದ್ದಾರೆ. ಆದರೆ ಇಬ್ಬರು ಬ್ರಿಟಿಷ್ ಗಣಿತಜ್ಞರಾದ ಡೇವಿಡ್ ಸ್ಟೀವರ್ಟ್ ಮತ್ತು ಡೇವಿಡ್ ಕುಶಿಂಗ್, ಲಾಟರಿಯಲ್ಲಿ ಜಾಕ್‌ಪಾಟ್ ಹೊಡೆಯುವ ವಿಧಾನವನ್ನು ಸೂಚಿಸಿದ್ದಾರೆ.
ಈ ವಿಧಾನ ಕಂಡುಕೊಂಡ ಬ್ರಿಟಿಷ್ ಗಣಿತಜ್ಞರು :
ಈ ಇಬ್ಬರು ಗಣಿತಜ್ಞರು ಲಾಟರಿ ಗೆಲ್ಲುವ ಸಾಧ್ಯತೆಯನ್ನು ಹೆಚ್ಚಿಸುವ ವಿಧಾನವನ್ನು ಕಂಡುಹಿಡಿದಿದ್ದಾರೆ.ಡೇವಿಡ್ ಸ್ಟೀವರ್ಟ್ ಮತ್ತು ಕುಶಿಂಗ್ ಪ್ರಕಾರ, ಯುಕೆ ರಾಷ್ಟ್ರೀಯ ಲಾಟರಿ ಗೆಲ್ಲಲು 27 ಟಿಕೆಟ್‌ಗಳನ್ನು ಖರೀದಿಸಬೇಕಾಗುತ್ತದೆ.ಇದಕ್ಕಾಗಿ 4.5 ಕೋಟಿ ಸಂಭವನೀಯ ಸಾಧ್ಯತೆಗಳನ್ನು ಪರಿಗಣಿಸಿ, ಕೇವಲ 27 ಟಿಕೆಟ್ ಖರೀದಿಸಿದರೆ ಲಾಟರಿ ವಿಜೇತರಾಗಬಹುದು ಎಂದು ಹೇಳಿದ್ದಾರೆ. ವಿಶೇಷವೆಂದರೆ ಈಗ ಪ್ರಪಂಚದ ವಿವಿಧ ಭಾಗಗಳಲ್ಲಿ ಜನರು ಅವರ ಸೂತ್ರದ ಮೇಲೆ ಲಾಟರಿಗಳನ್ನು ಖರೀದಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ : Online rape : ʼಆನ್‌ಲೈನ್ʼನಲ್ಲಿ 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ..!
ಗೆಲ್ಲಲು 27 ಟಿಕೆಟ್‌ಗಳ ಅಗತ್ಯ :
ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದ ಈ ಇಬ್ಬರು ಗಣಿತಜ್ಞರು ಲಾಟರಿ ಗೆಲ್ಲುವ 100% ಗ್ಯಾರಂಟಿ ನೀಡುವುದಿಲ್ಲ ಎನ್ನುವುದನ್ನು ಹೇಳುತ್ತಾರೆ.ಆದರೆ, ಒಬ್ಬ ವ್ಯಕ್ತಿ 27 ಟಿಕೆಟ್‌ಗಳನ್ನು ಖರೀದಿಸಿದರೆ, ಲಾಟರಿ ಗೆದ್ದು ಶ್ರೀಮಂತನಾಗುವ ಸಾಧ್ಯತೆ ಹೆಚ್ಚು ಎನ್ನುವ ಲೆಕ್ಕಾಚಾರ ಅವರದ್ದು. ಯುಕೆ ರಾಷ್ಟ್ರೀಯ ಲಾಟರಿಯಲ್ಲಿ ಗೆಲುವನ್ನು ಖಾತರಿಪಡಿಸಲು 27 ಟಿಕೆಟ್‌ಗಳನ್ನು ಗೆಲ್ಲಬೇಕು. ಯುಕೆ ನ್ಯಾಷನಲ್ ಲಾಟರಿಯೊಂದಿಗಿನ ತಮ್ಮ ಸಂಶೋಧನಾ ಪ್ರಬಂಧದಲ್ಲಿ, ಆಟಗಾರರು 1 ಮತ್ತು 59 ರ ನಡುವೆ ಆರು ವಿಭಿನ್ನ ಸಂಖ್ಯೆಗಳಿಂದ ತಮ್ಮ ಆಯ್ಕೆಯ ಟಿಕೆಟ್‌ಗಳನ್ನು ಖರೀದಿಸಬೇಕು. ಡ್ರಾ ಸಮಯದಲ್ಲಿ, 1 ರಿಂದ 59 ರವರೆಗಿನ ಸಂಖ್ಯೆಯ ಸೆಟ್‌ನಿಂದ ಬದಲಾಯಿಸದೆ ಒಂದು ನಂಬರ್ ಅನ್ನು ರಾಂಡಂ ಆಗಿ ಆಯ್ಕೆ ಮಾಡಲಾಗುತ್ತದೆ. 27 ಟಿಕೆಟ್‌ಗಳು 45,057,474 ಸಂಭವನೀಯ ಡ್ರಾಗಳಲ್ಲಿ ಬಹುಮಾನವನ್ನು ಹೇಗೆ ಖಚಿತಪಡಿಸಿಕೊಳ್ಳಬಹುದು ಎಂಬುದನ್ನು ಬ್ರಿಟಿಷ್ ಗಣಿತಜ್ಞರು ತಮ್ಮ ಪ್ರಬಂಧದಲ್ಲಿ ಉಲ್ಲೇಖಿಸಿದ್ದಾರೆ.
ಗೆಲ್ಲಲು ಎರಡು ಸಂಖ್ಯೆಗಳ ಹೊಂದಾಣಿಕೆ ಅಗತ್ಯ :
ಡ್ರಾ ಮಾಡಿದ ಆರು ಸಂಖ್ಯೆಗಳಲ್ಲಿ ಕನಿಷ್ಠ ಎರಡು ಸಂಖ್ಯೆ ಇದ್ದರೆ ಆಟಗಾರನಿಗೆ ಬಹುಮಾನವನ್ನು ನೀಡಲಾಗುತ್ತದೆ. ಬಹುಮಾನವನ್ನು ಗಟ್ಟಿಗೊಳಿಸುವ 27 ಟಿಕೆಟ್‌ಗಳನ್ನು ಇಲ್ಲಿ ಗುರುತಿಸಲಾಗಿದೆ. ಗೆಲುವನ್ನು ಸಾಧಿಸಲು 27 ಟಿಕೆಟ್‌ಗಳು ಅಗತ್ಯವೆಂದು ಮತ್ತೆ ಮತ್ತೆ ಹೇಳಲಾಗಿದೆ. ಏಕೆಂದರೆ 26 ಟಿಕೆಟ್‌ಗಳೊಂದಿಗೆ ಕೂಡಾ ಗೆಲುವನ್ನು ಗ್ಯಾರಂಟಿ ಎಂದು ಹೇಳಲು ಸಾಧ್ಯವಿಲ್ಲವಂತೆ. ಸ್ಟೀವರ್ಟ್ ಮತ್ತು ಕುಶಿಂಗ್ ಅವರು ಸೀಮಿತ ರೇಖಾಗಣಿತ ಎಂದು ಕರೆಯಲ್ಪಡುವ ಗಣಿತದ ತಂತ್ರವನ್ನು ಇಲ್ಲಿ ಅನ್ವಯಿಸಿದ್ದಾರೆ. ಈ ವಿಧಾನವು ಒಂದರಿಂದ 59 ಸಂಖ್ಯೆಗಳನ್ನು ಜೋಡಿಯಾಗಿ ಅಥವಾ ಮೂರು ವಿವಿಧ ಜ್ಯಾಮಿತೀಯ ಆಕಾರಗಳಲ್ಲಿ ಜೋಡಿಸುವುದನ್ನು ಒಳಗೊಂಡಿರುತ್ತದೆ. ಮುಂದೆ, ಪ್ರತಿಯೊಂದು ಸಂಖ್ಯೆಗಳನ್ನು ರೇಖೆಗಳೊಂದಿಗೆ ಸಂಪರ್ಕಿಸಲಾಗಿದ್ದು, ಆರು ಸಂಖ್ಯೆಗಳ ಅನುಕ್ರಮವನ್ನು ರಚಿಸುತ್ತದೆ. ಇದು ಲಾಟರಿ ಟಿಕೆಟ್ ಗೆ ಸಮನಾಗಿರುತ್ತದೆ.
ಇದನ್ನೂ ಓದಿ : Japan Flight Fire: ಜಪಾನ್‌ನಲ್ಲಿ ಲ್ಯಾಂಡಿಂಗ್ ವೇಳೆ ವಿಮಾನದಲ್ಲಿ ಬೆಂಕಿ, 5 ಜನ ಸಾವು.. ಭಯಾನಕ ವಿಡಿಯೋ ನೋಡಿ
ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಯುಕೆ ರಾಷ್ಟ್ರೀಯ ಲಾಟರಿ ಹೇಗೆ ಗೆಲ್ಲುವುದು ಎನ್ನುವುದನ್ನು ಈ ಇಬರು ಅಧ್ಯಯನ ನಡೆಸಿ ಹೇಳಿರುವುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.