ನವದೆಹಲಿ:ಕೇಂದ್ರ ಸರ್ಕಾರ ಹಾಗೂ ಸಿಬಿಐ ವಿರುದ್ದ ನಡೆಸುತ್ತಿರುವ ಮಮತಾ ಬ್ಯಾನರ್ಜೀ  ಪ್ರತಿಭಟನೆ ವಿಚಾರವಾಗಿ ಕೇಂದ್ರ ಸಚಿವ ಅರುಣ್ ಜೈಟ್ಲಿ ಕಿಡಿ ಕಾರಿದ್ದಾರೆ.


COMMERCIAL BREAK
SCROLL TO CONTINUE READING

ಕೊಲ್ಕೊತ್ತಾ ಪೋಲಿಸ್ ಕಮಿಷನರ್ ರಾಜೀವ್ ಕುಮಾರ್ ರನ್ನು ಚಿಟ್ ಫಂಡ್ ವಿಚಾರವಾಗಿ  ಸಿಬಿಐ ತನಿಖೆ ನಡೆಸುವ ಪ್ರಯತ್ನ ಮಾಡಿದೆ.ಆದರೆ ಈಗ ಮಮತಾ ಬ್ಯಾನರ್ಜೀ ಸಿಬಿಐ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ್ ವ್ಯಕ್ತಪಡಿಸಿ ಧರಣಿ ಸತ್ಯಾಗ್ರಹಕ್ಕೆ ಕುಳಿತಿದ್ದಾರೆ ಎಂದು ಬಿಜೆಪಿ ಕಿಡಿ ಕಾರಿದೆ.


ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಅರುಣ್ ಜೈಟ್ಲಿ  ಪೋಲಿಸ್ ಅಧಿಕಾರಿಯ ರೂಟಿನ್ ತನಿಖೆ ವಿಚಾರವಾಗಿ ಮಮತಾ ಬ್ಯಾನರ್ಜೀ ಅವರು ಈ ರೀತಿ ಮಾಡುತ್ತಿದ್ದಾರೆ ಎಂದು ತಿಳಿಯುವುದು ತಪ್ಪು.ಅವರು ಇತರರನ್ನು ಉನ್ನತ ಸ್ಥಾನದಿಂದ ಮುಕ್ತ ಮಾಡಿ ತನ್ನನ್ನು ಭಾರತದ ಪ್ರತಿಪಕ್ಷಗಳ ನ್ಯೂಕ್ಲಿಯಸ್ ಎಂದು ಬಿಂಬಿಸಿಕೊಳ್ಳಲು ಈ ಪ್ರಯತ್ನ ಮಾಡುತ್ತಿದ್ದಾರೆ.ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದರು ಸಹಿತ ವಿರೋಧ ಪಕ್ಷದಲ್ಲಿನ ಇತರ ನಾಯಕರಿಗಿಂತ ಕೇಂದ್ರ ಸ್ಥಾನದಲ್ಲಿರಲು ಅವರು ಬಯಸುತ್ತಿದ್ದಾರೆ ಎಂದು ಜೈಟ್ಲಿ ಬರೆದುಕೊಂಡಿದ್ದಾರೆ.


ಇನ್ನು ಮುಂದುವರೆದು ಮುಂಬರುವ 2019 ರ ಚುನಾವಣೆಯ ನಂತರ ಭಾರತದ ಪ್ರತಿಪಕ್ಷಗಳು ನೀಡುವ ಆಡಳಿತದ ಮಾದರಿ ಎಂದು ಮಮತಾ ಬ್ಯಾನರ್ಜೀ ಅವರನ್ನು ಟೀಕಿಸಿದರು.