ಕೋಲ್ಕತಾ: ಮುಂದಿನ ವರ್ಷ ಅಂದರೆ 2021 ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ರಣತಂತ್ರ ರೂಪಿಸುತ್ತಿರುವ ಟಿಎಂಸಿ, ಬಿಜೆಪಿಯ ಹಿಂದುತ್ವ ತಂತ್ರಕ್ಕೆ ಪ್ರತಿತಂತ್ರವಾಗಿ 'ಬಂಗಾಳಿ ಹೆಮ್ಮೆ' ಎಂಬ ಸಿದ್ಧಾಂತವನ್ನ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳಲು ನಿರ್ಧರಿಸಿದೆ.


COMMERCIAL BREAK
SCROLL TO CONTINUE READING

ತಮ್ಮ ಪಕ್ಷದ ಬಗ್ಗೆ ಪಕ್ಷಕ್ಕೆ ನಿರ್ದಿಷ್ಟ ಸಿದ್ಧಾಂತವೇ ಇಲ್ಲ ಎಂದು ಆಡಿಕೊಳ್ಳುವವರ ಬಾಯಿ ಮುಚ್ಚಿಸಲು ಮುಂದಾದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee), ಬಂಗಾಳ ಆಧಾರಿತ ರಾಷ್ಟ್ರೀಯವಾದವನ್ನ ಮುಂದಿಟ್ಟು ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ.


UGC NET July 2020 ಫಲಿತಾಂಶ ಪ್ರಕಟ, nta.ac.in ಮೇಲೆ ಫಲಿತಾಂಶ ಪರಿಶೀಲಿಸಿ


ಅದ್ರಂತೆ, ಈ ಸಿದ್ದಾಂತದ ಬಗ್ಗೆ ತಿಳಿಸಿದ ಟಿಎಂಸಿ ನಾಯಕ ಸಂಸದ ಸೌಗತಾ ರಾವ್‌, 'ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಭಿವೃದ್ಧಿ ಜೊತೆ ಜೊತೆಗೆ ಬಂಗಾಳ ಹೆಮ್ಮೆ ಎಂಬುದೂ ನಮ್ಮ ಚುನಾವಣೆಯ ಮುಖ್ಯ ಧ್ಯೇಯವಾಗಿರಲಿದೆ. ಬಂಗಾಳ ಹೆಮ್ಮೆ ಎಂಬುದು ಕೇವಲ ಬಂಗಾಳಿಗಳ ಕುರಿತಾದದ್ದಲ್ಲ. ಇಲ್ಲಿನ ಮಣ್ಣಿನ ಮಕ್ಕಳ ಕುರಿತಾದದ್ದು' ಎಂದರು.


ಈ ರಾಜ್ಯ ಸರ್ಕಾರದಿಂದ 8 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ವಿತರಣೆ