ಈ ರಾಜ್ಯ ಸರ್ಕಾರದಿಂದ 8 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ವಿತರಣೆ

ಹರಿಯಾಣ ಸರ್ಕಾರ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣಕ್ಕೆ ಅಡ್ಡಿಯಾಗದಂತೆ ಕ್ರಮವಹಿಸುವ ನಿಟ್ಟಿನಲ್ಲಿ ಟ್ಯಾಬ್ಲೆಟ್‌ಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ. ಆರ್ಥಿಕವಾಗಿ ದುರ್ಬಲ ಕುಟುಂಬಗಳ ವಿದ್ಯಾರ್ಥಿಗಳು ಹರಿಯಾಣ ಸರ್ಕಾರ ಒದಗಿಸುವ ಉಚಿತ ಟ್ಯಾಬ್ಲೆಟ್ ಮೂಲಕ ತಮ್ಮ ಆನ್‌ಲೈನ್ ತರಗತಿಗಳನ್ನು ಮುಂದುವರಿಸಲು ಸಾಧ್ಯವಾಗುತ್ತದೆ.

Last Updated : Dec 1, 2020, 12:17 PM IST
  • ಕೊರೊನಾವೈರಸ್ ಹರಡುವಿಕೆಯ ದೃಷ್ಟಿಯಿಂದ 2020-21ರ ಹೊಸ ಶೈಕ್ಷಣಿಕ ಅಧಿವೇಶನದಲ್ಲಿ ಆನ್‌ಲೈನ್ ಅಧ್ಯಯನ ನಡೆಯುತ್ತಿದೆ.
  • ಆನ್‌ಲೈನ್ ಶಿಕ್ಷಣಕ್ಕಾಗಿ ಎಲ್ಲಾ ವಿದ್ಯಾರ್ಥಿಗಳು ಟ್ಯಾಬ್ಲೆಟ್, ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ಸಂಪರ್ಕವನ್ನು ಹೊಂದಿರಬೇಕು.
  • ಆದರೆ ಆರ್ಥಿಕವಾಗಿ ದುರ್ಬಲವಾಗಿರುವ ಪೋಷಕರು ತಮ್ಮ ಮಕ್ಕಳಿಗೆ ಈ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುವುದಿಲ್ಲ.
ಈ ರಾಜ್ಯ ಸರ್ಕಾರದಿಂದ 8 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ವಿತರಣೆ title=

ನವದೆಹಲಿ: ಕರೋನವೈರಸ್ ಸೋಂಕಿನಿಂದಾಗಿ ಈಗಾಗಲೇ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿ ಉಂಟಾಗಿದೆ. ಈ ಸಮಯದಲ್ಲಿ ಶಿಕ್ಷಕರು ಆನ್‌ಲೈನ್ ತರಗತಿಗಳ ಮೂಲಕ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದಾರೆ. ಆದರೆ ಅನೇಕ ಪೋಷಕರು ತಮ್ಮ ಮಕ್ಕಳ ಆನ್‌ಲೈನ್ ತರಗತಿಗಾಗಿ ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳು ಅಥವಾ ಸ್ಮಾರ್ಟ್‌ಫೋನ್‌ಗಳನ್ನು (Smartphones) ಖರೀದಿಸುವ ಪರಿಸ್ಥಿತಿಯಲ್ಲಿ ಇಲ್ಲ ಎಂಬುದು ವಾಸ್ತವ ಸಂಗತಿ.

ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಹರಿಯಾಣದ (Haryana) ಬಿಜೆಪಿ ಸರ್ಕಾರ 8 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ನೀಡಲು ನಿರ್ಧರಿಸಿದೆ. ಇದು ಆನ್‌ಲೈನ್ ಶಿಕ್ಷಣಕ್ಕೆ (Online Class) ಅನುವು ಮಾಡಿಕೊಡುತ್ತದೆ.

ಈ ವರ್ಷ ಶಾಲೆಗಳನ್ನು ಆರಂಭಿಸಬೇಡಿ, ಎಲ್ಲರನ್ನೂ ಪಾಸ್ ಮಾಡಿ: ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆ

ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್:
ಈ ಕುರಿತಂತೆ ಟ್ವೀಟ್ ಮಾಡಿರುವ ಹರಿಯಾಣ ಮುಖ್ಯಮಂತ್ರಿ "ಹರಿಯಾಣ ಸರ್ಕಾರವು ಕೋವಿಡ್ -19 (Covid 19) ರ ದೃಷ್ಟಿಯಿಂದ ಡಿಜಿಟಲ್ ಶಿಕ್ಷಣಕ್ಕೆ ಅನುಕೂಲವಾಗುವಂತೆ ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಎಂಟನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್‌ಗಳನ್ನು ಒದಗಿಸಲು ಯೋಜಿಸಲಾಗಿದೆ. ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ವರ್ಗಗಳ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ನೀಡಲಿದೆ ಎಂದು ತಿಳಿಸಿದೆ.

ಆನ್ ಲೈನ್ ಶಿಕ್ಷಣ ಪಡೆಯಲು ಕಷ್ಟವಾಗಿರುವ ಮಕ್ಕಳ ನೆರವಿಗೆ ಬಂದ ಪೋಲಿಸ್!

ಟ್ಯಾಬ್ಲೆಟ್ ಮೊದಲೇ ಲೋಡ್ ಮಾಡಲಾದ ವಿಷಯ ಅಧ್ಯಯನ ವಸ್ತುಗಳನ್ನು ಹೊಂದಿರುತ್ತದೆ:-
ಹರಿಯಾಣದ ಸಿಎಮ್‌ಒ ಮುಂದಿನ ಟ್ವೀಟ್‌ನಲ್ಲಿ ಈ ಯೋಜನೆಯಡಿ ವಿದ್ಯಾರ್ಥಿಗಳು ಈ ಟ್ಯಾಬ್ಲೆಟ್ ಅನ್ನು ಶಾಲೆಗೆ ಹಿಂದಿರುಗಿದ ನಂತರ ಹಿಂದಿರುಗಿಸಬೇಕಾಗುತ್ತದೆ ಎಂದು ಬರೆದಿದ್ದಾರೆ. ಪೂರ್ವ ಲೋಡ್ ಮಾಡಲಾದ ವಿಷಯವಾಗಿ ಡಿಜಿಟಲ್ ಪುಸ್ತಕಗಳ ಜೊತೆಗೆ ವಿವಿಧ ರೀತಿಯ ಪರೀಕ್ಷೆಗಳು, ವೀಡಿಯೊಗಳು ಮತ್ತು ಇತರ ವಸ್ತುಗಳು ಇರುತ್ತವೆ, ಇದು ಸರ್ಕಾರಿ ಶಾಲೆಗಳ ಪಠ್ಯಕ್ರಮ ಮತ್ತು ಪಠ್ಯಕ್ರಮದ ಪ್ರಕಾರ ಇರುತ್ತದೆ ಎನ್ನಲಾಗಿದೆ.
 

Trending News