ನವದೆಹಲಿ: ಹಿರಿಯ ಬಿಜೆಪಿ ನಾಯಕ ಹಾಗೂ ಪಶ್ಚಿಮ ಬಂಗಾಳದ ಉಸ್ತುವಾರಿ ಕೈಲಾಶ್ ವರ್ಗಿಯಾ ಮಮತಾ ಬ್ಯಾನರ್ಜಿ ಅವರು ಎನ್ಕೌಂಟರ್ನಲ್ಲಿ ಬರಾಕ್ಪೋರ್ ಬಿಜೆಪಿ ಅಭ್ಯರ್ಥಿ ಅರುಣ್ ಸಿಂಗ್ ಅವರನ್ನು ಎನ್ಕೌಂಟರ್ ಮಾಡಬಹುದು ಎಂದು ಆರೋಪಿಸಿದ್ದಾರೆ.


COMMERCIAL BREAK
SCROLL TO CONTINUE READING

ಕೈಲಾಶ್ ವಿಜಯ್ ವರ್ಗಿಯಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಮತಾ ಬ್ಯಾನರ್ಜೀ ಈಗಾಗಲೇ ಅರುಣ್ ಸಿಂಗ್ ಅವರನ್ನು ಬಂಧಿಸಲು ಪೊಲೀಸ್ ಆಯುಕ್ತ ಸುನಿಲ್ ಚೌಧರಿಗೆ ಮಮತಾ ಬ್ಯಾನರ್ಜಿಯವರು ಆದೇಶ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಒಂದು ವೇಳೆ ಅರ್ಜುನ್ ಸಿಂಗ್ ಅವರಿಗೆ ಜೀವಕ್ಕೆ ಅಪಾಯವಾದಲ್ಲಿ ಅದಕ್ಕೆ ಮಮತಾ ಬ್ಯಾನರ್ಜೀ ಅವರೇ ಕಾರಣ ಎಂದು ಹೇಳಿದ್ದಾರೆ.



"ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿ ಅಪಾಯ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಸಿಎಂ ಮಮತಾ ಬ್ಯಾನರ್ಜೀ ಅವರು ಪೋಲಿಸ್ ಕಮಿಷನರ್ ಸುನಿಲ್ ಚೌದರಿಯವರಿಗೆ ಬ್ಯಾರಕ್ ಪುರ ಅಭ್ಯರ್ಥಿ  ಅರ್ಜುನ್ ಸಿಂಗ್ ಅವರನ್ನು ಬಂಧಿಸಲು ಆದೇಶ ನೀಡಿದ್ದಾರೆ.ಅವರು ಎನ್ಕೌಂಟರ್ ಕೂಡ ಆಗಬಹುದು.ಆದ್ದರಿಂದ ಅವರಿಗೆ ಏನೇ ಆದರೂ ಕೂಡ ಅದಕ್ಕೆ ಮಮತಾ ಅವರೇ ಕಾರಣ "ಎಂದು ವಿಜಯ್ ವರ್ಗಿಯಾ ಆರೋಪಿಸಿದ್ದಾರೆ.


ತೃಣಮೂಲ ಕಾಂಗ್ರೆಸ್ ಪಕ್ಷದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅರ್ಜುನ್ ಸಿಂಗ್ ಅವರು ಇತ್ತೀಚಿಗೆ ಮಾರ್ಚ್ ತಿಂಗಳಲ್ಲಿ ಬಿಜೆಪಿಪಕ್ಷಕ್ಕೆ ಸೇರ್ಪಡೆಯಾಗಿದ್ದರು.