ದೀದಿಗೆ ಮತ್ತೊಂದು ಶಾಕ್! ಇನ್ನೋರ್ವ ಟಿಎಂಸಿ ಸಂಸದ ಬಿಜೆಪಿ ತೆಕ್ಕೆಗೆ!
ತೃಣಮೂಲ ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕ ಸಿಸಿರ್ ಅಧಿಕಾರಿ (Sisir Adhikari) ಆಹ್ವಾನ ಸಿಕ್ಕರೆ ಮಾರ್ಚ್ 20ರಂದು ಕಂಠಿಯಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೊದಿಯವವರ ರ್ಯಾಲಿಯಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ. ಇದಲ್ಲದೆ ಸಿಸಿರ್ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಯವರ ಸಮ್ಮುಖದಲ್ಲಿ ಬಿಜೆಪಿ ಸೇರಲಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.
ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ 2021 (West Bengal Assembly Election 2021)ರಲ್ಲಿ ಬಿಜೆಪಿ ಮತ್ತು ಟಿಎಂಸಿ ಪಕ್ಷದ ನಡುವೆ ನೇರ ಹಣಾಹಣೆ ಏರ್ಪಟ್ಟಿದ್ದು ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಪಕ್ಷಾಂತರ ಪರ್ವ ಮುಂದುವರೆದಿದ್ದು ಟಿಎಂಸಿಯ ಮತ್ತೋರ್ವ ಹಿರಿಯ ಸಂಸದ ಸಿಸಿರ್ ಅಧಿಕಾರಿ (Sisir Adhikari) ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಆಹ್ವಾನ ಸಿಕ್ಕರೆ ಮಾರ್ಚ್ 20ರಂದು ಕಂಠಿಯಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೊದಿಯವವರ ರ್ಯಾಲಿಯಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.
ಶುಬೇಂಡು ಅವರ ತಂದೆ ಸಿಸಿರ್ ಅಧಿಕಾರಿ:
ಸಿಸಿರ್ ಬಿಜೆಪಿ ನಾಯಕ ಶುಬೇಂಡು ಅಧಿಕಾರಿ (Suvendu Adhikari) ಅವರ ತಂದೆ. ವಾಸ್ತವವಾಗಿ ಟಿಎಂಸಿ ತೊರೆದು ಬಿಜೆಪಿ ಸೇರ್ಪಡೆಗೊಂಡ ಶುಬೇಂದು ಅಧಿಕಾರಿ ಅವರಿಗೆ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಶುಬೇಂದು ಅಧಿಕಾರಿ ಈ ಕ್ಷೇತ್ರದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರ ವಿರುದ್ಧ ಸ್ಪರ್ಧಿಸಲಿದ್ದಾರೆ.
ಬಿಜೆಪಿಗೆ ಸೇರ್ಪಡೆ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಸಿರ್ ಅಧಿಕಾರಿ, 'ನನ್ನನ್ನು ಆಹ್ವಾನಿಸಿದರೆ ಮತ್ತು ನನ್ನ ಮಕ್ಕಳು ಅದಕ್ಕೆ ಅವಕಾಶ ನೀಡಿದರೆ ನಾನು ಮೋದಿ ಜಿ ಅವರ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುತ್ತೇನೆ' ಎಂದಿದ್ದಾರೆ.
ಇದನ್ನೂ ಓದಿ - Mamta Banerjee ಮೇಲೆ ನಡೆದದ್ದು ದಾಳಿಯೇ /ಅಪಘಾತ? ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
ಲಾಕೆಟ್ ಚಟರ್ಜಿ ಭೇಟಿ:
ಸಂಸದ ಶಿಶಿರ್ ಅವರ ಇಬ್ಬರು ಪುತ್ರರಾದ ಶುಭೇಂಡು ಮತ್ತು ಸೌಮೇಂಡು ಅಧಿಕಾರಿ ಈಗಾಗಲೇ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಈ ಮಧ್ಯೆ ಬಿಜೆಪಿ ಸಂಸದ ಲಾಕೆಟ್ ಚಟರ್ಜಿ ಶನಿವಾರ ಶಿಶಿರ್ ಅಧಿಕಾರಿಯ ನಿವಾಸಕ್ಕೆ ತೆರಳಿ ಒಟ್ಟಿಗೆ ಭೋಜನ ಸವಿದರು. ಆದರೆ, ಇಬ್ಬರೂ ಇದನ್ನು 'ಸೌಜನ್ಯದ ಭೇಟಿ' ಎಂದು ಬಣ್ಣಿಸಿದರು.
ಇದನ್ನೂ ಓದಿ - ಸಿಎಂ ಮಮತಾ ಬ್ಯಾನರ್ಜೀ ಮೇಲಿನ ದಾಳಿ ಬಗ್ಗೆ ಚುನಾವಣಾ ಆಯೋಗ ಹೇಳಿದ್ದೇನು?
ಮಮತಾ ರ್ಯಾಲಿಯನ್ನು ತಲುಪಲಿಲ್ಲ: ಕಾಣದ ತಂದೆ ಮಗ:
ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ಸಮ್ಮುಖದಲ್ಲಿ ಶುಭೇಂಡು ಅಧಿಕಾರಿ ಬಿಜೆಪಿಗೆ ಸೇರಿದರು. ನಂತರ ಅವರು ತಮ್ಮ ಕಿರಿಯ ಸಹೋದರ ಸೌಮೇಂಡು ಅವರನ್ನು ಬಿಜೆಪಿಗೆ ಸೇರಲು ಮನವೊಲಿಸಿದರು. ಶುಬೆಂಡು ಅಧಿಕಾರಿಯ ಕಿರಿಯ ಸಹೋದರ ದಿಬ್ಯೆಂಡು ಮತ್ತು ತಂದೆ ಶಿಶಿರ್ ಅಧಿಕಾರಿ ಕ್ರಮವಾಗಿ ತಮುಕ್ ಮತ್ತು ಕಾಂತಿಯ ಲೋಕಸಭಾ ಸದಸ್ಯರಾಗಿದ್ದಾರೆ. ಆದರೆ ಈ ಇಬ್ಬರೂ ಮಮತಾ ಬ್ಯಾನರ್ಜಿ ಅವರ ರ್ಯಾಲಿಯಲ್ಲಿ ಪಾಲ್ಗೊಂಡಿರಲಿಲ್ಲ ಎಂಬುದು ಗಮನಾರ್ಹವಾಗಿದೆ. ಅಂದಿನಿಂದ ಅವರು ಬಿಜೆಪಿಗೆ ಸೇರುವ ಬಗ್ಗೆ ಊಹಾಪೋಹಗಳು ಕೇಳಿ ಬರುತ್ತಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.