ನವದೆಹಲಿ: ಗ್ರಾಹಕನೋಬ್ಬನ ಆರ್ಡರ್ ಮಾಡಿದ ಮೊಬೈಲ್ ಪೋನ್ ಬದಲಾಗಿ ಸೋಪ್ ಬಂದಿದ್ದರಿಂದ ಆ ಗ್ರಾಹಕನು ನೀಡಿದ ದೂರಿನನ್ವಯ ಈಗ ಭಾರತದ ಅಮೆಜಾನ್ ಕಂಪನಿ ಮುಖ್ಯಸ್ಥ ಹಾಗೂ ಮೂವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.


COMMERCIAL BREAK
SCROLL TO CONTINUE READING

ಈ ಪ್ರಕರಣವು ಈಗ ಗ್ರೇಟರ್ ನೋಯ್ಡಾದಲ್ಲಿರುವ ಬಿಸ್ರಾಕ್ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ತಿಳಿದುಬಂದಿದೆ.ಇದೇ ವೇಳೆ ವಂಚನೆ ಪ್ರಕರಣಗಳನ್ನು ಕಂಪನಿ ಗಂಭೀರವಾಗಿ ತೆಗೆದುಕೊಂಡಿದ್ದು ಈಗ ಪೊಲೀಸರಿಗೆ ಸಹಕರಿಸಲಾಗುವುದು ಎಂದು ಹೇಳಿದೆ.


ದೂರುದಾರ ಹೇಳಿರುವಂತೆ ಅಮೆಜಾನ್ ವೆಬ್ಸೈಟ್ ಮೂಲಕ ಮೊಬೈಲ್ ಪೋನ್ ನ್ನು ಆರ್ಡೆರ್ ಮಾಡಿದ್ದು, ಆದರೆ ಅಕ್ಟೋಬರ್ 27 ರಂದು ಪಾರ್ಸಲ್ ನ್ನು ಓಪನ್ ಮಾಡಿದಾಗ ಪೋನಿನ ಬದಲಾಗಿ ಅಲ್ಲಿ ಸೊಪ್ ಇದ್ದಿದ್ದು ಕಂಡು ಬಂದಿದೆ ಎಂದು ಬಿಸ್ರಾಕ್  ಸರ್ಕಲ್ ಅಧಿಕಾರಿ ನಿಶಾಂಕ್ ಶರ್ಮಾ ತಿಳಿಸಿದ್ದಾರೆ.


ಈ ಗ್ರಾಹಕನು ನೀಡಿದ ದೂರಿನ ಆಧಾರದ ಮೇಲೆ ಅಮೆಜಾನ್ ಇಂಡಿಯಾದ ಮುಖ್ಯಸ್ಥ ಅಮಿತ್ ಅಗರವಾಲ್ ಮತ್ತು ದರ್ಶಿತಾ ಪ್ರೈ.ಲಿಮಿಟೆಡ್ ಪ್ರದೀಪ್ ಕುಮಾರ್, ರವೀಶ್ ಕುಮಾರ್ ಮತ್ತು ಡೆಲಿವರಿ ಹುಡುಗ ಅನಿಲ್ ಎನ್ನುವವರ ಮೇಲೆ ಭಾರತೀಯ ದಂಡ ಸಂಹಿತೆಯ 420 (ವಂಚನೆ ಮತ್ತು ಅಪ್ರಾಮಾಣಿಕತೆ), 406 (ಅಪರಾಧದ ಅಪರಾಧದ ಅಪರಾಧ) ಮತ್ತು 120 ಬಿ (ಪಕ್ಷ ಕ್ರಿಮಿನಲ್ ಪಿತೂರಿ) ದ ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.