ಭೋಪಾಲ್ (ಮಧ್ಯಪ್ರದೇಶ) : ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿಯೊಬ್ಬರು 3,419 ಕೋಟಿ ರೂಪಾಯಿಗಳ ವಿದ್ಯುತ್ ಬಿಲ್ ಪಡೆದಿದ್ದಾರೆ. ಈ ಬಿಲ್‌ ಕಂಡ ವ್ಯಕ್ತಿ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜುಲೈ ತಿಂಗಳ ಗೃಹಬಳಕೆಯ ವಿದ್ಯುತ್ ಬಿಲ್‌ನಲ್ಲಿನ ದೊಡ್ಡ ಮೊತ್ತವನ್ನು ನೋಡಿದ ನಂತರ ವೃದ್ಧ ಅನಾರೋಗ್ಯಕ್ಕೆ ಒಳಗಾದರು ಎಂದು ವ್ಯಕ್ತಿಯ ಮಗ ಸಂಜೀವ್ ಕಂಕಣೆ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸೋನಿಯಾ ಗಾಂಧಿ ED ವಿಚಾರಣೆ ಮುಕ್ತಾಯ..‌ 3 ದಿನಗಳಲ್ಲಿ 100 ಕ್ಕೂ ಹೆಚ್ಚು ಸವಾಲು


ಈ ಬಗ್ಗೆ ದೂರು ಪಡೆದ ನಂತರ ಮಧ್ಯಪ್ರದೇಶ ಸರ್ಕಾರ ನಡೆಸುತ್ತಿರುವ ವಿದ್ಯುತ್ ಕಂಪನಿಯು ಸರಿಪಡಿಸಿದ ಬಿಲ್ ಅನ್ನು ನೀಡಿದೆ. ಅದರಲ್ಲಿ ಅವರ ಮನೆಯ ವಿದ್ಯುತ್‌ ಬಿಲ್‌ 1,300 ರೂಪಾಯಿ ಬಂದಿದೆ. ಗ್ವಾಲಿಯರ್ ನಗರದ ಶಿವ ವಿಹಾರ್ ಕಾಲೋನಿಯ ಗುಪ್ತಾ ಕುಟುಂಬದ ಮನೆಗೆ ಈ ರೀತಿ ವಿದ್ಯುತ್‌ ಬಿಲ್‌ ಶಾಕ್‌ ನೀಡಿದೆ.


ಜುಲೈ 20 ರಂದು ಬಂದ ಬಿಲ್ ಅನ್ನು ಮಧ್ಯಪ್ರದೇಶ ಮಧ್ಯ ಕ್ಷೇತ್ರ ವಿದ್ಯುತ್ ವಿತರಣ ಕಂಪನಿಯ (MPMKVVC) ಪೋರ್ಟಲ್ ಮೂಲಕ ಪರಿಶೀಲಿಸಿದರು. ಆದರೆ ಆಗ ಅದು ಸರಿಯಾಗಿದೆ ಎಂದು ಅವರು ಹೇಳಿದರು.  


ನಂತರ ರಾಜ್ಯ ವಿದ್ಯುತ್ ಕಂಪನಿಗೆ ದೂರು ನೀಡಿದಾಗ, ಬಿಲ್ ಸರಿಪಡಿಸಲಾಯಿತು ಎಂದು ಕಂಕಣೆ ಹೇಳಿದರು. ಎಂಪಿಎಂಕೆವಿವಿಸಿ ಜನರಲ್ ಮ್ಯಾನೇಜರ್ ನಿತಿನ್ ಮಾಂಗ್ಲಿಕ್, ದೋಷದಿಂದ ಈ ಭಾರಿ ವಿದ್ಯುತ್ ಬಿಲ್ ಬರಲು ಕಾರಣವಾಗಿದ್ದು, ಸಂಬಂಧಪಟ್ಟ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಒಬ್ಬ ನೌಕರನು ಸಾಫ್ಟ್‌ವೇರ್‌ನಲ್ಲಿ units consumed ಬದಲಿಗೆ consumer number ಅನ್ನು ನಮೂದಿಸಿದ್ದಾರೆ. ಇದೇ ಕಾರಣಕ್ಕೆ ಇಷ್ಟೊಂದು ದೊಡ್ಡ ಮೊತ್ತದ ವಿದ್ಯುತ್ ಬಿಲ್‌ ಬಂದಿದೆ. ಗ್ರಾಹಕರಿಗೆ 1,300 ರೂ.ಗಳ ತಿದ್ದುಪಡಿ ಬಿಲ್ ನೀಡಲಾಗಿದೆ ಎಂದು ಹೇಳಿದರು.


ಇದನ್ನೂ ಓದಿ: ತಲೆನೋವನ್ನು ಕ್ಷಣಾರ್ಧದಲ್ಲೇ ಶಮನ ಮಾಡುತ್ತೆ ಈ ಮನೆಮದ್ದು


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.