ವಾಸೀಂ: ಆಸ್ತಿಗಾಗಿ ಜನ ಏನೆಲ್ಲಾ ಮಾಡ್ತಾರೆ ಆಲ್ವಾ. ಅಂತಹುದೇ ಒಂದು ಅಮಾನವೀಯ ಘಟನೆ ಮಹಾರಾಷ್ಟ್ರದ ವಾಸೀಂ ಜಿಲ್ಲೆಯಲ್ಲಿ ನಡೆದಿದೆ. ತನಗೆ ಬರಬೇಕಿದ್ದ ಆಸ್ತಿ ಮತ್ತೊಬ್ಬನ ಪಾಲಾಗಿದ್ದರಿಂದ, ಆತ ಭೂಮಿ ಉಳಲು ಬಂದಾಗ ಅದನ್ನು ತಡೆಯಲು ಆತ ತನ್ನ ಹೆತ್ತ ತಾಯಿಯನ್ನೇ ಟ್ರ್ಯಾಕ್ಟರ್ ಕೆಳಗೆ ಎಸೆದಿದ್ದಾನೆ!


COMMERCIAL BREAK
SCROLL TO CONTINUE READING

ಭೂ ವಿವಾದ ಹಿನ್ನೆಲೆಯಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ಆತ ಕೇಸ್ ಗೆದ್ದಿದ ಎನ್ನಲಾಗಿದೆ. ಹೀಗಾಗಿ ಭೂಮಿ ಉಳಲು ಜೂನ್‌ 21ರಂದು ಟ್ರ್ಯಾಕ್ಟರ್ ತೆಗೆದುಕೊಂಡು ಬಂದಿದ್ದ. ಆದರೆ ಇದನ್ನು ಸಹಿಸದ ಪಾಪಿ ಮಗ, ತನ್ನ ವಿರೋಧಿ ಉಳುಮೆ ಮಾಡುವುದನ್ನು ತಡೆಯಲು ಟ್ರ್ಯಾಕ್ಟರ್‌ ಚಕ್ರದಡಿ ತನ್ನ ತಾಯಿಯನ್ನು ಎಸೆದಿದ್ದಾನೆ.    


ಈ ಘಟನೆ ಸಂಬಂಧ 15 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಓರ್ವ ಆರೋಪಿಯನ್ನು ಮೆಲೆಂಗಾನ್ ಪೊಲೀಸರು ಬಂಧಿಸಿದ್ದಾರೆ. "ಭೂ ವಿವಾದದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಗಲಭೆ ನಡೆದಿದೆ. ಈ ಸಂಬಂಧ ಎಫ್ಐಆರ್ ದಾಖಲಿಸಲಾಗಿದೆ. ಓರ್ವನನ್ನು ಬಂಧಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ" ಎಂದು ಹಿರಿಯ ಪೋಲಿಸ್ ನಿರೀಕ್ಷಕ ಸುರೇಶ ನಾಯ್ಕ್ನವಾರೆ ತಿಳಿಸಿದ್ದಾರೆ.