ಬಿಹಾರ: ಬಾಂಧವ್ಯವನ್ನು ಗಟ್ಟಿಗೊಳಿಸುವ ರಕ್ಷಾ ಬಂಧನ(Raksha Bandhan) ಹಬ್ಬ ಅಣ್ಣ-ತಂಗಿಯರ ಮಧುರ ಸಂಬಂಧಕ್ಕೆ ಸಾಕ್ಷಿಯಾಗಿದೆ. ಈ ಹಬ್ಬದಲ್ಲಿ ಸಹೋದರಿ ತನ್ನ ಸಹೋದರನ ಮಣಿಕಟ್ಟಿನ ಮೇಲೆ ರಾಖಿ ಕಟ್ಟುತ್ತಾಳೆ. ಆದರೆ ವಿಲಕ್ಷಣ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ನಾಗರಹಾವಿಗೆ ರಾಖಿ ಕಟ್ಟಲು ಹೋಗಿ ಅದರಿಂದ ಕಚ್ಚಿಕೊಂಡು ಸಾವನ್ನಪ್ಪಿದ್ದಾನೆ.


COMMERCIAL BREAK
SCROLL TO CONTINUE READING

ಇದಕ್ಕೆ ಹುಚ್ಚುತನದ ಪರಮಾವಧಿ ಅನ್ನೋಬೇಕೋ ಏನನ್ನಬೇಕೋ ನೀವೇ ಯೋಚಿಸಿ. ಯಾರಾದರೂ ಹಾವಿಗೆ ರಾಖಿ ಕಟ್ಟುತ್ತಾರಾ...? ಈ ವಿಚಿತ್ರ ಘಟನೆಗೆ ಸಾಕ್ಷಿಯಾಗಿದ್ದು ಬಿಹಾರ(Bihar)ದ ಸರನ್ ಗ್ರಾಮ. ಮನಮೋಹನ್ ಎಂಬ ವ್ಯಕ್ತಿ ಜೋಡಿ ಹಾವುಗಳಿಗೆ ರಾಖಿ ಕಟ್ಟಲು ಹೋಗಿ ಅವುಗಳಿಂದ ಕಚ್ಚಿಸಿಕೊಂಡು ಪ್ರಾಣಬಿಟ್ಟಿದ್ದಾನೆ. ಮೊಬೈಲ್ ನಲ್ಲಿ ಸೆರೆಹಿಡಿಯಲಾಗಿರುವ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗಿದೆ.


ಇದನ್ನೂ ಓದಿ: Good News: 30 ಸಾವಿರ ಮಾಸಿಕ ವೇತನ ಪಡೆವ ನೌಕರರಿಗೂ ಸಿಗಲಿದೆಯಾ ಯೋಜನೆಯ ಲಾಭ?


25 ವರ್ಷದ ವ್ಯಕ್ತಿ ಮನಮೋಹನ್ ಜೋಡಿ ಹಾವು(Snake)ಗಳನ್ನು ಕೈಯಲ್ಲಿಯೇ ಹಿಡಿದುಕೊಂಡು ಅವುಗಳಿಗೆ ರಾಖಿ ಕಟ್ಟುವಂತೆ ತನ್ನ ಸಹೋದರಿಗೆ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಜೋಡಿ ನಾಗರಹಾವುಗಳನ್ನು ಕೈಯಲ್ಲಿ ಹಿಡಿದುಕೊಂಡು ಅವುಗಳಿಗೆ ಮೊದಲು ಕುಂಕುಮ ಸೇರಿದಂತೆ ಪೂಜಾ ವಿಧಿ-ವಿಧಾನ ನರವೇರಿಸುತ್ತಾನೆ. ಅವುಗಳಿಗೆ ರಾಖಿ ಕಟ್ಟುವಂತೆ ಸಹೋದರಿಗೆ ಹೇಳುವಾಗ ಒಂದು ಹಾವು ಆಕಸ್ಮಿಕವಾಗಿ ಮನಮೋಹನ್ ಕಾಲಿಗೆ ಕಚ್ಚಿಬಿಟ್ಟಿದೆ. ಆದರೆ ಆತ ತನೆಗೆ ಏನೂ ಆಗಿಲ್ಲವೆಂಬಂತೆ ಹಾವುಗಳನ್ನು ಹಿಡಿದುಕೊಂಡೇ ಓಡಾಡಿದ್ದಾನೆ. ಹಾವು ಕಚ್ಚಿರುವುದನ್ನು ನೋಡಿ ಸ್ಥಳದಲ್ಲಿದ್ದ ಅನೇಕರು ಹೌಹಾರಿ ಕೂಗಿಕೊಂಡಿದ್ದಾರೆ. ಹಾವುಗಳ ಮೋಹಿಯಾಗಿದ್ದ ಮನಮೋಹನ್ ಅವುಗಳಿಗೆ ರಾಖಿ ಕಟ್ಟಲು ಹೋಗಿ ಕಚ್ಚಿಸಿಕೊಂಡಿದ್ದಾನೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಯಿತಾದರೂ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು.


7th Pay Commission : ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ : ಪ್ರತಿ ತಿಂಗಳು ಸಂಬಳದಲ್ಲಿ 4500 ರೂ. ಹೆಚ್ಚಳ!


ನಾಗರಹಾವುಗಳಿಗೆ ರಾಖಿ ಕಟ್ಟಲು ಹೋಗಿ ಕಚ್ಚಿಸಿಕೊಂಡು(Snake Bite) ಸಾವನ್ನಪ್ಪಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮನಮೋಹನ್ ಮೂರ್ಖತನಕ್ಕೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಮೃತ ಮನಮೋಹನ್ ಹಾವುಗಳನ್ನು ಹಿಡಿದು ರಕ್ಷಿಸುತ್ತಿದ್ದನಂತೆ. ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಹಾವು ಹಿಡಿದು ಅವುಗಳ ಗಾಯಕ್ಕೆ ಚಿಕಿತ್ಸೆ ನೀಡುತ್ತಿದ್ದನಂತೆ. ಅಲ್ಲದೆ ತನ್ನ ಹಳ್ಳಿಯಲ್ಲಿ ಯಾರಿಗಾದರೂ ಹಾವು ಕಚ್ಚಿದರೆ ಅವರಿಗೆ ಚಿಕಿತ್ಸೆ ನೀಡುತ್ತದ್ದನಂತೆ. ಆದರೆ ಆತನೇ ಈಗ ಹಾವು ಕಚ್ಚಿಸಿಕೊಂಡು ಸಾವನ್ನಪ್ಪಿದ್ದಾನೆ.    


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ