Good News: 30 ಸಾವಿರ ಮಾಸಿಕ ವೇತನ ಪಡೆವ ನೌಕರರಿಗೂ ಸಿಗಲಿದೆಯಾ ಯೋಜನೆಯ ಲಾಭ?

Good News: ರಾಜ್ಯ ಉದ್ಯೋಗಿಗಳ ವಿಮಾ ನಿಗಮ (ESIC), ತನ್ನ ವೈದ್ಯಕೀಯ ಯೋಜನೆಯ ವ್ಯಾಪ್ತಿಯನ್ನು ರೂ. 30,000 ವೇತನಕ್ಕೆ ಹೆಚ್ಚಿಸಲು ಸಿದ್ಧತೆ ನಡೆಸುತ್ತಿದೆ. ಪ್ರಸ್ತುತ, ರೂ. 21 ಸಾವಿರ ವೇತನ ಪಡೆಯುವ ಉದ್ಯೋಗಿಗಳು ಮಾತ್ರ ಇದರ ಅಡಿ ಬರುತ್ತಾರೆ. 

Written by - Nitin Tabib | Last Updated : Aug 24, 2021, 10:45 AM IST
  • ESICತನ್ನ ವೈದ್ಯಕೀಯ ಯೋಜನೆಯ ವ್ಯಾಪ್ತಿಯನ್ನು ರೂ. 30,000 ವೇತನಕ್ಕೆ ಹೆಚ್ಚಿಸಲು ಸಿದ್ಧತೆ ನಡೆಸುತ್ತಿದೆ.
  • ಪ್ರಸ್ತುತ, ರೂ. 21 ಸಾವಿರ ವೇತನ ಪಡೆಯುವ ಉದ್ಯೋಗಿಗಳು ಮಾತ್ರ ಇದರ ಅಡಿ ಬರುತ್ತಾರೆ.
  • ಹೊಸ ಪ್ರಸ್ತಾವನೆಯನ್ನು ESIC ಮಂಡಳಿ ಸಭೆಯಲ್ಲಿ ತರಲಾಗುವುದು ಎನ್ನಲಾಗಿದೆ.
Good News: 30 ಸಾವಿರ ಮಾಸಿಕ ವೇತನ ಪಡೆವ ನೌಕರರಿಗೂ ಸಿಗಲಿದೆಯಾ ಯೋಜನೆಯ ಲಾಭ? title=
ESIC Good News

Good News: ರಾಜ್ಯ ಉದ್ಯೋಗಿಗಳ ವಿಮಾ ನಿಗಮ (ESIC), ತನ್ನ ವೈದ್ಯಕೀಯ ಯೋಜನೆಯ ವ್ಯಾಪ್ತಿಯನ್ನು ರೂ. 30,000 ವೇತನಕ್ಕೆ ಹೆಚ್ಚಿಸಲು ಸಿದ್ಧತೆ ನಡೆಸುತ್ತಿದೆ. ಪ್ರಸ್ತುತ, ರೂ. 21 ಸಾವಿರ ವೇತನ ಪಡೆಯುವ ಉದ್ಯೋಗಿಗಳು ಮಾತ್ರ ಇದರ ಅಡಿ ಬರುತ್ತಾರೆ. ಹೊಸ ಪ್ರಸ್ತಾವನೆಯನ್ನು  ESIC ಮಂಡಳಿ ಸಭೆಯಲ್ಲಿ ತರಲಾಗುವುದು ಎನ್ನಲಾಗಿದೆ. ಸಭೆಯಲ್ಲಿ ಅನುಮೋದನೆಯ ನಂತರ, ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು.

ಈ ಕುರಿತು ಹೇಳಿಕೆ ನೀಡಿರುವ ESIC Board ಸದಸ್ಯರೊಬ್ಬರು, ಈಗಾಗಲೇ ಮಂಡಳಿಯ ಸದಸ್ಯರು ಸೀಲಿಂಗ್ ಹೆಚ್ಚಿಸುವ ಕುರಿತಾದ ಪ್ರಸ್ತಾವನೆಯನ್ನು ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ಕಳುಹಿಸಿದ್ದಾರೆ ಎಂದಿದ್ದಾರೆ. ESIC ವೈದ್ಯಕೀಯ ಯೋಜನೆಯಿಂದ ಕೊರೊನಾ ಕಾಲದಲ್ಲಿ ನೌಕರರಿಗೆ ವಿಶೇಷ ಲಾಭ ದೊರೆತಿದೆ. ಪ್ರಸ್ತುತ ಇರುವ ವೇತನ ಸೀಲಿಂಗ್ ಅನ್ನು ಹೆಚ್ಚಿಸುವ ಮೂಲಕ ದೇಶಾದ್ಯಂತ ಮತ್ತೆ ಶೇ.20 ರಿಂದ ಶೇ.25ರಷ್ಟು ನೌಕರರು ಈ ಯೋಜನೆಯ ವ್ಯಾಪಿಗೆ (ESIC Coverage) ಸೇರಲಿದ್ದಾರೆ.  ಸೆಪ್ಟೆಂಬರ್‌ನಲ್ಲಿ ಇಎಸ್‌ಐಸಿ ಮಂಡಳಿಯ ಸಭೆ ನಡೆಯುವ ನಿರೀಕ್ಷೆ ಇದೆ. ಇದರಲ್ಲಿ ಪ್ರಸ್ತಾವನೆಯನ್ನು ಮಂಡಿಸಲಾಗುವುದು. ವೇತನದ ಮಿತಿಯಲ್ಲಿ ಹೆಚ್ಚಳದೊಂದಿಗೆ, ESIC ನ ನಿಧಿಯು ಹೆಚ್ಚಾಗುತ್ತದೆ. ಇದರೊಂದಿಗೆ, ಉದ್ಯೋಗಿಗಳು ಮತ್ತು ಅವರ ಕುಟುಂಬಗಳು ಕೂಡ ಉತ್ತಮ ಚಿಕಿತ್ಸೆ ಪಡೆಯಲಿವೆ.

ಮಂಡಳಿಯ ಸದಸ್ಯರ ಪ್ರಕಾರ, ಪ್ರಸ್ತುತ ಇಎಸ್‌ಐಸಿ ಯೋಜನೆಯ ಸದಸ್ಯರ ವೇತನದಿಂದ ಶೇ. 0.75 ಶೇಕಡಾ ಮತ್ತು ಉದ್ಯೋಗದಾತರಿಂದ ಶೇ.3.25  ಕೊಡುಗೆಯನ್ನು ಪಡೆಯಲಾಗುತ್ತದೆ. ಮೊದಲು ಈ ಕೊಡುಗೆ ಶೇ.6.5%ರಷ್ಟಿತ್ತು. ಇದರ ವ್ಯಾಪ್ತಿಯಲ್ಲಿ ದೇಶದ 6 ಕೋಟಿ ಉದ್ಯೋಗಿಗಳು ಬರುತ್ತಾರೆ. ಕೇವಲ ಉತ್ತರ ಪ್ರದೇಶ ಒಂದರಲ್ಲೇ  22 ಲಕ್ಷ ಕಾರ್ಮಿಕರು ಇಎಸ್ಐಸಿ ವೈದ್ಯಕೀಯ ಯೋಜನೆಯ ಲಾಭ ಪಡೆಯುತ್ತಿದ್ದಾರೆ.

ESIC ಯೋಜನೆಯ ಅಡಿ ಸಿಗುವ ಲಾಭಗಳು
ಪ್ರಸ್ತುತ, ESIC ವಿಮಾ ವ್ಯಾಪ್ತಿಗೆ ಬರುವ ನೌಕರನ ಸಾವು ಅಥವಾ ದೈಹಿಕ ಅಂಗವೈಕಲ್ಯತೆ ಸಂಭವಿಸಿದ ಸಂದರ್ಭದಲ್ಲಿ, ಅವನ/ಅವಳ ಸಂಗಾತಿ ಮತ್ತು ವಿಧವೆ/ತಾಯಿಗೆ ಜೀವನ ಪೂರ್ತಿ ಮತ್ತು 25 ವರ್ಷ ವಯಸ್ಸಿನ ಮಕ್ಕಳಿಗೆ ಪಿಂಚಣಿ ನೀಡಲಾಗುತ್ತದೆ, ಇದು ಸರಾಸರಿ ದೈನಂದಿನ ವೇತನದ ಶೇ.90ಕ್ಕೆ ಸಮನಾಗಿರುತ್ತದೆ. ಆ ಉದ್ಯೋಗಿಗೆ ಮಗಳಿದ್ದಾರೆ, ಆಕೆ ಮದುವೆಯಾಗುವವರೆಗೂ ಈ ಪ್ರಯೋಜನವನ್ನು ನೀಡಲಾಗುತ್ತದೆ.

ESIC ಯೋಜನೆಯ ಅಡಿ ಲಾಭ ಪಡೆದ ವ್ಯಕ್ತಿ ಅಥವಾ ಆ ವ್ಯಕ್ತಿಯ ಕುಟುಂಬದ ಎಲ್ಲ ಆಶ್ರಿತರು, ಕೊವಿಡ್ ಪತ್ತೆಗೂ ಮುನ್ನ ಅಥವಾ ಪತ್ತೆಯಾದ ಬಳಿಕ ಸಾವು ಸಂಭವಿಸಿದವರು ಮತ್ತು  ESICಯ ಆನ್ಲೈನ್ ಪೋರ್ಟಲ್ ನಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿದವರೂ ಕೂಡ ಈ ಯೋಜನೆಯ ಲಾಭ ಪಡೆಯಬಹುದು. ಅವರು ಈ ಲಾಭವನ್ನು ವಿಮಾ ಪಡೆದ ವ್ಯಕ್ತಿಗೆ ಸಮನಾಗಿ ಪಡೆಯಬಹುದು. ಆದರೆ ಇದಕ್ಕಾಗಿ ಎರಡು ಷರತ್ತುಗಳನ್ನು ಪೂರೈಸಬೇಕು.

ಮೊದಲನೆಯದಾಗಿ ESIC ಆನ್ಲೈನ್ ಪೋರ್ಟಲ್ ನಲ್ಲಿ ಕೊವಿಡ್ ರೋಗದ ಪರಿಹಾರ ಹಾಗೂ ಅದರಿಂದ ಸಂಭವಿಸಿದ ಸಾವಿನ ಕನಿಷ್ಠ ಮೂರು ತಿಂಗಳು ಮೊದಲು ಹೆಸರು ನೊಂದಣಿಯಾಗಿರಬೇಕು. ಎರಡನೆಯದಾಗಿ ವಿಮಾ ಪಡೆದ ವ್ಯಕ್ತಿ ನಿಶ್ಚಿತವಾಗಿ ವೇತನಕ್ಕಾಗಿ ನಿಯೋಜನೆಗೊಂಡಿರಬೇಕು ಹಾಗೂ ಮೃತ ವಿಮಾ ಪಡೆದ ವ್ಯಕ್ತಿಯ ಸಂದರ್ಭದಲ್ಲಿ ಕೊವಿಡ್ ರೋಗದ ಪತ್ತೆ ಮತ್ತು ಅದರಿಂದ ಅವನ ಸಾವು ಸಂಭವಿಸುವ ಮೊದಲು ಒಂದು ವರ್ಷದಲ್ಲಿ ಆತ 78 ದಿನಗಳ ಕೊಡುಗೆಯನ್ನು ನೀಡಿರಬೇಕು.

ಇದನ್ನೂ ಓದಿ-National Monetisation Pipeline: ರಾಷ್ಟ್ರೀಯ ಹಣಗಳಿಕೆ ಪೈಪ್ಲೈನ್ ಬಿಡುಗಡೆಗೊಳಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಏನಿದು NMP?

ಗ್ರ್ಯಾಚುಟಿಗಾಗಿ ಕನಿಷ್ಠ ಸೇವೆಯ ಅವಶ್ಯಕತೆ ಇಲ್ಲ 
ಪ್ರಸ್ತುತ ಈ ಯೋಜನೆಯಡಿ, ಉದ್ಯೋಗಿಯ ಸಾವಿನ ಸಂದರ್ಭದಲ್ಲಿ ನೀಡಲಾದ ಪ್ರಯೋಜನಗಳನ್ನು ವಿಸ್ತರಿಸಲಾಗಿದೆ, ಇನ್ನು ಮುಂದೆ ಗ್ರಾಚ್ಯುಟಿ ಪಾವತಿಗೆ ಕನಿಷ್ಠ ಸೇವೆಯ ಅಗತ್ಯವಿಲ್ಲ, ಇಪಿಎಫ್ ಮತ್ತು ಎಂಪಿ ಕಾಯ್ದೆಯ ನಿಬಂಧನೆಗಳ ಪ್ರಕಾರ ಕುಟುಂಬ ಪಿಂಚಣಿ ನೀಡಲಾಗುತ್ತಿದೆ. ನೌಕರರು ಅನಾರೋಗ್ಯಕ್ಕೆ ಒಳಗಾಗಿ ಕೆಲಸಕ್ಕೆ ಬಾರದೆ ಇದ್ದ ಸ್ಥಿತಿಯಲ್ಲಿ ವರ್ಷದಲ್ಲಿ 91 ದಿನಗಳಿಗಾಗಿ ಕಾಯಿಲೆಯ ಲಾಭದ ರೂಪದಲ್ಲಿ ಆತನ ವೇತನದ ಶೇ.70 ರಷ್ಟು ಹಣವನ್ನು ಪಾವತಿಸಲಾಗುತ್ತದೆ.

ಇದನ್ನೂ ಓದಿ- Pan-Aadhaar Link: ಇದು ಕೊನೆಯ ಅವಕಾಶ , ಆಧಾರ್ ಗೆ ಸಂಬಂಧಿಸಿದ ಈ ಕೆಲಸ ಮಾಡದೆ ಹೋದರೆ ಕಟ್ಟಬೇಕು 10 ಸಾವಿರ ರೂ ದಂಡ

ಮೃತ ನೌಕರರ ಕುಟುಂಬ ಸದಸ್ಯರಿಗೆ ಸಿಗುವ ಗರಿಷ್ಟ ಲಾಭದ ಮೊತ್ತವನ್ನು ಇದೀಗ 6 ಲಕ್ಷದಿಂದ 7 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಮೃತ ನೌಕರರ ಕುಟುಂಬ ಸದಸ್ಯರಿಗೆ ಕನಿಸ್ಥ 2.5 ಲಕ್ಷ ರೂ. ಲಾಭ ನೀಡಲಾಗುತ್ತದೆ.ಪ್ರಸ್ತುತಇರುವ ಪ್ರಸ್ತಾವನೆಯ ಪ್ರಕಾರ ಒಂದು ಸಂಸ್ಥೆಯಲ್ಲಿ 12 ತಿಂಗಳ ಸತತ ಸೇವೆಯ ಅನಿವಾರ್ಯತೆ ಇದೆ.

ಇದನ್ನೂ ಓದಿ-RBI New Rule For Online Shopping:ನೀವೂ ಆನ್ಲೈನ್ ಶಾಪಿಂಗ್ ಮಾಡುತ್ತೀರಾ? RBI ಜಾರಿಗೊಳಿಸುತ್ತಿರುವ ಈ ಹೊಸ ನಿಯಮ ನಿಮಗೂ ಗೊತ್ತಿರಲಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News