ದುರ್ಗಾ ದೇಗುಲದಲ್ಲಿ ʼಮೂತ್ರ ವಿಸರ್ಜನೆʼ ಮಾಡಿದ ವ್ಯಕ್ತಿ : ಭಕ್ತರಿಂದ ಥಳಿತ, ಆರೋಪಿಯ ಬಂಧನ
ಮೊಹಿನುದ್ದೀನ್ ಚಪ್ಪಲಿ ತೆಗೆಯದೇ ಮಾತೆ ದುರ್ಗಾ ದೇವಿಯ ದೇಗುಲ ಪ್ರವೇಶಿಸಿ, ದೇವಾಲಯದ ಆವರಣದೊಳಗೆ ಹೋಗಿ ಮಾತೆ ದುರ್ಗೆಯ ವಿಗ್ರಹದತ್ತ ಹೊರಟಿದ್ದ. ಇದನ್ನು ನೋಡಿದ ದೇವಾಲಯದ ಅರ್ಚಕರು ಆತನನ್ನು ಗುರುತಿಸಿ ಎಚ್ಚರಿಕೆ ನೀಡಿದರು.
ಬಿಹಾರ : ನಗರದ ಮುಜಾಫರ್‌ಪುರದ ಕಲ್ಯಾಣಿ ಚೌಕ್‌ನಲ್ಲಿರುವ ಮಾ ದುರ್ಗಾ ದೇವಸ್ಥಾನದೊಳಗೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಬಿಹಾರ್ ನಗರದ ದಿವಾನ್ ರಸ್ತೆಯ ನಿವಾಸಿ ಮೊಯಿನುದ್ದೀನ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಹಿನುದ್ದೀನ್ ಚಪ್ಪಲಿ ತೆಗೆಯದೇ ಮಾತೆ ದುರ್ಗಾ ದೇವಿಯ ದೇಗುಲ ಪ್ರವೇಶಿಸಿ, ದೇವಾಲಯದ ಆವರಣದೊಳಗೆ ಹೋಗಿ ಮಾತೆ ದುರ್ಗೆಯ ವಿಗ್ರಹದತ್ತ ಹೊರಟಿದ್ದ. ಇದನ್ನು ನೋಡಿದ ದೇವಾಲಯದ ಅರ್ಚಕರು ಆತನನ್ನು ಗುರುತಿಸಿ ಎಚ್ಚರಿಕೆ ನೀಡಿದರು. ಆದರೆ, ಆ ವೇಳೆಗಾಗಲೇ ದೇವಸ್ಥಾನದ ಇನ್ನೊಂದು ಬದಿಗೆ ತೆರಳಿ ಶನಿವಾರ ಸಂಜೆ ಮೂತ್ರ ವಿಸರ್ಜನೆ ಮಾಡಿದ್ದನು. ಇದರಿಂದ ರೊಚ್ಚಿಗೆದ್ದ ಭಕ್ತರು ದೇವಸ್ಥಾನದ ಒಳಗಡೆ ಆರೋಪಿಯನ್ನು ಥಳಿಸಿದ್ದಾರೆ.
ಇದನ್ನೂ ಓದಿ: Maharashtra Political Crisis: 15-20 ದಿನಗಳಲ್ಲಿ ಶಿಂಧೆ ಸರ್ಕಾರ ಪತನ! ಶಿವಸೇನೆಯ ಹಿರಿಯ ನಾಯಕ
ಸುದ್ದಿ ನಗರದಾದ್ಯಂತ ಕಾಳ್ಗಿಚ್ಚಿನಂತೆ ಹರಡಿದ್ದು, ಕೂಡಲೇ ಟೌನ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಿದ್ದೇವೆ. ಆರೋಪಿ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದ ಆರೋಪವನ್ನು ಎದುರಿಸುತ್ತಿದ್ದಾರೆ. ಅವನು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಮುಜಾಫರ್‌ಪುರ ಪೊಲೀಸ್ ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ಮುಂಜಾಗೃತ ಕ್ರಮವಾಗಿ ದೇವಾಲಯದ ಆವರಣದ ಸುತ್ತಲೂ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಿದ್ದೇವೆ. ಮೀಸಲು ಬೆಟಾಲಿಯನ್‌ಗಳನ್ನು ಸ್ಟ್ಯಾಂಡ್‌ಬೈನಲ್ಲಿರಲು ಕೇಳಿದ್ದೇವೆ. ಗುಪ್ತಚರ ಅಧಿಕಾರಿಗಳು ಸಹ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಸಾಧ್ಯವಾದಷ್ಟು ಬೇಗ ಮಾಹಿತಿ ತಿಳಿಸಲು ಕೇಳಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಈ ನಡುವೆ ಆರೋಪಿಯ ಪೋಷಕರು ಠಾಣೆಗೆ ಬಂದು ಆತ ಮಾನಸಿಕ ಅಸ್ವಸ್ಥ ಎಂದು ಹೇಳಿಕೊಂಡಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ