Maharashtra Political Crisis: 15-20 ದಿನಗಳಲ್ಲಿ ಶಿಂಧೆ ಸರ್ಕಾರ ಪತನ! ಶಿವಸೇನೆಯ ಹಿರಿಯ ನಾಯಕ

ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾ: ಮುಂದಿನ 15-20 ದಿನಗಳಲ್ಲಿ ಮಹಾರಾಷ್ಟ್ರದ ಶಿಂಧೆ ಸರ್ಕಾರ ಪತನವಾಗಲಿದೆ ಎಂದು ಶಿವಸೇನೆಯ ಉದ್ಧವ್ ಬಣದ ಪ್ರಮುಖ ನಾಯಕರೊಬ್ಬರು ಹೇಳಿದ್ದಾರೆ. ಯಾವ ಆಧಾರದಲ್ಲಿ ಅವರು ಈ ದೊಡ್ಡ ಹೇಳಿಕೆ ನೀಡಿದ್ದಾರೆ ಎಂದು ತಿಳಿಯಿರಿ.

Written by - Puttaraj K Alur | Last Updated : Apr 23, 2023, 05:01 PM IST
  • ಮುಂದಿನ 15-20 ದಿನಗಳಲ್ಲಿ ಮಹಾರಾಷ್ಟ್ರದ ಏಕನಾಥ್ ಶಿಂಧೆ ಸರ್ಕಾರ ಪತನವಾಗಲಿದೆ
  • ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ‘ಡೆತ್ ವಾರಂಟ್’ ಹೊರಡಿಸಲಾಗಿದೆ
  • ಶಾಕಿಂಗ್ ಹೇಳಿಕೆ ನೀಡಿ ಸಂಚಲನ ಮೂಡಿಸಿರುವ ಶಿವಸೇನೆ ನಾಯಕ ಸಂಜಯ್ ರಾವುತ್
Maharashtra Political Crisis: 15-20 ದಿನಗಳಲ್ಲಿ ಶಿಂಧೆ ಸರ್ಕಾರ ಪತನ! ಶಿವಸೇನೆಯ ಹಿರಿಯ ನಾಯಕ  title=
ಏಕನಾಥ್ ಶಿಂಧೆ ಸರ್ಕಾರ ಪತನ?

ನವದೆಹಲಿ: ಮಹಾರಾಷ್ಟ್ರದ ಏಕನಾಥ್ ಶಿಂಧೆ ಸರ್ಕಾರದ ಬಗ್ಗೆ ಶಿವಸೇನೆ ನಾಯಕ ಸಂಜಯ್ ರಾವುತ್ ದೊಡ್ಡ ಹೇಳಿಕೆ ನೀಡಿದ್ದಾರೆ. ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ‘ಡೆತ್ ವಾರಂಟ್’ ಹೊರಡಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇನ್ನು 15-20 ದಿನಗಳಲ್ಲಿ ಮಹಾರಾಷ್ಟ್ರದ ಶಿಂಧೆ ಸರ್ಕಾರ ಪತನವಾಗಲಿದೆ ಎಂಬ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಗುಂಪಿನ ಹಿರಿಯ ನಾಯಕ ಸಂಜಯ್ ರಾವುತ್, ತಮ್ಮ ಪಕ್ಷವು ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತಿದೆ. ನಮಗೆ ನ್ಯಾಯ ಸಿಗುತ್ತದೆ ಅನ್ನೋ ಆಶಯವಿದೆ ಎಂದು ಹೇಳಿರುವ ಸಂಜಯ್ ರಾವತ್, ಏಕನಾಥ್ ಶಿಂಧೆ ಸರ್ಕಾರದ ವಿರುದ್ಧ ಕಟು ವಾಗ್ದಾಳಿ ನಡೆಸಿದ್ದಾರೆ. ಈ ಬಾರಿ ಮಹಾರಾಷ್ಟ್ರ ಸರ್ಕಾರದ ಕೌಂಟ್ ಡೌನ್ ಶುರುವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ: ಬಸ್‌ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವು, 18 ಮಂದಿಗೆ ಗಾಯ 

ಸಂಚಲನ ಸೃಷ್ಟಿಸಿದ ಸಂಜಯ್ ರಾವತ್ ಹೇಳಿಕೆ

ರಾಜ್ಯಸಭಾ ಸಂಸದ ಸಂಜಯ್ ರಾವತ್ ಅವರು ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಅರ್ಜಿಗಳನ್ನು ಉಲ್ಲೇಖಿಸಿ ಈ ಹೇಳಿಕೆ ನಿಡಿದ್ದಾರೆ. ಈ ಅರ್ಜಿಯಲ್ಲಿ ಶಿವಸೇನೆಯ (ಶಿಂಧೆ ಬಣ) 16 ಶಾಸಕರನ್ನು ಅನರ್ಹಗೊಳಿಸುವಂತೆ ಮನವಿ ಮಾಡಲಾಗಿದೆ. ಈ ಶಾಸಕರು ಉದ್ಧವ್ ಠಾಕ್ರೆ ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದರು. ಈ ಶಾಸಕರ ಸದಸ್ಯತ್ವ ರದ್ದಾಗಲಿದೆ ಎಂದು ಉದ್ಧವ್ ಗುಂಪು ಆಶಿಸಿದೆ.

ಶಿಂಧೆ ಸರ್ಕಾರ ಬೀಳಲಿದೆಯೇ?

ಏಕನಾಥ್ ಶಿಂಧೆ ಮತ್ತು ಅವರ 40 ಶಾಸಕರ ಸರ್ಕಾರ ಮುಂದಿನ 15-20 ದಿನಗಳಲ್ಲಿ ಪತನವಾಗಲಿದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ. ಈ ಸರ್ಕಾರದ ಡೆತ್ ವಾರಂಟ್ ಹೊರಡಿಸಲಾಗಿದೆ. ಅದಕ್ಕೆ ಯಾರು ಸಹಿ ಹಾಕುತ್ತಾರೆ ಎನ್ನುವುದನ್ನು ಈಗ ನಿರ್ಧರಿಸಬೇಕಿದೆ. ಫೆಬ್ರವರಿಯಲ್ಲಿ ಶಿಂಧೆ ಸರ್ಕಾರ ಪತನವಾಗಲಿದೆ ಎಂದು ರಾವತ್ ಈ ಹಿಂದೆ ಕೂಡ ಹೇಳಿದ್ದರು. ಆದರೆ, ಅಂತಹದ್ದೇನೂ ಆಗಲಿಲ್ಲ.

ಇದನ್ನೂ ಓದಿ: Chardham Yatra 2023: ನಾಲ್ಕು ಧಾಮಗಳ ಯಾತ್ರೆಗೆ 17 ಲಕ್ಷ ಭಕ್ತಾದಿಗಳ ಹೆಸರು ನೋಂದಣಿ, ಸಿದ್ಧತೆ ಹೇಗಿದೆ ಇಲ್ಲಿ ತಿಳಿದುಕೊಳ್ಳಿ

ಯಾರು ಸಿಎಂ ಆಗಬಹುದು?

ಇತ್ತೀಚೆಗಷ್ಟೇ ಸಂಜಯ್ ರಾವತ್ ಅವರು ಅಜಿತ್ ಪವಾರ್ ಹೇಳಿಕೆ ಬೆಂಬಲಿಸಿ ಅಚ್ಚರಿ ಮೂಡಿಸಿದ್ದರು. ಅಜಿತ್ ಪವಾರ್ ಮುಖ್ಯಮಂತ್ರಿಯಾಗುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಸಂಜಯ್ ರಾವತ್ ಹೇಳಿದ್ದರು. ಅವರು ಹಲವು ವರ್ಷಗಳಿಂದ ರಾಜಕೀಯದಲ್ಲಿದ್ದಾರೆ. ಹಲವು ಬಾರಿ ಸಚಿವರೂ ಆಗಿದ್ದಾರೆ. ಗರಿಷ್ಠ ಬಾರಿ ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ದಾಖಲೆಯೂ ಅವರ ಬಳಿ ಇದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News