Fake Covid Report: ಪತ್ನಿಯಿಂದ ದೂರವಿರಲು ನಕಲಿ ಕೊರೊನಾ ಪಾಸಿಟಿವ್ ರಿಪೋರ್ಟ್ ತೋರಿಸಿದ ಭೂಪ..!
ಪತ್ನಿಯಿಂದ ದೂರವಿರಲು ವ್ಯಕ್ತಿಯೊಬ್ಬ ನಕಲಿ ಪಾಸಿಟಿವ್ ರಿಪೋರ್ಟ್ ತೋರಿಸಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ
ಇಂದೋರ್: ಆತನಿಗೆ ಮದುವೆಯಾಗಿ ಇನ್ನೂ ಒಂದು ವರ್ಷ ಕೂಡ ಆಗಿಲ್ಲ. ಆಗಲೇ ಆತ ತನ್ನ ಪತ್ನಿಯಿಂದ ದೂರವಿರಲು ನಿರ್ಧರಿಸಿದ್ದ. ಅದಕ್ಕಾಗಿ ಆತ ಮಾಡಿದ ಉಪಾಯದ ಬಗ್ಗೆ ತಿಳಿದುಕೊಂಡರೆ ಶಾಕ್ ಆಗ್ತೀರಾ… ಹೌದು, ಪತ್ನಿಯಿಂದ ದೂರವಿರಲು ವ್ಯಕ್ತಿಯೊಬ್ಬ ನಕಲಿ ಕೋವಿಡ್(Covid-19) ಪಾಸಿಟಿವ್ ರಿಪೋರ್ಟ್ ತೋರಿಸಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
ಇದೇ ವರ್ಷದ ಫೆಬ್ರುವರಿಯಲ್ಲಿ ಮದುವೆಯಾಗಿದ್ದ 26 ವರ್ಷದ ವ್ಯಕ್ತಿಗೆ ತನ್ನ ಪತ್ನಿ ಜೊತೆ ಇರಲು ಸಾಧ್ಯವಾಗಿಲ್ಲ. ಹೀಗಾಗಿ ಆತ ನಕಲಿ ಕೊರೊನಾ(CoronaVirus) ಪಾಸಿಟಿವ್ ರಿಪೋರ್ಟ್ ತೋರಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಆಗಸ್ಟ್ ನಲ್ಲಿ ಅಪ್ಪಳಿಸಲಿದೆ ಕೊರೊನಾ 3ನೇ ಅಲೆ : ತಜ್ಞರಿಂದ ಎಚ್ಚರಿಕೆ ಸಂದೇಶ..!
ಮದುವೆಯಾಗಿದ್ದರೂ ಕೆಲವು ವೈಯಕ್ತಿಕ ಕಾರಣಗಳಿಂದ ಪತ್ನಿಯಿಂದ ದೂರವಿರಲು ನಿರ್ಧರಿಸಿದ ಇಂದೋರ್ ನ ಮೆಹೋ ನಿವಾಸಿ, ಖಾಸಗಿ ಲ್ಯಾಬರೋಟರಿಯೊಂದರ ವೆಬ್ ಸೈಟ್ ನಲ್ಲಿ ಬೇರೋಬ್ಬ ವ್ಯಕ್ತಿಯ ಕೋವಿಡ್-19 ಪಾಸಿಟಿವ್ ರಿಪೋರ್ಟ್ ಡೌನ್ ಲೋಡ್ ಮಾಡಿಕೊಂಡಿದ್ದಾನೆ. ಬಳಿಕ ಪೆನ್ಸಿಲ್ ನಿಂದ ತನ್ನ ಹೆಸರನ್ನು ತಿದ್ದುವ ಮೂಲಕ ನಕಲಿ ಕೋವಿಡ್(Covid-19) ರಿಪೋರ್ಟ್ ಅನ್ನು ತಯಾರಿಸಿದ್ದಾನೆಂದು ಚೋಟಿ ಗ್ವಾಲ್ಟೋಲಿ ಪೊಲೀಸ್ ಠಾಣೆ ಮುಖ್ಯಸ್ಥ ಸಂಜಯ್ ಶುಕ್ಲಾ ತಿಳಿಸಿದ್ದಾರೆ.
ತನಗೆ ಕೊರೊನಾ ಪಾಸಿಟಿವ್(Corona Positive) ಆಗಿದೆ ಎಂದು ನಕಲಿ ರಿಪೋರ್ಟ್ ಅನ್ನು ವಾಟ್ಸಾಪ್ ಮೂಲಕ ತನ್ನ ತಂದೆಗೆ ಹಾಗೂ ಪತ್ನಿಗೆ ಕಳುಹಿಸಿ ಮನೆಯಿಂದಲೇ ಆತ ನಾಪತ್ತೆಯಾಗಿದ್ದಾನೆ. ಈತನಿಗೆ ಕೊರೊನಾ ರೋಗದ ಯಾವುದೇ ಗುಣಲಕ್ಷಣಗಳು ಇರದಿರುವುದನ್ನು ಅರಿತ ಕುಟುಂಬಸ್ಥರು ಅನುಮಾನಗೊಂಡಿದ್ದಾರೆ. ಆತನ ರಿಪೋರ್ಟ್ ನೀಡಿರುವ ಲ್ಯಾಬರೋಟರಿಯನ್ನು ಸಂಪರ್ಕಿಸಿ ಈ ಬಗ್ಗೆ ವಿಚಾರಿಸಿದಾಗ ನಿಜಾಂಶ ಗೊತ್ತಾಗಿದೆ. ತನ್ನ ಹೆಂಡತಿಯಿಂದ ದೂರವಿರಲು ಕೋವಿಡ್ ಪಾಸಿಟಿವ್ ರಿಪೋರ್ಟ್ ತೋರಿಸಿ ನಾಟಕವಾಡಿದ್ದ ಭೂಪನ ಬಣ್ಣ ಬಯಲಾಗಿದೆ.
ಇದನ್ನೂ ಓದಿ: Covid-19: ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಮೂಳೆ ಸವೆತ, ಮುಂಬೈನಲ್ಲಿ 3 ಪ್ರಕರಣಗಳು ಪತ್ತೆ
ತಮ್ಮ ವೆಬ್ ಸೈಟ್ ನಿಂದ ಬೇರೋಬ್ಬ ವ್ಯಕ್ತಿಯ ಕೋವಿಡ್-19 ಪಾಸಿಟಿವ್ ರಿಪೋರ್ಟ್ ಡೌನ್ ಲೋಡ್ ಮಾಡಿ ಅದನ್ನು ತಿದ್ದುವ ಮೂಲಕ ನಕಲಿ ರಿಪೋರ್ಟ್(Fake Report) ತಯಾರಿಸಿದ್ದಾನೆಂದು ಲ್ಯಾಬರೋಟರಿಯವರು ಪೊಲೀಸರಿಗೆ ದೂರು ನೀಡಿದ್ದಾರೆ. ನಕಲು ಮಾಡುವುದು ಮತ್ತು ಇತರ ಅಪರಾಧಗಳ ಐಪಿಸಿಯ ವಿವಿಧ ಸೆಕ್ಸನ್ ಗಳಡಿ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ತನಿಖೆಯ ಅಗತ್ಯಕ್ಕನುಗುಣವಾಗಿ ವಿಚಾರಣೆಗೆ ಹಾಜರಾಗಬೇಕೆಂದು ಆತನಿಗೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.