Covid-19: ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಮೂಳೆ ಸವೆತ, ಮುಂಬೈನಲ್ಲಿ 3 ಪ್ರಕರಣಗಳು ಪತ್ತೆ

Avascular Necrosis: ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಅವೆಸ್ಕ್ಯುಲರ್ ನೆಕ್ರೋಸಿಸ್ (Bone Death)ನ ಕನಿಷ್ಠ ಮೂರು ಪ್ರಕರಣಗಳು ಪತ್ತೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣಗಳಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

Written by - Nitin Tabib | Last Updated : Jul 5, 2021, 12:10 PM IST
  • ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಮೂಳೆ ಸವೆತ ಕಾಯಿಲೆ ಕಂಡುಬರುತ್ತಿದೆ.
  • ಮುಂಬೈನ ಮಾಹಿಮ್ ಹಿಂದುಜಾ ಆಸ್ಪತ್ರೆಯಲ್ಲಿ 3 ಜನರು ಚಿಕಿತ್ಸೆಪಡೆಯುತ್ತಿದ್ದಾರೆ.
  • ಮುಂಬರುವ ದಿನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುವ ಆತಂಕ ವ್ಯಕ್ತಪಡಿಸಿದ ವೈದ್ಯರು.
Covid-19: ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಮೂಳೆ ಸವೆತ, ಮುಂಬೈನಲ್ಲಿ 3 ಪ್ರಕರಣಗಳು ಪತ್ತೆ title=
Avascular Necrosis (File Photo)

ಮುಂಬೈ: Avascular Necrosis - ಭಾರತದಲ್ಲಿ  ಕೊರೊನಾ ವೈರಸ್ (Coronavirus In India) ಸೋಂಕಿನಿಂದ ಚೇತರಿಸಿಕೊಂಡ ಜನರಲ್ಲಿ ಇನ್ನೂ ಅನೇಕ ಸಮಸ್ಯೆಗಳು ಕಂಡುಬರುತ್ತಿವೆ. ಇತ್ತೀಚೆಗೆ, ಮ್ಯೂಕೋರ್ಮೈಕೋಸಿಸ್ (Black Fungus)ನ ಹಲವು ಪ್ರಕರಣಗಳು ವರದಿಯಾಗಿದ್ದವು. ಇದೆ ವೇಳೆ ಅವಾಸ್ಕುಲರ್ ನೆಕ್ರೋಸಿಸ್ (Avascular Necrosis- AVN) ಅಂದರೆ ಮೂಳೆ ಸವೆತ ಅಥವಾ ಬೊನ್ ಡೆತ್ ನ ಕೆಲ ಪ್ರಕರಣಗಳು ಕಂಡುಬಂದಿವೆ. ಅವಾಸ್ಕುಲರ್ ನೆಕ್ರೋಸಿಸ್ನಲ್ಲಿ, ಮೂಳೆಗಳು ಕರಗಲು ಪ್ರಾರಂಭಿಸುತ್ತವೆ. ರಕ್ತವು ಮೂಳೆ ಅಂಗಾಂಶವನ್ನು ಸರಿಯಾಗಿ ತಲುಪದ ಕಾರಣ ಇದು ಸಂಭವಿಸುತ್ತದೆ. ಮಹಾರಾಷ್ಟ್ರದ ರಾಜಧಾನಿಯಾದ ಮುಂಬೈನಲ್ಲಿ ಕನಿಷ್ಠ ಮೂರು ಅವಾಸ್ಕುಲರ್ ನೆಕ್ರೋಸಿಸ್ ಪ್ರಕರಣಗಳು ಪತ್ತೆಯಾಗಿದ್ದು, ಮುಂದಿನ ಕೆಲವು ದಿನಗಳಲ್ಲಿ ಈ ಪ್ರಕರಣಗಳು ಮತ್ತಷ್ಟು ಹೆಚ್ಚಾಗಬಹುದು ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಕಪ್ಪು ಶಿಲೀಂಧ್ರ ಮತ್ತು ಅವಾಸ್ಕುಲರ್ ನೆಕ್ರೋಸಿಸ್ ಪ್ರಕರಣಗಳಿಗೆ ಸ್ಟೀರಾಯ್ಡ್ಗಳು ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಕೋವಿಡ್ ರೋಗಿಗಳನ್ನು ಗುಣಪಡಿಸಲು ಸ್ಟೀರಾಯ್ಡ್‌ಗಳನ್ನು ಅನೇಕ ಸಂದರ್ಭಗಳಲ್ಲಿ ಬಳಸಲಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ.

ಆಂಗ್ಲ ಮಾಧ್ಯಮದ ದಿನಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ಮುಂಬೈನ ಆಸ್ಪತ್ರೆಯಲ್ಲಿ 40 ವರ್ಷದೊಳಗಿನ ಸುಮಾರು ಮೂವರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೂವರು ಕೊರೊನಾದಿಂದ ಚೇತರಿಸಿಕೊಂಡ ಬಳಿಕ ಅವರಲ್ಲಿ ಮೂಳೆಸವೆತವಾಗುತ್ತಿರುವುದು ಗಮನಕ್ಕೆ ಬಂದಿದೆ.  ಈ ಕುರಿತು ಮಾಹಿತಿ ನೀಡಿರುವ ಮಾಹಿಮ್ ನ ಹಿಂದುಜಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸಂಜಯ್ ಅಗರವಾಲ್, "ಈ ಮೂವರ ಫೀಮರ್ ಬೊನ್ (ತೊಡೆಯ ಮೇಲ್ಭಾಗದ ಮೂಳೆ)ನಲ್ಲಿ ನೋವಿತ್ತು. ಮೂವರು ರೋಗಿಗಳು ವೈದ್ಯರಾಗಿರುವ ಕಾರಣ ಅವರು ಲಕ್ಷಣಗಳನ್ನು ತುಂಬಾ ಬೇಗನೆ ತಿಳಿದುಕೊಂಡಿದ್ದಾರೆ ಮತ್ತು ಕೂಡಲೇ ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಧಾವಿಸಿದ್ದಾರೆ" ಎಂದು ಹೇಳಿದ್ದಾರೆ. 

ಇದನ್ನೂ ಓದಿ- ಇನ್ಮುಂದೆ ಸರ್ಕಾರಿ ವಿಮಾ ಕಂಪನಿಗಳೂ ಕೂಡ ಖಾಸಗಿಯಾಗಲಿವೆ! ನಿಯಮ ಬದಲಾವಣೆಗೆ ಕೇಂದ್ರ ಸರ್ಕಾರದ ಸಿದ್ಧ

ಕಾರ್ಟಿಕೋಸ್ಟೆರಾಯ್ಡ್ ಕಾರಣ ಈ ಪ್ರಕರಣಗಳು ಬೆಳಕಿಗೆ ಬಂದಿವೆ
ಈ ಕಾಯಿಲೆಗೆ ಸಂಬಂಧಿಸಿದಂತೆ ಅಗರವಾಲ್ ಅವರ ಸಂಶೋಧನಾ ವರದಿ 'ಅವೆಸ್ಕ್ಯುಲರ್ ನೆಕ್ರೋಸಿಸ್ ಎ ಪಾರ್ಟ್ ಆಫ್ ಲಾಂಗ್ ಕೊವಿಡ್-19' ಮೆಡಿಕಲ್ ಜರ್ನಲ್ ಆಗಿರುವ 'BMJ Case Studies'ನಲ್ಲಿ ಪ್ರಕಟಗೊಂಡಿದೆ.  ಈ ವರದಿಯಲ್ಲಿ ಅವರು, ಕೊವಿಡ್ 19 ಪ್ರಕರಣಗಳಲ್ಲಿ ಜೀವ ರಕ್ಷಕ ಕೆಲಸ ಮಾಡುವ ಕಾರ್ಟಿಕೋಸ್ಟೆರಾಯ್ಡ್ ಅತಿಯಾದ ಬಳಕೆ ಮಾಡಲಾಗಿರುವ ಕಾರಣ 'AVN' ಪ್ರಕರಣಗಳಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ವರದಿಯ ಪ್ರಕಾರ ಇತರ ಕೆಲವು ಮೂಳೆ ತಜ್ಞರು ಸಹ ಕೋವಿಡ್ ನಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಇಂತಹ ಒಂದು ಅಥವಾ ಎರಡು ಪ್ರಕರಣಗಳನ್ನು ಗಮನಿಸಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ- RSS Chief On Lynching: ಲಿಂಚಿಂಗ್ ಮಾಡುವವರು ಹಿಂದುತ್ವದ ವಿರೋಧಿಗಳು

ಇನ್ನೊಂದೆಡೆ ಈ ಕುರಿತು ಮಾಹಿತಿ ನೀಡಿರುವ ಸಿವಿಲ್ ಆಸ್ಪತ್ರೆಯ ವೈದ್ಯರೊಬ್ಬರು, 'ದೀರ್ಘಕಾಲದವರೆಗೆ ಕೋವಿಡ್ -19 (Covid-19) ನಿಂದ ಬಳಲುತ್ತಿರುವ ಮತ್ತು ಸ್ಟೀರಾಯ್ಡ್ಗಳ ಅಗತ್ಯವಿರುವ ರೋಗಿಗಳ ಪಾಲಿಗೆ ಇದು ತೀರಾ ಕಳವಳಕಾರಿ ಸಂಗತಿಯಾಗಿದೆ' ಎಂದಿದ್ದಾರೆ.  ಅವಾಸ್ಕುಲರ್ ನೆಕ್ರೋಸಿಸ್ ಪ್ರಕರಣಗಳ ಬಗ್ಗೆ ನಿಗಾ ವಹಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ಕಾರ್ಯಪಡೆಯ ಸದಸ್ಯ ಡಾ.ರಾಹುಲ್ ಪಂಡಿತ್ ಹೇಳಿದ್ದಾರೆ.  'ಒಂದು ಅಥವಾ ಎರಡು ತಿಂಗಳೊಳಗೆ ನಾವು ಇಂತಹ ಪ್ರಕರಣಗಳನ್ನು ಎದುರಿಸಬಹುದು ಏಕೆಂದರೆ AVN ಸಾಮಾನ್ಯವಾಗಿ ಐದು ರಿಂದ ಆರು ತಿಂಗಳ ಸ್ಟೀರಾಯ್ಡ್ ಬಳಕೆಯ ನಂತರ ಸಂಭವಿಸುತ್ತದೆ. ಕೋವಿಡ್‌ನ ಎರಡನೇ ಅಲೆಯ ಸಂದರ್ಭದಲ್ಲಿ ಏಪ್ರಿಲ್ ತಿಂಗಳಲ್ಲಿ ಸ್ಟೀರಾಯ್ಡ್‌ಗಳನ್ನು ಹೆಚ್ಚು ಬಳಸಲಾಗುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ, ಹೆಚ್ಚಿನ ಪ್ರಕರಣಗಳನ್ನು ಶೀಘ್ರದಲ್ಲೇ ಪತ್ತೆಹಚ್ಚಲಾಗುವುದು' ಎಂದು ಪಂಡಿತ್ ಹೇಳಿದ್ದಾರೆ.

ಇದನ್ನೂ ಓದಿ-ಮಾಡಿದ್ದುಣ್ಣೋ ಮಹರಾಯ! ಪಾಕ್ ಬಿಟ್ಟರೆ ಚೀನಾ ಬಳಿಯಿಂದ ಯಾರು ಶಸ್ತ್ರಾಸ್ತ್ರ ಖರೀದಿಸುತ್ತಿಲ್ಲವಂತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News