ನವದೆಹಲಿ: ದೆಹಲಿಯ ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಿಂದ ಎರಡು ವರ್ಷದ ಬಾಲಕಿಯನ್ನು ಅಪಹರಿಸಿದ ಆರೋಪದ ಮೇಲೆ ಓರ್ವ ವ್ಯಕ್ತಿ ಮತ್ತು ಆತನ ಪತ್ನಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಜುಲೈ 12 ರಂದು ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ರೈಲಿಗಾಗಿ ಕಾಯುತ್ತಿದ್ದಾಗ ಮಹಿಳೆಯೊಬ್ಬಳು ತನ್ನ 2 ವರ್ಷದ ಮಗಳನ್ನು ದುಷ್ಕರ್ಮಿಗಳು ಅಪಹರಿಸಿದ ಬಗ್ಗೆ ದೂರು ನೀಡಿದ್ದರು. ಅದರನ್ವಯ ನಿಲ್ದಾಣದಲ್ಲಿ ಅಳವಡಿಸಲಾದ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ಒಬ್ಬ ಮಹಿಳೆ ಮತ್ತು ಓರ್ವ ವ್ಯಕ್ತಿ ಬಾಲಕಿಯನ್ನು ಕಿಡ್ನಾಪ್ ಮಾಡಿರುವುದು ಸ್ಪಷ್ಟವಾಗಿತ್ತು. ಆರೋಪಿ ಹಲವು ವಗಳಿಂದ ನಿಲ್ದಾಣದಲ್ಲಿ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದಾನೆ ಎಂಬ ಮಾಹಿತಿಯ ಮೇರೆಗೆ ತನಿಖೆ ನಡೆಸಿ ಆತನನ್ನು ಬಂಧಿಸಿದ್ದೇವೆ" ಎಂದು ರೈಲ್ವೆ ಡಿಸಿಪಿ ಡಿ.ಕೆ.ಗುಪ್ತಾ ತಿಳಿಸಿದ್ದಾರೆ.


ಆರೋಪಿಯನ್ನು ರಾಜು ಎಂದು ಗುರುತಿಸಲಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಮಹಿಳೆ ತನ್ನ ಪತ್ನಿ ಪಿಂಕಿ ಎಂಬುದನ್ನು ಆತನೇ ಬಾಯ್ಬಿಟ್ಟಿದ್ದಾನೆ. ಅಲ್ಲದೆ, ಮಗುವನ್ನು ಗಾಜಿಯಾಬಾದ್‌ನಲ್ಲಿರುವ ಆತನ ಅಳಿಯಂದಿರ ಮನೆಯಲ್ಲಿ ಬಚ್ಚಿಡಲಾಗಿತ್ತು. ಸದ್ಯ ಮಗುವನ್ನು ರಕ್ಷಿಸಲಾಗಿದ್ದು, ಯಾವುದೇ ಹಲ್ಲೆ ಕಂಡುಬಂದಿಲ್ಲ ಎಂದು ಗುಪ್ತಾ ವಿವರಿಸಿದ್ದಾರೆ.