Hallmarking : ಮಹಿಳೆಯರೇ ಗಮನಿಸಿ: ಇಂದಿನಿಂದ ಚಿನ್ನದ ಆಭರಣಗಳಿಗೆ `ಹಾಲ್ಮಾರ್ಕ್` ಕಡ್ಡಾಯ!
ವಾರ್ಷಿಕ 40 ಲಕ್ಷ ರೂ.ಗಳವರೆಗೆ ವಹಿವಾಟು ಹೊಂದಿರುವ ಆಭರಣ ತಯಾರಕರಿಗೆ ಕಡ್ಡಾಯ ಹಾಲ್ ಮಾರ್ಕ್
ನವದೆಹಲಿ : ಚಿನ್ನದ ಆಭರಣಗಳಿಗೆ ಕಡ್ಡಾಯ ಹಾಲ್ ಮಾರ್ಕ್ ಹಂತ ಹಂತವಾಗಿ ಜೂನ್ 16 ರಿಂದ ಜಾರಿಗೆ ಬರಲಿದೆ ಮತ್ತು ಆರಂಭದಲ್ಲಿ 256 ಜಿಲ್ಲೆಗಳಲ್ಲಿ ಜಾರಿಗೆ ಬರಲಿದೆ ಎಂದು ಸರ್ಕಾರ ಕೇಂದ್ರ ಸರ್ಕಾರ ತಿಳಿಸಿದೆ.
ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್(Piyush Goyal) ಅವರ ಅಧ್ಯಕ್ಷತೆಯಲ್ಲಿ ಉದ್ಯಮದ ಪಾಲುದಾರರೊಂದಿಗೆ ನಡೆದ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ : 7th Pay Commission : ಸರ್ಕಾರಿ ನೌಕರರ ಮೆಡಿಕಲ್ ಕ್ಲೈಂ ರಿಎಂಬೆಸ್ ಮೆಂಟ್ ಮಿತಿ ಹೆಚ್ಚಳ
2019ರ ನವೆಂಬರ್ ನಲ್ಲಿ, ಜನವರಿ 15, 2021ರಿಂದ ದೇಶಾದ್ಯಂತ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳ ಹಾಲ್ ಮಾರ್ಕ್(Hallmarking) ಅನ್ನು ಕಡ್ಡಾಯಗೊಳಿಸಲಾಗುವುದು ಎಂದು ಸರ್ಕಾರ ಘೋಷಿಸಿತ್ತು. ಆದರೆ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಆಭರಣ ವ್ಯಾಪಾರಿಗಳು ಹೆಚ್ಚಿನ ಸಮಯ ಕೋರಿದ ನಂತರ ಗಡುವನ್ನು ಜೂನ್ 1 ರವರೆಗೆ ಮತ್ತು ನಂತರ ಜೂನ್ 15 ರವರೆಗೆ ನಾಲ್ಕು ತಿಂಗಳವರೆಗೆ ವಿಸ್ತರಿಸಲಾಯಿತು.
ಇದನ್ನೂ ಓದಿ : Ration Card: ಈ ರಾಜ್ಯದಲ್ಲಿ ಪಡಿತರ ಚೀಟಿ ಇಲ್ಲದಿದ್ದರೂ ರೇಷನ್ ನೀಡುತ್ತಿದೆ ಸರ್ಕಾರ
ಚಿನ್ನದ ಆಭರಣಗಳ(Gold Jewellery) ಕಡ್ಡಾಯ ಹಾಲ್ ಮಾರ್ಕ್ ಜೂನ್ 16, 2021 ರಿಂದ ಜಾರಿಗೆ ಬರಲಿದೆ' ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಲೀನಾ ನಂದನ್ ಅವರು ತಿಳಿಸಿದರು. ಇದನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು ಮತ್ತು ಆರಂಭದಲ್ಲಿ ಆಸೈಕಿಂಗ್ ಮಾರ್ಕಿಂಗ್ ಕೇಂದ್ರಗಳನ್ನು ಹೊಂದಿರುವ ದೇಶದ 256 ಜಿಲ್ಲೆಗಳಲ್ಲಿ ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.
ಇದನ್ನೂ ಓದಿ : Petrol price today : ರಾಜ್ಯದ 21 ಜಿಲ್ಲೆಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 99.99ರೂ
ವಾರ್ಷಿಕ 40 ಲಕ್ಷ ರೂ.ಗಳವರೆಗೆ ವಹಿವಾಟು ಹೊಂದಿರುವ ಆಭರಣ ತಯಾರಕರಿಗೆ ಕಡ್ಡಾಯ ಹಾಲ್ ಮಾರ್ಕ್(Hallmarking)ನಿಂದ ವಿನಾಯಿತಿ ನೀಡಲಾಗುವುದು ಎಂದು ಸಭೆಯ ನಂತರ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಜೂನ್ 16ರಿಂದ 256 ಜಿಲ್ಲೆಗಳ ಆಭರಣ ತಯಾರಕರಿಗೆ ಕೇವಲ 14, 18 ಮತ್ತು 22 ಕ್ಯಾರೆಟ್ ಚಿನ್ನದ ಆಭರಣಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ನೀಡಲಾಗುವುದು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.