ಅಗರ್ತಲಾ: ಸತತ ಐದು ಬಾರಿ ಮುಖ್ಯಮಂತ್ರಿಯಾದರೂ ಈವರೆಗೂ ಒಂದು ಬಾರಿಯೂ ಆದಾಯ ತೆರಿಗೆ ಪಾವತಿಸದ 'ಮಾಣಿಕ್ ಸರ್ಕಾರ್' ಎಂಬ ಮ್ಯಾಜಿಕ್ ಸಿಎಂ! ತ್ರಿಪುರಾದ ಸಿಎಂ ಆಗಿರುವ ಮಾಣಿಕ್ ಸರ್ಕಾರ್ ಬಳಿ ಇರುವುದು ಕೇವಲ 3,930 ರೂ.ಗಳು ಮಾತ್ರ ಎಂದರೆ ನಂಬಲು ಸಾಧ್ಯವಾಗುವುದಿಲ್ಲ ಅಲ್ಲವೇ? ಆದರೆ ಇದು ಸತ್ಯ. ಫೆಬ್ರವರಿ ತಿಂಗಳಲ್ಲಿ  ತ್ರಿಪುರಾ ರಾಜ್ಯಕ್ಕೆ ನಡೆಯಲಿರುವ ಚುನಾವಣೆಗೆ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಸಲ್ಲಿಸಿರುವ ನಾಮನಿರ್ದೇಶನ ಪತ್ರದ ಮೂಲಕ ಈ ಮಾಹಿತಿ ಲಭ್ಯವಾಗಿದೆ. 


COMMERCIAL BREAK
SCROLL TO CONTINUE READING

ಎಡಪಕ್ಷ ನಾಯಕರಾದ ಇವರು ತಮ್ಮ ಪೂರ್ಣ ಸಂಬಳವನ್ನು ಸಿಪಿಐ(ಎಂ) ಪಕ್ಷಕ್ಕೆ ದಾನ ಮಾಡುತ್ತಾರೆ. ಅವರು ಪಕ್ಷದಿಂದ ಐದು ಸಾವಿರ ರೂಪಾಯಿಗಳನ್ನು ಜೀವನಾಂಶವಾಗಿ ಪಡೆಯುತ್ತಾರೆ. 69 ವರ್ಷ ವಯಸ್ಸಿನ ನಾಯಕನ ಬಳಿ 1,520 ರೂಪಾಯಿ ನಗದು ಹಣ ಇದ್ದು, 2,410 ರೂಪಾಯಿಯನ್ನು ತಮ್ಮ ಬ್ಯಾಂಕ್ ಖಾತೆಯಲ್ಲಿ ಹೊಂದಿದ್ದಾರೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.


ತ್ರಿಪುರದ ಧನ್ಪುರ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ 'ಮಾಣಿಕ್ ಸರ್ಕಾರ್' ಸೋಮವಾರ (ಜನವರಿ 29) ನಾಮಪತ್ರ ಸಲ್ಲಿಸಿದ್ದಾರೆ. ಅವರಿಗೆ ಯಾವುದೇ ಕೃಷಿ ಅಥವಾ ಮನೆ ನಿರ್ಮಿತ ಭೂಮಿ ಇಲ್ಲ. ಅವರು ಮುಖ್ಯಮಂತ್ರಿಯ ಅಧಿಕೃತ ನಿವಾಸದಲ್ಲಿ ವಾಸಿಸುತ್ತಾರೆ. ಮುಖ್ಯಮಂತ್ರಿಯವರ ಪತ್ನಿ ಪಾಂಚಾಲಿ ಭಟ್ಟಾಚಾರ್ಯ ಅವರು ನಿವೃತ್ತ ಕೇಂದ್ರ ಸರ್ಕಾರಿ ನೌಕರರಾಗಿದ್ದಾರೆ. ಅವರು ಎರಡು ಬ್ಯಾಂಕ್ ಖಾತೆಗಳಲ್ಲಿ, 1,24,101 ಮತ್ತು 86,473 ರೂ.ಗಳನ್ನು ಹೊಂದಿದ್ದಾರೆ.