Coronavirus ನಿಂದ ಕಾಪಾಡಲು ಆಸ್ಪತ್ರೆಗೆ ಕರೆದೊಯ್ದರೂ ಕೂಡ, ಕ್ವಾರಂಟೀನ್ ನಲ್ಲಿ ಒಂದುಗೂಡಿ ನಮಾಜ್..!
ಕ್ವಾರಂಟೀನ್ ಗಾಗಿ ಆಸ್ಪತ್ರೆಗೆ ಕರೆದೊಯ್ದರೂ ಕೂಡ ಪರಸ್ಪರ ಸನೀಹದಲ್ಲಿ ನಿಂತು ಇವರು ನಮಾಜ್ ಪಠಿಸಿದ್ದಾರೆ.
ಹೈದ್ರಾಬಾದ್: ಕೊರೊನಾ ವೈರಸ್ ಹಿನ್ನೆಲೆ ದೇಶ-ವಿದೇಶಗಳಲ್ಲಿ ಭಾರಿ ಬಿಕ್ಕಟ್ಟು ಎದುರಾಗಿದೆ. ಈ ಮಹಾಮಾರಿಗೆ ದೇಶಾದ್ಯಂತ ಇದುವರೆಗೆ ಸುಮಾರು 50 ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದರೆ, ಸೋಂಕಿತರ ಸಂಖ್ಯೆ 2000ಕ್ಕೆ ತಲುಪಿದೆ. ದೆಹಾದ್ಯಂತ ಹಲವು ಜನರಿಗೆ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆ ಕ್ವಾರಂಟೀನ್ ಗೆ ಕಳುಹಿಸಲಾಗಿದೆ. ಇಂತಹುದರಲ್ಲಿ ತೆಲಂಗಾಣದಲ್ಲಿ ಕ್ವಾರಂಟೀನ್ ಗೆ ಕಳುಹಿಸಲಾಗಿರುವ ಕೆಲವರು ಕ್ವಾರಂಟೀನ್ ನಲ್ಲಿಯೂ ಕೂಡ ಅಕ್ಕಪಕ್ಕದಲ್ಲಿ ನಿಂತು ನಮಾಜ್ ಪಠಿಸಿದ್ದಾರೆ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರ್ಕಾರ ಕಠಿಣ ನಿರ್ದೇಶನಗಳನ್ನು ನೀಡಿದೆ.
ಒಂದು ವೇಳೆ ಯಾವುದೇ ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿ ಬಂದರೆ ಅಥವಾ ಯಾತ್ರೆ ಕೈಗೊಂಡರೆ ಅಂತಹ ಜನರನ್ನು ಐಸೋಲೆಶನ್ ಮಾಡಲು ನಿರ್ದೇಶನಗಳನ್ನು ನೀಡಲಾಗಿದೆ. ಇಲ್ಲಿನ ಗಂಧಿ ಆಸ್ಪತ್ರೆಯಲ್ಲಿಯೂ ಕೂಡ ಹಲವು ಜನರನ್ನು ಕ್ವಾರಂಟೀನ್ ಗೆ ಕಳುಹಿಸಲಾಗಿದೆ. ಕ್ವಾರಂಟೀನ್ ರೂಮ್ ನಲ್ಲಿ ಎಲ್ಲರ ಬೆಡ್ ಗಳನ್ನು ನಿಶ್ಚಿತ ಅಂತರದಲ್ಲಿ ಇರಿಸಲಾಗಿದೆ. ಕ್ವಾರಂಟೀನ್ ರೂಮ್ ನಲ್ಲಿ ಪರಸ್ಪರ ಹತ್ತಿರದಲ್ಲಿ ಕುಳಿತು ಮಾತನಾಡುವ ಅಥವಾ ಭೇಟಿಯಾಗುವ ಅವಕಾಶ ಇರುವುದಿಲ್ಲ. ಕ್ವಾರಂಟೀನ್ ಅವಧಿ ಸುಮಾರು 14 ದಿನಗಳ ಅವಧಿಯದ್ದಾಗಿರುತ್ತದೆ.
ಈ ಮಧ್ಯೆಯೇ ಆಸ್ಪತ್ರೆಯ ಕ್ವಾರಂಟೀನ್ ನಲ್ಲಿರುವ ಜನರು ಒಂದುಗೂಡಿ ನಮಾಜ್ ಪಠಿಸಲು ಆರಂಭಿಸಿದ್ದಾರೆ. ಈ ನಮಾಜ್ ವೇಳೆ ಕ್ಲಿಕ್ಕಿಸಲಾಗಿರುವ ಭಾವಚಿತ್ರಗಳು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಲಾರಂಭಿಸಿವೆ. ಅಕ್ಕ-ಪಕ್ಕದಲ್ಲಿ ನಿಂತು ನಮಾಜ್ ಮಾಡುತ್ತಿರುವ ಇವರ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಮುನ್ನೆಚ್ಚರಿಕೆ ನೀಡಿದರೂ ಕೂಡ ಇವರು ಯಾವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಇವರು ಪರಸ್ಪರ ಹತ್ತಿರದಲ್ಲಿ ನಿಂತು ನಮಾಜ್ ಓದಿದ್ದಾರೆ.
ಸದ್ಯ ವಿಶ್ವಾದ್ಯಂತ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 10 ಲಕ್ಷದ ಗಡಿ ತಲುಪಿದೆ. ಅತ್ತ ಇನ್ನೊಂದೆಡೆ ಈ ಮಾರಕ ಕಾಯಿಲೆಗೆ ವಿಶ್ವಾದ್ಯಂತ ಮರಣ ಹೊಂದಿದವರ ಸಂಖ್ಯೆ 50 ಸಾವಿರಕ್ಕೆ ತಲುಪಿದೆ. ಅಮೇರಿಕಾ, ಫ್ರಾನ್ಸ್, ಇಟಲಿ, ಸ್ಪೇನ್ ಸೇರಿದಂತ ವಿಶ್ವದ ಬಹುತೇಕ ದೇಶಗಳಲ್ಲಿ ಕೊರೊನಾ ವೈರಸ್ ತನ್ನ ಆತಂಕ ಮುಂದುವರೆಸಿದೆ.