ಮಹಾರಾಷ್ಟ್ರದ ಕಛೇರಿಗಳಲ್ಲಿ ಮರಾಠಿ ಕಡ್ಡಾಯ!
ಮಹಾರಾಷ್ಟ್ರ: ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕಛೇರಿಗಳಲ್ಲಿ ಮರಾಠಿ ಭಾಷೆಯನ್ನು ಕಡ್ಡಾಯವಾಗಿ ಬಳಸುವಂತೆ ದೇವೇಂದ್ರ ಪಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಅಧಿಸೂಚನೆ ಅನ್ವಯ ಕೇಂದ್ರ ಸರ್ಕಾರದ ಸೀಮಿತಕ್ಕೆ ಒಳಪಡುವ ಬ್ಯಾಂಕ್ಗಳು, ಅಂಚೆ ಕಛೇರಿಗಳು, ರೈಲ್ವೇ ಇಲಾಖೆ(ಮಹಾರಾಷ್ಟ್ರದ ರೈಲ್ವೇ), ದೂರವಾಣಿ ಕೇಂದ್ರ ಸೇರಿದಂತೆ ಎಲ್ಲಾ ಕಛೇರಿಗಳಲ್ಲೂ ಕೇಂದ್ರ ಸರ್ಕಾರದ "ತ್ರಿ-ಭಾಷಾ" ಸೂತ್ರ(ಪ್ರತಿ ರಾಜ್ಯದಲ್ಲೂ ಹಿಂದಿ, ಇಂಗ್ಲಿಷ್ ಜೊತೆಗೆ ಪ್ರಾದೇಶಿಕ ಭಾಷೆ ಬಳಸುವುದು) ಅನುಸರಿಸುವಂತೆ ತಿಳಿಸಲಾಗಿದೆ.