ಅಲಹಾಬಾದ್ ಹೆಸರು ಬದಲಿಸಿದ ಯೋಗಿ! ಜಸ್ಟಿಸ್ ಕಟ್ಜು ನೀಡಿದ್ರು ಹೊಸ ಶಾಕಿಂಗ್ ಲಿಸ್ಟ್ !
ಅಲಹಾಬಾದ್ ಅನ್ನು ಶೀಘ್ರದಲ್ಲೇ ಪ್ರಯಾಗ್ರಾಜ್ ಎಂದು ಮರುನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ತಿಳಿಸಿದ್ದಾರೆ.
ನವದೆಹಲಿ: ಅಲಹಾಬಾದ್ ಅನ್ನು ಶೀಘ್ರದಲ್ಲೇ ಪ್ರಯಾಗ್ರಾಜ್ ಎಂದು ಮರುನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ತಿಳಿಸಿದ್ದಾರೆ.
ಈ ಬೆನ್ನಲ್ಲೇ ಈ ನಡೆಯನ್ನು ವ್ಯಂಗವಾಡಿರುವ ಜಸ್ಟಿಸ್ ಮಾರ್ಕಂಡೇಯ ಕಟ್ಜು ಉತ್ತರ ಪ್ರದೇಶದಲ್ಲಿ ಮರುನಾಮಕರಣ ಮಾಡಬಹುದಾದ ಇನ್ನು ಹೆಚ್ಚಿನ ನಗರಗಳ ಪಟ್ಟಿಯನ್ನು ಅವರು ನೀಡಿದ್ದಾರೆ. ಈ ಕುರಿತಾಗಿ ಪ್ರತಿಕ್ರಿಯಿಸಿರುವ "ಅವರು ಅಲಹಾಬಾದ್ ನ್ನು ಪ್ರಯಾಗರಾಜ್ ಎಂದು ಮರುನಾಮಕರಣ ಮಾಡಿದ್ದಕ್ಕೆ ಅಭಿನಂದನೆಗಳು, ಆದರೆ ಖಂಡಿತವಾಗಿ ಅದು ಸಾಕಾಗುವುದಿಲ್ಲ, ಯುಪಿ ನಗರಗಳ ಹೆಸರಿನ ಮುಂದಿನ ಬದಲಾವಣೆಗಳಿಗೆ ಈ ಬಾಬರ್ ಕಿ ಔಲಾದ್ಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ನಾನು ಶಿಫಾರಸು ಮಾಡುತ್ತೇವೆ "ಎಂದು ಕಟ್ಜು ಹೇಳಿದರು.
1. ಅಲೀಗಢ್ -ಅಶ್ವತಾನನಗರ
2. ಆಗ್ರಾ -ಅಗಶ್ತ್ಯನಗರ
3. ಘಜಿಪುರ್-ಗಣೇಶ್ ಪುರ
4. ಶಹಜಹನ್ ಪುರ್ -ಸುಗ್ರೀಪುರ
5. ಮುಜಫರ್ನಗರ- ಮುರಳಿ ಮನೋಹರ್ ನಗರ
6. ಅಝಮ್ಗಢ-ಅಲ್ಕಾನಂದಪುರ್
7. ಹಮೀರ್ಪುರ್ -ಹಸ್ತಿನಾಪುರ
8. ಲಕ್ನೋ- ಲಕ್ಷ್ಮಣ್ಪುರ
9. ಬುಲಂದ್ ಶಹರ್ - ಬಜರಂಗಬಲಿಪುರಕ್ಕೆ
10. ಫೈಝಾಬಾದ್ - ನರೇಂದ್ರಮೋದಿಪುರ
11. ಫತೇಪುರ್- ಅಮಿತ್ ಶಾ ನಗರ
12. ಘಜಿಯಾಬಾದ್- ಗಜೇಂದ್ರ ನಗರಕ್ಕೆ
13. ಫಿರೋಜಾಬಾದ್- ದ್ರೋಣಾಚಾರ್ಯನಗರ್
14. ಫರುಕಾಬಾದ್- ಅಂಗಾದ್ಪುರ್
15.ಗಜಿಯಾಬಾದ್- ಘಟೋಟ್ಕಾಜನಗರ
16. ಸುಲ್ತಾನ್ಪುರ್- ಸರಸ್ವತಿನಗರ
17. ಮೊರಾದಾಬಾದ್- ಮಂಕಿಬಾತ್ ನಗರ
18. ಮಿರ್ಜಾಪುರಕ್ಕೆ- ಮೀರಬಾಯಿ ನಗರ
ಮತ್ತು ಈ ಕೃತ್ಯಕ್ಕಾಗಿ ಅರ್ಜಿದಾರನು ಶಾಶ್ವತವಾಗಿ ಪ್ರಾರ್ಥಿಸುತ್ತಾನೆ ಎಂದು ಜಸ್ಟಿಸ್ ಮಾರ್ಕಂಡೇಯ ಕಟ್ಜು ವ್ಯಂಗವಾಡಿದ್ದಾರೆ.